– ಕಾಫಿನಾಡ ಹುಡುಗ, ಚೀನಾ ಹುಡುಗಿ, ಆಸ್ಟ್ರೇಲಿಯಾದಲ್ಲಿ ಲವ್, ಭಾರತದಲ್ಲಿ ಮದುವೆ!
ಚಿಕ್ಕಮಗಳೂರು: ಪ್ರೇಮ (Love) ದೇಶ, ಭಾಷೆ, ಗಡಿ ಎಲ್ಲದ್ದನ್ನೂ ಮೀರಿದ್ದು.. ಅದಕ್ಕೆ ಸಾಕ್ಷಿ ಎಂಬಂತೆ ನಗರದ ಹೌಸಿಂಗ್ ಬೋರ್ಡಿನ ಯುವಕನಿಗೆ ಚೀನಾದ (China) ಯುವತಿಯೊಬ್ಬಳು ಜೋಡಿಯಾಗಿದ್ದಾಳೆ. ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಯುವಕ ರೂಪಕ್ ಚೀನಾ ಮೂಲದ ಜೇಡ್, ಕುಟುಂಬಸ್ಥರ ಸಮ್ಮುಖದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ (Marriage) ಮದುವೆಯಾಗಿದ್ದಾರೆ. ಯುವತಿಯ ತಂದೆ – ತಾಯಿಯೇ ಚೀನಾದಿಂದ ಮಗಳನ್ನು ಕರೆತಂದು, ಯುವಕನಿಗೆ ಧಾರೆ ಎರೆದಿದ್ದಾರೆ. ಈ ವೇಳೆ ಭಾರತ-ಚೀನಾ ಸಂಪ್ರದಾಯ ಎರಡು ಒಂದೇ ರೀತಿ ಎಂದು ಯುವತಿ ಖುಷಿ ಪಟ್ಟಿದ್ದಾಳೆ. ಇದನ್ನೂ ಓದಿ:ಜೈಲಲ್ಲಿ ಕೊಲೆ ಆರೋಪಿಗಳ ಲವ್ವಿಡವ್ವಿ; ಮದುವೆಯಾಗೋಕೆ ಸಿಕ್ತು 15 ದಿನಗಳ ಪೆರೋಲ್
ಆಸ್ಟ್ರೇಲಿಯಾದಲ್ಲಿ (Australia) ಓದುವಾಗ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರ ಕುಟುಂಬಸ್ಥರು ಒಪ್ಪಿ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಇಬ್ಬರೂ ಆಸ್ಟ್ರೇಲಿಯಾದಲ್ಲೇ ಸೆಟಲ್ ಆಗಿದ್ದಾರೆ. ಇನ್ನೂ ಚಿಕ್ಕಮಗಳೂರಿನ ಸೌಂದರ್ಯ ಕಂಡು ಚೀನಾ ಯುವತಿ ಫಿದಾ ಆಗಿದ್ದಾಳೆ. ಇದನ್ನೂ ಓದಿ: ಮದುವೆಗೆ ಒಪ್ಪದ ಯುವತಿ – ಪುರೋಹಿತ ಆತ್ಮಹತ್ಯೆ


