ಬೀಜಿಂಗ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಬೆಳ್ಳಿ ಪದಕ ಗೆದ್ದಿದ್ದ ಚೀನಾದ ಜಿಮ್ನಾಸ್ಟ್ ಇದೀಗ ರೆಸ್ಟೋರೆಂಟ್ ಒಂದರಲ್ಲಿ ವೇಯ್ಟರ್ ಕೆಲಸ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.
18 ವರ್ಷದ ಜಿಮ್ನಾಸ್ಟ್ ಜೌ ಯಾಕಿನ್ (Zhou Yaqin) ಬೆಳ್ಳಿ ಪದಕ ಗೆದ್ದು ಪೋಡಿಯಂ ಮೇಲೆ ಅಮಾಯಕಳಂತೆ ಪೋಸ್ ನೀಡಿದ್ದರು. ಹೀಗೆ ಪದಕ ಗೆದ್ದು ಸ್ವದೇಶಕ್ಕೆ ಮರಳಿದ ಮರುದಿನವೇ ಜೌ ಯಾಕಿನ್, ತಮ್ಮ ತಂದೆಯ ರೆಸ್ಟೋರೆಂಟ್‌ನಲ್ಲಿ ಊಟ ಬಡಿಸುತ್ತಾ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಗಡ್ಡ ಬೆಳೆಸಲಿಲ್ಲ ಅಂತಾ 280 ಭದ್ರತಾ ಸಿಬ್ಬಂದಿ ವಜಾಗೊಳಿಸಿದ ತಾಲಿಬಾನ್
Advertisement
Advertisement
ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ನಗರದಲ್ಲಿ ರೆಸ್ಟೋರೆಂಟ್ ಇದೆ. ತನ್ನ ತಂದೆಯದ್ದೇ ಆದ ರೆಸ್ಟೋರೆಂಟ್‌ನಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಕೆಲಸ ಮಾಡಿಕೊಂಡಿದ್ದಾರೆ.
Advertisement
ಆ ಮುದ್ದಾದ ಚೈನೀಸ್ ಜಿಮ್ನಾಸ್ಟ್ ಜೌ ಯಾಕಿನ್ ನೆನಪಿದೆಯೇ? ಒಲಿಂಪಿಕ್ ಬೆಳ್ಳಿ ಪದಕ ಗೆದ್ದ ನಂತರ, ಅವರು ರಜೆಗಾಗಿ ತನ್ನ ಪೋಷಕರ ಮನೆಗೆ ಮರಳಿದ್ದಾರೆ. ಸಹಜವಾಗಿ, ನೀವು ಅದನ್ನು ರಜೆ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಆಕೆಯ ಪೋಷಕರು ನಡೆಸುತ್ತಿರುವ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಲು ಅವಳು ಸಹಾಯ ಮಾಡಬೇಕಾಗಿದೆ ಎಂದು ಎಕ್ಸ್ನಲ್ಲಿ ವೀಡಿಯೋ ಹಂಚಿಕೊಂಡು ಪೋಸ್ಟ್ ಹಾಕಲಾಗಿದೆ. ಇದನ್ನೂ ಓದಿ: ಯುಎಸ್ ಕಾರು ಅಪಘಾತ; ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು
Advertisement
ಕಷ್ಟಪಟ್ಟು ದುಡಿದು ಜೀವನ ನಡೆಸುವುದು ಉದಾತ್ತ ಕೆಲಸ. ಆಕೆ ಬಗ್ಗೆ ಹೆಮ್ಮೆ ಪಡಬೇಕು. ಆಕೆಯ ಪದಕದ ಕ್ಷಣವು ಇಂಟರ್ನೆಟ್ ಜಗತ್ತಿನಲ್ಲಿ ಅಮರವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.