ನವದೆಹಲಿ/ಇಟಾನಗರ: ಚೀನಾ ಯುದ್ಧಕ್ಕೆ (China War) ತಯಾರಿ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ ನಂತರ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮುಂದಿಟ್ಟಿದೆ. ಉತ್ತರಕೊಡಿ ಪ್ರಧಾನ ಮಂತ್ರಿ ಎಂದು ಪಟ್ಟು ಹಿಡಿದಿದೆ.
Don’t deflect, distract and divert by getting your drum beaters to attack a man who has walked 20-25 kms a day, listening to the pain, hope and aspirations of the people of India for the past 100 days. Jawaab Do, Pradhan Mantri @narendramodi pic.twitter.com/K2lVvWVv60
— Jairam Ramesh (@Jairam_Ramesh) December 17, 2022
Advertisement
ಅರುಣಾಚಲ ಪ್ರದೇಶದ (Arunachal Pradesh) ಎಲ್‌ಎಸಿಯಲ್ಲಿ (LAC) ಭಾರತ ಮತ್ತು ಚೀನಾದ ಸೈನಿಕರ ನಡುವೆ ಇದೇ ತಿಂಗಳ ಡಿಸೆಂಬರ್ 9ರಂದು ಘರ್ಷಣೆ ಏರ್ಪಟ್ಟಿತ್ತು. ಮೊದಲು ಚೀನಾ ಪಡೆಗಳು ಗಡಿಯನ್ನು ದಾಟಿ ಬಂದಿದ್ದು, ಭಾರತೀಯ ಸೈನಿಕರು ಪ್ರತಿರೋಧ ಒಡ್ಡಿದ್ದರು. ಈ ಕುರಿತು ಸಂಸತ್ತಿನಲ್ಲಿ ಚರ್ಚಿಸಬೇಕೆನ್ನುವ ಕಾಂಗ್ರೆಸ್ ನಾಯಕರ ಬೇಡಿಕೆಯನ್ನೂ ತಿರಸ್ಕರಿಸಲಾಯಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) 7 ಪ್ರಶ್ನೆಗಳನ್ನ ಪ್ರಧಾನಿ ಅವರ ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?
Advertisement
Advertisement
ಕಾಂಗ್ರೆಸ್ ಪ್ರಶ್ನೆಗಳೇನು?
2020ರ ಜೂನ್ 20 ರಂದು ಪೂರ್ವ ಲಡಾಖ್‌ನಲ್ಲಿ ಚೀನಾದಿಂದ ಭಾರತದ ಭೂಪ್ರದೇಶದ ಮೇಲೆ ಯಾವುದೇ ಆಕ್ರಮಣ ನಡೆದಿಲ್ಲ ಎಂದು ನೀವು ಏಕೆ ಹೇಳಿದ್ದೀರಿ? ಮೇ 2020ರ ಮೊದಲು ನಾವು ನಿಯಮಿತವಾಗಿ ಗಸ್ತು ತಿರುಗುತ್ತಿದ್ದ ಪೂರ್ವ ಲಡಾಖ್‌ನಲ್ಲಿ ಸಾವಿರಾರು ಚದರ ಕಿಮೀ ಗಳನ್ನು ಪ್ರವೇಶಿಸದಂತೆ ನಮ್ಮ ಸೈನ್ಯವನ್ನೇ ತಡೆಯಲು ಚೀನಿಯರಿಗೇಕೆ ಅನುಮತಿಸಿದ್ದೀರಿ? ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ಅನ್ನು ಸ್ಥಾಪಿಸಲು 2013ರ ಜುಲೈ 17 ರಂದು ಕ್ಯಾಬಿನೆಟ್ ಅನುಮೋದಿಸಿದ ಯೋಜನೆಯನ್ನು ನೀವು ಏಕೆ ಕೈಬಿಟ್ಟಿದ್ದೀರಿ? ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ
Advertisement
ಪಿಎಂ ಕೇರ್ ನಿಧಿಗೆ ಕೊಡುಗೆ ನೀಡಲು ಚೀನಾ ಕಂಪನಿಗಳಿಗೆ ಏಕೆ ಅವಕಾಶ ಕೊಟ್ಟಿದ್ದೀರಿ? ಕಳೆದ 2 ವರ್ಷಗಳಲ್ಲಿ ಚೀನಾದಿಂದ ದಾಖಲೆಯ ಮಟ್ಟದ ಆಮದುಗಳನ್ನು ಏಕೆ ಅನುಮತಿಸಿದ್ದೀರಿ? ಗಡಿ ಪರಿಸ್ಥಿತಿ ಮತ್ತು ಚೀನಾದಿಂದ ಭಾರತ ಎದುರಿಸುತ್ತಿರುವ ಸವಾಲುಗಳನ್ನು ಸಂಸತ್ತಿನಲ್ಲಿ ಚರ್ಚಿಸಬಾರದು ಎಂದು ಏಕೆ ಒತ್ತಾಯಿಸಿದ್ದೀರಿ? ನೀವು 18 ಬಾರಿ ಚೀನಾದ ನಾಯಕನನ್ನು ಭೇಟಿ ಮಾಡಿದ್ದೀರಿ, ಇತ್ತೀಚೆಗೆ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಹಸ್ತಲಾಘವ ಮಾಡಿದ್ದೀರಿ. ಇದಾದ ಕೆಲವೇ ದಿನಗಳಲ್ಲಿ ಚೀನಾ ತವಾಂಗ್‌ಗೆ ಅತಿಕ್ರಮಣ ಪ್ರಾರಂಭಿಸಿತು. ಇಷ್ಟಾದರೂ ನೀವು ದೇಶವನ್ನು ಏಕೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಜೈರಾಮ್ ರಮೇಶ್ ಅವರು ಈ ಪ್ರಶ್ನೆಗಳ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.