ಕೌಲಾಲಂಪುರ್: ಜುಲೈ 24ರಂದು ಉಡಾವಣೆ ಮಾಡಲಾಗಿದ್ದ ಚೀನಾದ ರಾಕೆಟ್ ಶನಿವಾರ ಶಿಥಿಲಗೊಂಡು ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ. ರಾಕೆಟ್ ಹಿಂದೂ ಮಹಾಸಾಗರಕ್ಕೆ ಬೀಳುವುದಕ್ಕೂ ಮೊದಲು ಆಕಾಶದಲ್ಲಿ ಬೆಳಗಿರುವ ವೀಡಿಯೋ ವೈರಲ್ ಆಗುತ್ತಿದೆ.
ಲಾಂಗ್ ಮಾರ್ಚ್-5ಬಿ ವೈ3 ರಾಕೆಟ್ ಅನ್ನು ಚೀನಾ ಜುಲೈ 24ರಂದು ಉಡಾವಣೆ ಮಾಡಿತ್ತು. ಆದರೆ ಅದು ಶನಿವಾರ ಶಿಥಿಲಗೊಂಡು ಮತ್ತೆ ಭೂಮಿಗೆ ಹಿಂತಿರುಗಿದೆ. ಮಲೇಷ್ಯಾದ ಕುಚಿಂಗ್ ನಗರದ ಆಕಾಶದಲ್ಲಿ ರಾಕೆಟ್ ಹೊತ್ತಿ ಉರಿಯುವುದು ಕಂಡುಬಂದಿದೆ. ಇದನ್ನೂ ಓದಿ: ಬುಲೆಟ್ ಪ್ರೂಫ್ ಕಾರು ಖರೀದಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್
Advertisement
meteor spotted in kuching! #jalanbako 31/7/2022 pic.twitter.com/ff8b2zI2sw
— Nazri sulaiman (@nazriacai) July 30, 2022
Advertisement
ಲಾಂಗ್ ಮಾರ್ಚ್-5 ರಾಕೆಟ್ ಶಿಥಿಲಗೊಂಡು ಶನಿವಾರ ಮಧ್ಯಾಹ್ನ 12:45ರ ವೇಳೆ ಹಿಂದೂ ಮಹಾಸಾಗರದಲ್ಲಿ ಬಿದ್ದಿರುವ ಬಗ್ಗೆ ಅಮೆರಿಕ ಬಾಹ್ಯಾಕಾಶ ಕಮಾಂಡ್ ದೃಢಪಡಿಸಿದೆ. ಇದನ್ನೂ ಓದಿ: Commonwealth Games: ಭಾರತಕ್ಕೆ ಮತ್ತೊಂದು ಚಿನ್ನ ತಂದ ಜೆರೆಮಿ ಚಮತ್ಕಾರ
Advertisement
ಇದಕ್ಕೂ ಮೊದಲು ನ್ಯಾಶನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ರಾಕೆಟ್‌ನ ಅವಶೇಷಗಳು ಎಲ್ಲಿ ಬಿದ್ದಿದೆ ಎಂಬ ನಿರ್ದಿಷ್ಟ ಮಾಹಿತಿಯನ್ನು ಚೀನಾ ನೀಡಿಲ್ಲ ಎಂದು ಹೇಳಿತ್ತು.