ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ವಿವಿಧ ಬ್ಲಾಗರ್‍ಗಳು ತಮ್ಮ ಫಾಲೋವರ್ಸ್‍ಗಳಿಗಾಗಿ ಮೇಕಪ್, ಫ್ಯಾಶನ್, ಅಡುಗೆ ಮುಂತಾದವುಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್‍ಗಳಲ್ಲಿ ಹರಿಯಬಿಡುವುದು ಸಾಮಾನ್ಯ.
ಅಂತೆಯೇ ಚೀನಾದ ಹೆಲ್ತ್ ವ್ಲಾಗರ್(ವಿಡಿಯೋ ಬ್ಲಾಗರ್)ವೊಬ್ಬರು ಲೈವ್ ನಲ್ಲಿ ಹೆಲ್ತ್ ಟಿಪ್ಸ್ ಗಳನ್ನು ನೀಡುತ್ತಾ ಅಲೋವೆರಾ ಅಂತಾ ಅದನ್ನೇ ಹೋಲುವ ಅಗೇವ್ ಎಂಬ ಗಿಡವನ್ನು ತಿಂದು ಅಸ್ವಸ್ಥರಾದ ಬಗ್ಗೆ ವರದಿಯಾಗಿದೆ. ಚೀನಾ ಮೂಲದ ಝಾಂಗ್ ಎಂಬಾಕೆ ವಿಷಕಾರಿ ಸಸ್ಯವೊಂದನ್ನು ತಿಂದು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement
Advertisement
ಏನಿದು ಘಟನೆ?: ಝಾಂಗ್ ತನ್ನ ಫೋಲೋವರ್ಸ್‍ಗಳಿಗೆ ಲೈವ್ ಸ್ಟ್ರೀಮ್‍ನಲ್ಲಿ ಅಲೋವೆರಾದಿಂದ ಆರೋಗ್ಯಕ್ಕೆ ಇರುವ ಲಾಭಗಳ ಬಗ್ಗೆ ಹೇಳುತ್ತಿದ್ದರು. ಅಲೋವೆರಾ ತಿಂದರೆ ಏನು ಪ್ರಯೋಜನ ಎಂಬುವುದರ ಬಗ್ಗೆ ಸವಿವರವಾಗಿ ಹೇಳುತ್ತಾ ಅಲೋವೆರಾ ಅಂತಾ ತಿಳಿದು ಅದನ್ನೇ ಹೋಲುವ ಬೇರೊಂದು ಗಿಡವನ್ನು ತಿಂದಿದ್ದಾರೆ. ಮೊದಲು ತಿಂದಾಗ ಅವರು ಆಹಾ…. ಇದು ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಆದ್ರೆ ಸ್ವಲ್ಪ ಸಮಯದಲ್ಲೇ ಇದು ಕಹಿಯಾಗಿದೆ ಎಂದು ಹೇಳಿದ್ದು, ಆಕೆಯ ಗಂಟಲಿನಲ್ಲಿ ಏನೋ ಸಮಸ್ಯೆ ಆಗ್ತಿದೆ ಅಂತಾ ಮನದಟ್ಟಾಗಿದೆ. ಬಾಯಿ ಮರಗಟ್ಟಿದಂತಾಗಿದ್ದು, ಗಂಟಲಿನಲ್ಲಿ ಉರಿತ ಉಂಟಾಗಿದೆ.
Advertisement
ತಕ್ಷಣವೇ ಝಾಂಗ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಆಕೆ ತುಂಬಾ ಅಪಾಯಕಾರಿ ಸಸ್ಯವನ್ನು ತಿಂದಿದ್ದಾರೆ ಎಂದು ಆಸ್ಪತ್ರೆಯವರು ದೃಢಪಡಿಸಿರುವುದಾಗಿ ವರದಿಯಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.
Advertisement
ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಕಾರ ಅಗೇವ್ ಸಸ್ಯದಲ್ಲಿ ಕ್ಯಾಲ್ಶಿಯಂ ಆಕ್ಸಿಲೇಟ್ ರಾಫೈಡ್ಸ್ ಹಾಗೂ ಇನ್ನೂ ಕೆಲವು ಕಿರಿಕಿರಿ ಉಂಟು ಮಾಡುವ ತೈಲಗಳು ಇರುತ್ತವೆ ಎನ್ನಲಾಗಿದೆ.