ನವದೆಹಲಿ: ಭಾರತ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲ ಮೊಬೈಲ್ ಕಂಪನಿಗ ¼ ಪಾಲು ಮತ್ತಷ್ಟು ಹೆಚ್ಚಾಗಿದ್ದು, 2019ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆ ಶೇ.65 ರಷ್ಟು ಪಾಲನ್ನು ಚೀನಾ ಮೊಬೈಲ್ ಉತ್ಪಾದಕ ಕಂಪನಿಗಳೇ ಪಡೆದಿದೆ.
ಪ್ರತಿ ವರ್ಷ ಚೀನಾ ಬ್ರಾಂಡ್ ಗಳ ಮೌಲ್ಯ ಭಾರತದ ಮಾರುಕಟ್ಟೆಯಲ್ಲಿ ಶೇ.20 ರಷ್ಟು ಅಧಿಕವಾಗುತ್ತಿದೆ. ಅದರಲ್ಲೂ ವಿವೋ, ರಿಯಲ್‍ಮಿ ಸ್ಮಾಟ್‍ಫೋನ್ ಕಂಪನಿಗಳು ಹೆಚ್ಚು ಪ್ರಗತಿಯನ್ನ ಸಾಧಿಸಿದೆ ಎಂದು ಭಾರತದ ಸ್ಮಾರ್ಟ್‍ಫೋನ್ ಮಾರುಕಟ್ಟೆಯನ್ನು ಅಧ್ಯಯನ ನಡೆಸಿ ಕೌಂಟರ್‍ಪಾಯಿಂಟ್ ವರದಿ ನೀಡಿದೆ.
Advertisement
ಪ್ರಮುಖವಾಗಿ 7ರಿಂದ 14 ಸಾವಿರ ರೂ. ಒಳಗಿನ ಫೋನ್‍ಗಳ ಪೈಕಿ ವಿವೋ ಫೋನ್ ಮಾರಾಟದಲ್ಲಿ ಹೆಚ್ಚಾಗಿದೆ. ಒಪ್ಪೋ ಕಂಪನಿಯ 15 ರಿಂದ 25 ಸಾವಿರ ರೂ. ಮೌಲ್ಯದ ಫೋನ್ ಮಾರಾಟ ಹೆಚ್ಚಳ ಕಂಡಿದೆ.
Advertisement
Advertisement
ದೇಶದ ಒಟ್ಟಾರೆ ವಾರ್ಷಿಕ ಸ್ಮಾಟ್ ಫೋನ್ ಮಾರುಕಟ್ಟೆ ಶೇ.4 ರಷ್ಟು ವೃದ್ಧಿಯಾಗಿದ್ದು, 2018ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಗತಿ ವೇಗ ಸ್ವಲ್ಪ ಕಡಿಮೆ ಆಗಿದೆ ಎಂದು ಅಧ್ಯಯನ ತಿಳಿಸಿದೆ.
Advertisement
ಅತಿ ಹೆಚ್ಚು ಮಾರಾಟವಾದ ಟಾಪ್ 5 ಸ್ಮಾಟ್ ಫೋನ್‍ಗಳ ಪಟ್ಟಿಯಲ್ಲಿ ಚೀನಾ ಕಂಪನಿಗಳೇ ಸ್ಥಾನ ಪಡೆದುಕೊಂಡಿದೆ. ಕ್ಸಿಯೋಮಿ ರೆಡ್‍ಮಿ 6ಎ ಟಾಪ್ ಮಾಡೆಲ್ ಆಗಿದೆ. ಕ್ಸಿಯೋಮಿ ನೋಟ್ 6 ಪ್ರೋ, ರೆಡ್ ಮಿ ವೈ2, ಸ್ಯಾಮ್‍ಸಾಂಗ್ ಗೆಲಾಕ್ಸಿ ಎ20, ಗೆಲಾಕ್ಸಿ ಎ50 ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕ್ಸಿಯೋಮಿ ನೋಟ್ 6ಪ್ರೋ ದರ ಹಲವು ಬಾರಿ ಕಡಿತಗೊಳಿಸಿದ ಪರಿಣಾಮ ಸ್ಥಾನ ಪಡೆದುಕೊಂಡಿದೆ.
ಯಾವ ಕಂಪನಿಯ ಪಾಲು ಎಷ್ಟು?
ಕ್ಸಿಯೋಮಿ ಕಂಪನಿ 2018ರ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.31 ರಷ್ಟು ಮಾರುಕಟ್ಟೆಯಲ್ಲಿ ಪಾಲನ್ನು ಹೊಂದಿದ್ದರೆ, 2019ರ ಈ ಅವಧಿಯಲ್ಲಿ ಶೇ.29ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಸ್ಯಾಮ್‍ಸಂಗ್ ಕಳೆದ ವರ್ಷದ ತ್ರೈಮಾಸಿಕದಲ್ಲಿ ಶೇ.26 ರಷ್ಟು ಪಾಲು ಹೊಂದಿದ್ದರೆ ಈ ಬಾರಿ ಶೇ.3 ರಷ್ಟು ಕಡಿಮೆಯಾಗಿದ್ದು ಶೇ.23 ರಷ್ಟು ಪಾಲನ್ನು ಹೊಂದಿದೆ.
ವಿವೋ 2018ರ ಮೊದಲ ತ್ರೈಮಾಸಿಕದಲ್ಲಿ ಶೇ.6 ರಷ್ಟ ಪಾಲು ಹೊಂದಿತ್ತು. ಈ ಬಾರಿಯ 2019ರ ಮೊದಲ ತ್ರೈಮಾಸಿಕದಲ್ಲಿ ಶೇ.12 ಮಾರುಕ್ಟೆ ಪಾಲನ್ನು ಗಳಿಸಿಕೊಂಡಿದೆ. ಕಳೆದ ಅವಧಿಯಲ್ಲಿ ರಿಯಲ್ ಮೀ ಟಾಪ್ -5 ಸ್ಥಾನ ಗಳಿಸಿರಲಿಲ್ಲ. ಆದರೆ ಈ ಬಾರಿ ಶೇ.7ರಷ್ಟು ಪಾಲನ್ನು ಹೊಂದುವ ಮೂಲಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. ಒಪ್ಪೋ ಶೇ.7ರಷ್ಟು ಪಾಲನ್ನು ಹೊಂದುವ ಮೂಲಕ 5ನೇ ಸ್ಥಾನಗಳಿಸಿದೆ.
ಉಳಿದಂತೆ ಇತರೇ ಕಂಪನಿಗಳು 2018 ಮೊದಲ ತ್ರೈಮಾಸಿಕದಲ್ಲಿ ಶೇ.31 ರಷ್ಟು ಪಾಲನ್ನು ಹೊಂದಿದ್ದವು. ಈ ಪ್ರಮಾಣ 2019 ಮೊದಲ ತ್ರೈಮಾನಿಕದಲ್ಲಿ ಶೇ.22 ರಷ್ಟಿತ್ತು.
ಉಳಿದಂತೆ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಶೇ.36 ರಷ್ಟು ಪಾಲನ್ನು ಪಡೆಯುವ ಮೂಲಕ ಜಿಯೋ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ನಂತರದ ಸ್ಥಾನದಲ್ಲಿ ಅನುಕ್ರಮವಾಗಿ ಸ್ಯಾಮ್‍ಸಂಗ್(ಶೇ.10), ಲಾವಾ (ಶೇ.6), ನೋಕಿಯಾ(ಶೇ.7), ಐಟೆಲ್(ಶೇ.9) ಪಡೆದುಕೊಂಡಿದೆ.