ಇಸ್ಲಾಮಾಬಾದ್: ಚೀನಾದ (China) ಅತ್ಯಂತ ಶ್ರೀಮಂತ ಹಾಗೂ ಆಲಿಬಾಬಾ ಗ್ರೂಪ್‍ನ ಸಹ-ಸಂಸ್ಥಾಪಕ (Alibaba Group Co-Founder) ಜಾಕ್ ಮಾ ಅವರ ದಿಢೀರ್ ಪಾಕಿಸ್ತಾನ (Pakistan) ಭೇಟಿ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಬೋರ್ಡ್ ಆಫ್ ಇನ್ವೆಸ್ಟ್ ಮೆಂಟ್ (BOI)ನ ಮಾಜಿ ಅಧ್ಯಕ್ಷ ಮುಹಮ್ಮದ್ ಅಜ್ಫರ್ ಅಹ್ಸನ್ ಅವರು ಜಾಕ್ ಮಾ (Jack Ma) ಭೇಟಿಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಜೂನ್ 29ರಂದು ಲಾಹೋರ್‍ಗೆ ಆಗಮಿಸಿರುವ ಜಾಕ್ ಮಾ ಅವರು ಬರೋಬ್ಬರಿ 23 ಗಂಟೆಗಳ ಕಾಲ ಇದ್ದರು ಎಂದು ಹೇಳಿದ್ದಾರೆ.
Advertisement
Advertisement
ಪಾಕ್‍ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸರ್ಕಾರಿ ಅಧಿಕಾರಿಗಳು ಹಾಗೂ ಮಾಧ್ಯಮದವರ ಜೊತೆ ಮಾತನಾಡಲು ನಿರಾಕರಿಸಿದ್ದರು. ಖಾಸಗಿ ಸ್ಥಳದಲ್ಲಿದ್ದ ಮಾ ಅವರು ಜೂನ್ 30ರಂದು ಖಾಸಗಿ ಜೆಟ್ ಮೂಲಕ ವಾಪಸ್ಸಾಗಿದ್ದಾರೆ ಎಂದರು. ಸದ್ಯಕ್ಕೆ ಜಾಕ್ ಮಾ ಭೇಟಿಯ ಉದ್ದೇಶ ಗೌಪ್ಯವಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಪಾಕಿಸ್ತಾನಕ್ಕೆ ಇದರಿಂದ ಧನಾತ್ಮಕ ಫಲಿತಾಂಶಗಳು ಸಿಗಬಹುದು ಎಂಬ ಭರವಸೆ ಇದೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
ಐದು ಚೀನೀ ಪ್ರಜೆಗಳು, ಡ್ಯಾನಿಶ್ ವ್ಯಕ್ತಿ ಮತ್ತು ಯುಎಸ್ ಪ್ರಜೆಯನ್ನು ಒಳಗೊಂಡ 7 ಉದ್ಯಮಿಗಳ ನಿಯೋಗದ ಜೊತೆ ಮಾ ಕಾಣಿಸಿಕೊಂಡಿದ್ದರು. ಹಾಂಗ್ ಕಾಂಗ್‍ನ ವ್ಯಾಪಾರ ವಿಮಾನಯಾನ ವಲಯದಿಂದ ಚಾರ್ಟರ್ಡ್ ಫ್ಲೈಟ್ ಮೂಲಕ ನೇಪಾಳದಿಂದ ಪಾಕಿಸ್ತಾನಕ್ಕೆ ಬಂದಿರುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: Twitter ನಲ್ಲಿ ಪೋಸ್ಟ್ ಓದುವ ಮಿತಿ ಹೆಚ್ಚಳ – ಮಹತ್ವದ ಬದಲಾವಣೆ ಘೋಷಿಸಿದ ಮಸ್ಕ್
Advertisement
ಒಟ್ಟಿನಲ್ಲಿ ಜಾಕ್ ಮಾ ಅವರು ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿರುವುದು ಭಾರೀ ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಭೇಟಿಯ ಕುರಿತು ಚರ್ಚೆಗಳಾಗುತ್ತಿವೆ. ಮಾ ಮತ್ತು ಅವರ ತಂಡವು ಪಾಕಿಸ್ತಾನದಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವುದರ ಕುರಿತು ಊಹಾಪೋಹಗಳು ಎದ್ದಿವೆ. ಆದರೆ ಯಾವುದೇ ನಿರ್ದಿಷ್ಟ ವ್ಯಾಪಾರ ವ್ಯವಹಾರಗಳು ಅಥವಾ ಸಭೆಗಳು ನಡೆದಿರುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.
Web Stories