ಬೀಜಿಂಗ್: ಚೀನಾದ (China) ಕಂಪನಿಯೊಂದು ದಂತ ಕಸಿಗಾಗಿ (Dental Transplant)ಸ್ಮಶಾನಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಂದ 4,000ಕ್ಕೂ ಹೆಚ್ಚು ಶವಗಳನ್ನು ಕದ್ದಿದೆ ಎಂಬ ಆರೋಪ ಕೇಳಿಬಂದಿದೆ.
ಶವಗಳನ್ನು ಕದ್ದ ಆರೋಪ ಮಾಡಿರುವ ಕ್ರಿಮಿನಲ್ ವಕೀಲರು ಈ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.
Advertisement
ಶವಗಳನ್ನು ಕದ್ದು ಕಂಪನಿಯು 380 ಮಿಲಿಯನ್ ಯುವಾನ್ (53 ಮಿಲಿಯನ್ ಡಾಲರ್) ಗಳಿಸಿದೆ. ಅದರಲ್ಲೂ ದಂತ ಕಸಿಗಾಗಿ ಮೂಳೆಗಳನ್ನು ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ರೋಗಿಗಳಲ್ಲಿ ಕಸಿಗಳಿಗೆ ಸಾಕಷ್ಟು ಮೂಳೆ ಸಾಂದ್ರತೆ ಇಲ್ಲದಿದ್ದಾಗ ಅಲೋಜೆನಿಕ್ ಕಸಿಗಳನ್ನು ಬಳಸಲಾಗುತ್ತದೆ. ಮೂಳೆಯನ್ನು ಸಾಮಾನ್ಯವಾಗಿ ಸೊಂಟದ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ರೋಗಿಗಳಿಂದ ಬಳಸಲಾಗುತ್ತದೆ ಎನ್ನಲಾಗಿದೆ.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 18 ಟನ್ ಮೂಳೆ ಮತ್ತು 34,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ಸು ಎಂಬ ಶಂಕಿತನು ಯುನ್ನಾನ್, ಚಾಂಗ್ಕಿಂಗ್, ಗುಯಿಝೌ ಮತ್ತು ಸಿಚುವಾನ್‍ನ ಸ್ಮಶಾನಗಳಿಂದ 4,000 ಕ್ಕೂ ಹೆಚ್ಚು ಶವಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಯುನ್ನಾನ್ ಪ್ರಾಂತ್ಯದ ಶುಯಿಫು, ಚಾಂಗ್ಕಿಂಗ್ ನ ಬನಾನ್ ಜಿಲ್ಲೆ, ಗುಯಿಝೌನ ಶಿಕಿಯಾನ್ ಕೌಂಟಿ ಮತ್ತು ಸಿಚುವಾನ ಡೇಯಿಂಗ್ ಕೌಂಟಿಯ ಚಿತಾಗಾರದ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಹೆಚ್ಚಿನ ಸಂಸ್ಕರಣೆಗಾಗಿ ಸು ಅವರ ಕಂಪನಿಗೆ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ.
Advertisement
ಚಿತಾಗಾರಗಳಲ್ಲಿನ ಕಾರ್ಮಿಕರು ಮೂಳೆಗಳನ್ನು ಸುಗೆ ಮಾರಾಟ ಮಾಡಲು ಶವಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿದ್ದಾರೆ ಎಂದು ಶಂಕಿಸಲಾಗಿದೆ. ಶಾಂಡೊಂಗ್‍ನ ಕಿಂಗ್ಡಾವೊ ಯೂನಿವರ್ಸಿಟಿ ಆಸ್ಪತ್ರೆಯ ಲಿವರ್ ಸೆಂಟರ್ ಅಕ್ರಮವಾಗಿ ಶವಗಳನ್ನು ಕಂಪನಿಗೆ ಮಾರಾಟ ಮಾಡಿದೆ ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇನ್ನೂ ವೈದ್ಯಕೀಯ ವಿಜ್ಞಾನಕ್ಕೆ ಪ್ರಮುಖ ಕೊಡುಗೆ ನೀಡಿದ ಲಿವರ್ ಸೆಂಟರ್ ನ ನಿರ್ದೇಶಕ ಲಿ ಬಾಕ್ಸಿಂಗ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣ ಸಂಬಂಧ ತನಿಖೆಯ ಸಮಯದಲ್ಲಿ ಇನ್ನೂ 75 ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.