ನವದೆಹಲಿ: ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ ನೀಡುತ್ತಿರುವ ಚೀನಾ ಫೋನುಗಳಿಗೆ ಮನಸೋತ ಭಾರತೀಯರು ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 51 ಸಾವಿರ ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದಾರೆ.
ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯನ್ನು ಭಾರತ ಹೊಂದಿದ್ದು, ವಿಶ್ವದ ಮೊಬೈಲ್ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ ಕೌಂಟರ್ ಪಾಯಿಂಟ್ ಪ್ರಕಾರ 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತೀಯರು ಚೀನಾ ಕಂಪನಿಯ ಸ್ಮಾರ್ಟ್ ಫೋನ್‍ಗಳಿಗೆ ಬರೋಬ್ಬರಿ 51 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.
Advertisement
Advertisement
ಕ್ಸಿಯೋಮಿ, ವಿವೋ, ಒಪ್ಪೋ, ಹುವಾವೇ, ಹೊನರ್, ಲೆನೊವೊ ಮೊಟೊರೊಲಾ ಮತ್ತು ಒನ್ ಪ್ಲಸ್ ಕಂಪನಿಯ ಸ್ಮಾರ್ಟ್ ಫೋನ್‍ಗಳು ಭಾರತದಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ. ಅಲ್ಲದೇ ಮುಂಬರುವ ವರ್ಷಗಳಲ್ಲಿ ಚೀನಾ ಕಂಪನಿಯ ಸ್ಮಾರ್ಟ್ ಫೋನ್‍ಗಳು ಭಾರತದಲ್ಲಿ ತಮ್ಮ ಪಾರುಪತ್ಯ ಸಾಧಿಸುತ್ತವೆ ವಿಶ್ಲೇಷಣೆ ಕೇಳಿ ಬಂದಿದೆ.
Advertisement
2016-17ರ ಆರ್ಥಿಕ ವರ್ಷದಲ್ಲಿ ಚೀನಾ ಸ್ಮಾರ್ಟ್ ಫೋನ್‍ಗಳಿಗೆ ಭಾರತೀಯರು 26,262.4 ಕೋಟಿ ರೂಪಾಯಿ ವ್ಯಯಿಸಿದ್ದರೆ, 2017-18ರ ಅವಧಿಯಲ್ಲಿ ಒಟ್ಟು 51,722.1 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ ಒಂದೇ ವರ್ಷದಲ್ಲಿ ಮಾರಾಟದ ಪ್ರಕ್ರಿಯೆಯನ್ನು ಚೀನಾ ಸ್ಮಾರ್ಟ್ ಫೋನ್ ಗಳು ದ್ವಿಗುಣಮಾಡಿಕೊಂಡಿವೆ. ಅಲ್ಲದೇ ಚೀನಾ ಸ್ಮಾರ್ಟ್ ಫೋನ್‍ಗಳ ಆರ್ಭಟದಿಂದಾಗಿ ಭಾರತೀಯ ಸ್ಮಾರ್ಟ್ ಫೋನ್ ಕಂಪನಿಗಳು ನಷ್ಟದ ಹಾದಿಯನ್ನು ತುಳಿಯುತ್ತಿವೆ ಎನ್ನುವ ಬಗ್ಗೆಯೂ ಸಹ ವರದಿಯಾಗಿದೆ.
Advertisement
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾದ ಯೋಜನೆಯಲ್ಲಿ ಚೀನಾದ ಹಲವು ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು, ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸಹ ನಿರ್ಮಿಸುತ್ತಿವೆ. ಈಗಾಗಲೇ ವಿವೋ ಹಾಗೂ ಒಪ್ಪೋ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಘಟಕಗಳು ಪ್ರಾರಂಭವಾಗಿದೆ. ಉತ್ತರಪ್ರದೇಶದ ನೋಯ್ಡಾದಲ್ಲಿರುವ ವಿವೋ ನಿರ್ಮಾಣ ಘಟಕವೊಂದರಲ್ಲೇ ಸುಮಾರು 5 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ.
ಯಾವ ಫೋನ್ ಎಷ್ಟು ಆದಾಯ ಗಳಿಸಿದೆ?
ಕ್ಸಿಯೋಮಿ ಟೆಕ್ನಾಲಜಿಯು 22,947.3 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಪ್ರಥಮ ಸ್ಥಾನಗಳಿಸಿದ್ದರೆ, ಎರಡನೇ ಸ್ಥಾನದಲ್ಲಿ ಒಪ್ಪೋ ಕಂಪನಿಯು 11,994.3 ಕೋಟಿ ರೂ. ವಹಿವಾಟು ನಡೆಸಿದೆ. ಇದಲ್ಲದೇ ವಿವೋ 11,179.3 ಕೋಟಿ ರೂ. ವ್ಯಾಪಾರ ನಡೆಸಿದರೆ, ಹುವಾವೇ 5,601.3 ಕೋಟಿ ರೂ. ವಹಿವಾಟು ನಡೆಸಿದೆ.
ದಕ್ಷಿಣ ಕೊರಿಯಾದ ಸ್ಯಾಮಸಂಗ್ 2016-17ರ ಸಾಲಿನಲ್ಲಿ 34,261 ಕೋಟಿ ರೂ. ಹಾಗೂ ಲೆನೆವೊ ಮೊಟೊರೊಲಾ 11,950 ಕೋಟಿ ರೂ. ವಹಿವಾಟನ್ನು ಭಾರತದಲ್ಲಿ ನಡೆಸಿತ್ತು. 2018ನೇ ಆರ್ಥಿಕ ಸಾಲಿನಲ್ಲಿ ಆ್ಯಪಲ್ 13,097 ಕೋಟಿ ರೂ. ವಹಿವಾಟನ್ನು ಭಾರತದ ಮಾರುಕಟ್ಟೆಯಲ್ಲಿ ನಡೆಸಿದೆ. ಆದರೆ 2018ರ ಆರ್ಥಿಕ ಸಾಲಿನ ಸ್ಯಾಮ್‍ಸಂಗ್ ಹಾಗೂ ಲೆನೆವೊ ಕಂಪನಿಗಳ ಮಾಹಿತಿಗಳು ಲಭ್ಯವಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv