InternationalLatestMain Post

ಪಾಕಿಸ್ತಾನದಲ್ಲಿ ಗುಂಡಿನ ದಾಳಿ -ಚೀನಾ ಪ್ರಜೆ ಬಲಿ

ಇಸ್ಲಾಮಾಬಾದ್: ಗುಂಡಿನ ದಾಳಿಗೆ ಪಾಕಿಸ್ತಾನದ (Pakistan) ಕರಾಚಿಯಲ್ಲಿ ಚೀನಾದ (China) ಪ್ರಜೆಯೊಬ್ಬ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಕರಾಚಿಯ (Karachi) ಸದ್ದಾರ್ ಪ್ರದೇಶದಲ್ಲಿ ದಂತ ಚಿಕಿತ್ಸಾಲಯದಲ್ಲಿ ಅಪರಿಚಿತನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಈ ಮೂವರನ್ನು ಚೀನಾ ಪ್ರಜೆಗಳೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಪಿಎಫ್‌ಐ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ: ಅಸಾದುದ್ದೀನ್‌ ಓವೈಸಿ

crime

ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಟ್ವೀಟ್ ಮಾಡಿ ದಾಳಿಯನ್ನು ಖಂಡಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಹೊತ್ತಲ್ಲೇ ಡಿಕೆಶಿಗೆ CBI ಶಾಕ್ – ಆಸ್ತಿ ಮೌಲ್ಯಮಾಪನ

Live Tv

Leave a Reply

Your email address will not be published. Required fields are marked *

Back to top button