ನವದೆಹಲಿ: ಚೀನಾದ ಕಾರು ತಯಾರಿಕಾ ಸಂಸ್ಥೆ ಚೆರ್ರಿಯು ಭಾರತದಲ್ಲಿ ತನ್ನ ಉದ್ಯಮವನ್ನು ಆರಂಭಿಸುವ ಕುರಿತು ಯೋಜನೆಯನ್ನು ರೂಪಿಸಿರುವುದಾಗಿ ವರದಿಯಾಗಿದೆ.
ಹೌದು. ಚೆರ್ರಿ ಅಟೋಮೊಬೈಲ್ ತಯಾರಿಕಾ ಸಂಸ್ಥೆಯು ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಯೋಜನೆ ರೂಪಿಸಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಭಾರತದಲ್ಲಿ ತನ್ನ ಕಾರುಗಳನ್ನು ಬಿಡುಗಡೆಗೊಳಿಸಲು ಚೆರ್ರಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
Advertisement
Advertisement
ಈಗಾಗಲೇ ಹುಂಡೈನ ಕಿಯಾ ಹಾಗೂ ಎಸ್‍ಎಐಸಿಯ ಎಂಜಿ ಕಾರುಗಳು 2019 ರ ವೇಳೆಗೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹೀಗಾಗಿ ಚೆರ್ರಿ ಕಂಪೆನಿಯು ಸಹ ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಚೆರ್ರಿ ಕಂಪೆನೆಯನ್ನು ಎರಡು ದಶಕಗಳ ಹಿಂದೆ ಚೀನಾ ಸರ್ಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಿತ್ತು. ಈಗಾಗಲೇ ಸರ್ಕಾರಿ ಸ್ವಾಮ್ಯದ ಎರಡು ನಿಗಮಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಚೆರ್ರಿ ಕಂಪೆನಿಯು ಕಾರು ಮಾತ್ರವಲ್ಲದೇ, ಮಿನಿವ್ಯಾನ್, ಎಸ್‍ಯುವಿ ಹಾಗೂ ವಾಣಿಜ್ಯ ಬಳಕೆಯ ವಾಹನಗಳ ತಯಾರಿಕೆಯನ್ನು ಮಾಡುತ್ತಿದೆ.
Advertisement
Advertisement
ಈಗಾಗಲೇ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿರುವ ಚೆರ್ರಿ ಕಂಪೆನಿಯು, ರಫ್ತಿನಲ್ಲಿಯು ಸಹ ಬಹು ದೊಡ್ಡ ಪಾಲನ್ನು ಹೊಂದಿದೆ. ಸದ್ಯ ಕೆನಾನ್ ಹೋಲ್ಡಿಂಗ್ಸ್ ಹಾಗೂ ಖೋರೊಸ್ನೊಂದಿಗೆ 50:50ಯ ಸಹಭಾಗಿತ್ವದ ಅಡಿಯಲ್ಲಿ ಕಾರುಗಳನ್ನು ತಯಾರಿಸುತ್ತಿದೆ. ಚೆರ್ರಿ ಕಂಪೆನಿಯು ಜಗತ್ತಿನಾದ್ಯಂತ ಸಹಭಾಗಿತ್ವದಲ್ಲಿ ಜಂಟಿ ಉದ್ಯಮಗಳನ್ನು ನಡೆಸುತ್ತಿದ್ದು, ಭಾರತದಲ್ಲಿಯೂ ಸಹ 2012 ರಲ್ಲಿ ಟಾಟಾ ಸ್ವಾಮ್ಯದ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ನೊಂದಿಗೆ ಉದ್ಯಮವನ್ನು ಆರಂಭಿಸಿದೆ. ಈ ಮೂಲಕ ಲ್ಯಾಂಡ್ ರೋವರ್ ಹಾಗೂ ಜಗ್ವಾರ್ ಮಾದರಿಯ ಕಾರುಗಳನ್ನು ಚೀನಾದಲ್ಲಿ ತಯಾರಿಸುತ್ತಿದೆ. ಅಲ್ಲದೇ ಹಲವಾರು ರಾಷ್ಟ್ರಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ.
ಮುಂಬರುವ ಚೆರ್ರಿ ಕಾರುಗಳು ಭಾರತದ ಮಾರುತಿ ಸುಜುಕಿ ಸಿಯಾಜ್ ಹಾಗೂ ಹುಂಡೈ ಕ್ರೇಟಾ ವಾಹನಗಳಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv