ಬೆಂಗಳೂರು: ಲೋನ್ ಆ್ಯಪ್ ಗಳ ಬಳಿಕ ಮತ್ತೊಂದು ರೀತಿಯ ಮಹಾ ಮಹಾ ವಂಚನೆ ಬಯಲಿಗೆ ಬಂದಿದೆ. ಲಿಂಕ್ ಶೇರ್ ಮಾಡಿ ಹಣ ಗಳಿಸಿ ಎಂದು ಆಫರ್ ಕೊಟ್ಟು, ಸೆಲೆಬ್ರಿಟಿಗಳು ಹಾಗೂ ಸೆಲೆಬ್ರಿಟಿಗಳ ಸುದ್ದಿ ಶೇರ್ ಮಾಡಿದ್ರೆ ದುಡ್ಡು ಕೊಡ್ತೀವಿ. ಕುಳಿತಲ್ಲೇ ಸಾವಿರಾರು ರೂಪಾಯಿ ಗಳಿಕೆಯ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಪೊಲೀಸರು ಚೀನೀ ಗ್ಯಾಂಗ್ ನ ಮತ್ತೊಂದು ಚೀಟಿಂಗ್ ಜಾಲ ಪತ್ತೆ ಹಚ್ಚಿದ್ದಾರೆ. ಈ ಆ್ಯಪ್ ಮೂಲಕ ಬಡವರು, ಮಧ್ಯಮ ವರ್ಗದ ಜನರಿಗೆ ಆಮಿಷವೊಡ್ಡಿ ಹಣ ಲೂಟಿ ಮಾಡಲಾಗಿದ್ದು, ನಗರದ ದಕ್ಷಿಣ ವಿಭಾಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರ ಬಂಧನ ಮಾಡಲಾಗಿದ್ದು, ಇನ್ನೂ ಕೆಲವರ ಹುಡುಕಾಟ ನಡೆಸಲಾಗ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಸ್ಟಾರ್‌ಗಳ ಜೊತೆ ಯಶ್‌ಗೆ ಸ್ಥಾನ – ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್
Advertisement
Advertisement
ವಂಚನೆ ಹೇಗೆ?
ಲೋನ್ ಆ್ಯಪ್ ರೀತಿ ಲಿಂಕ್ ಕಳಿಸೋ ಖದೀಮರ ಈ ಜಾಲ, ಆಂಡ್ರಾಯ್ಡ್ ಫೋನಿಗೆ ಎಪಿಕೆ ಲಿಂಕ್ ಕಳಿಸುತ್ತೆ. ಲಿಂಕ್ ನಲ್ಲಿ ಸರ್ಚ್ ಮಾಡಿದ್ರೆ ಆ್ಯಪ್ ಇನ್‍ಸ್ಟಾಲ್ ಆಗುತ್ತೆ. ಆ್ಯಪ್ ನಲ್ಲಿರುವ ವೀಡಿಯೋಗಳು, ಸೆಲೆಬ್ರಿಟಿಗಳ ಸುದ್ದಿ ಶೇರ್, ಲೈಕ್, ಕಾಮೆಂಟ್ ಮಾಡುವಂತೆ ಸೂಚನೆ ಬರುತ್ತೆ. ವೀಡಿಯೋಗಳನ್ನ ನೋಡಿ, ಲೈಕ್ ಮಾಡಿ, ಶೇರ್ ಮಾಡಿದ್ರೆ ಹಣ ಬರುತ್ತೆ ಎಂದು ಆಮಿಷ ಒಡ್ಡಲಾಗುತ್ತದೆ.
Advertisement
ಒಂದು ವೀಡಿಯೋ ಶೇರ್ ಮಾಡಿದ್ರೆ ಇಪ್ಪತ್ತು ರೂ. ಕೊಡ್ತೀವಿ ಎಂದು ಆಮಿಷ ಬರುತ್ತೆ. ಮೊದಲಿಗೆ ಕಾಂಪ್ಲಿಮೆಂಟರಿಯಾಗಿ ಮೂರು ವೀಡಿಯೋ ಕಳಿಸೋ ಚೀನೀ ಗ್ಯಾಂಗ್, ಮೂರು ವೀಡಿಯೋ ನೋಡಿ ಲೈಕ್, ಶೇರ್ ಮಾಡಿದ್ರೆ 60 ರೂ. ಅಕೌಂಟ್ ಗೆ ಜಮೆಯಾಗುತ್ತೆ. ಸುಲಭವಾಗಿ ಕುಳಿತಲ್ಲೆ ಹಣ ಗಳಿಸಬಹುದು ಎಂದು ನಂಬಿಸೋ ಗ್ಯಾಂಗ್, ಮೂರು ವೀಡಿಯೋ ಅವಧಿ ಮುಗಿದ ಬಳಿಕ ಅಸಲಿ ಆಟ ಶುರು ಮಾಡುತ್ತದೆ. ಇದನ್ನೂ ಓದಿ: ತಿರುಗುವ ಮನೆ ನಿರ್ಮಿಸಿ ಪತ್ನಿಗೆ ಗಿಫ್ಟ್ ಕೊಟ್ಟ 72ರ ಪತಿ
Advertisement
ರೀಚಾರ್ಜ್ ಮಾಡಿದ್ರೆ ಬ್ಲಾಕ್
ಈ ಟಾಸ್ಕ್ ನಲ್ಲಿ ಮುಂದುವರೆಯಲು ರೀಚಾರ್ಜ್ ಮಾಡುವಂತೆ ಸೂಚನೆ ಬರುತ್ತೆ. ಮೊದಲ ರೀಚಾರ್ಜ್ 6 ರಿಂದ 30 ಸಾವಿರ ಮಾಡಲು ಅವಕಾಶ ನೀಡಲಾಗುತ್ತೆ. ರೀಚಾರ್ಜ್ ಮಾಡಿದ ನಾಲ್ಕೈದು ದಿನದಲ್ಲಿ ಆ್ಯಪ್ ಬ್ಲಾಕ್ ಆಗುತ್ತೆ. ಈ ವೇಳೆ ಹಣ ತೆಗೆಯಲು, ಕಳಿಸಲು ನಿರ್ಬಂಧ ವಿಧಿಸುತ್ತದೆ. ಯಾಕೆ ಅಂತ ಪ್ರಶ್ನೆ ಮಾಡಿದ್ರೆ ನೀವು ಒಂದು ಲೆವೆಲ್ ರೀಚ್ ಆಗಿದ್ದೀರಿ. ಮತ್ತೊಂದು ಲೆವೆಲ್ ಗೆ ಹೋಗಲು ರೀಚಾರ್ಜ್ ಮಾಡಬೇಕು ಎಂಬ ಉತ್ತರ ಸಿಗುತ್ತದೆ.
50 ಸಾವಿರ ಮೇಲ್ಪಟ್ಟು ರೀಚಾರ್ಜ್ ಮಾಡಲು ಕರೆ ಬರುತ್ತೆ. ಎರಡನೇ ರೀಚಾರ್ಜ್ 50 ಸಾವಿರ ಮೇಲ್ಪಟ್ಟು ಮಾಡಿದರೆ ಹೆಚ್ಚಿನ ಹಣದ ಆಮಿಷವೊಡ್ತಾರೆ. ದುಡ್ಡಿನ ಆಸೆಗಾಗಿ ತಾ ಮುಂದು ನಾ ಮುಂದು ಎಂದು ರೀಚಾರ್ಜ್ ಮಾಡಿದ ಜನರಿಗೆ, ರೀಚಾರ್ಜ್ ಆದ ಕೆಲವೇ ದಿನಗಳಲ್ಲಿ ಆ್ಯಪ್ ಮತ್ತೆ ಬ್ಲಾಕ್ ಆಗುತ್ತೆ. ಪುನಃ ಯಾಕೆ ಏನು ಅಂತ ಪ್ರಶ್ನೆ ಮಾಡಿದ್ರೆ, ಲೆವೆಲ್ ಚೇಂಜ್ ಅನ್ನೋ ಉತ್ತರ. ಒಂದು ಲಕ್ಷಕ್ಕೆ ರೀಚಾರ್ಜ್ ಮಾಡಿ ಅನಿಯಮಿತ ಟಾಸ್ಕ್ ಆಡಿ ಎಂದು ಆಫರ್ ಬರುತ್ತೆ.
ಈ ವೇಳೆ ಜನ ಒಂದು ಲಕ್ಷನಾ ಅಂತ ಮೀನಾಮೇಷ ಎಣಿಸಿದ್ರೆ ಸಿಗುತ್ತೆ ಬಂಪರ್ ಆಫರ್. 70 ಸಾವಿರ ರೀಚಾರ್ಜ್ ಮಾಡಿ ಅನ್ನೋ ರಿಯಾಯಿತಿ. ಈ ವೇಳೆ ಲಕ್ಷಾಂತರ ಜನರಿಂದ 70 ಸಾವಿರ ರೂ. ಗೆ ರೀಚಾರ್ಜ್ ಆಗಿದ್ದು, ಕೋಟಿ ಕೋಟಿ ಹಣ ರೀಚಾರ್ಜ್ ಆದ ಕೂಡಲೇ ಆ್ಯಪ್ ನ ವ್ಯಾಲೆಟ್ ಬ್ಲಾಕ್ ಆಗಿದೆ ಎಂದು ಉತ್ತರ ಬರುತ್ತೆ. ಇದನ್ನೂ ಓದಿ: ಪ್ರವಾಸಿಗರು ದೀಪಾಲಂಕಾರವನ್ನು ವೀಕ್ಷಿಸುವಾಗ ಅಗತ್ಯವಾಗಿ ಎಚ್ಚರಿಕೆ ವಹಿಸಬೇಕು: ಸೋಮಶೇಖರ್ ಮನವಿ
ಕೋಟ್ಯಂತರ ವಂಚನೆ:
ಮಾರ್ಚ್ 15 ರಂದು ದಿಢೀರನೆ ವ್ಯಾಲೇಟ್ ಕ್ಲೋಸ್ ಮಾಡಿದ ಗ್ಯಾಂಗ್, ವ್ಯಾಲೇಟ್ ನಲ್ಲಿದ್ದ ಹಣ ಕ್ರಿಪ್ಟೋ ಮೂಲಕ ವರ್ಗಾವಣೆ ಮಾಡಿ ಎಸ್ಕೇಪ್ ಆಗಿದೆ. ಚೀನೀ ಗ್ಯಾಂಗ್ ನ ನಯವಂಚಕ ಕೃತ್ಯದಿಂದ ಜನರು ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಬೆಂಗಳೂರು, ಕರ್ನಾಟಕ ಮಾತ್ರವಲ್ಲದೆ ದೇಶದ ಸಾವಿರಾರು ಜನರಿಂದ ಆ್ಯಪ್ ನಲ್ಲಿ ಹಣ ಹೂಡಿಕೆಯಾಗಿದೆ. ಒಂದು ಸಾವಿರ ರೂ.ಯಿಂದ ಹಿಡಿದು ಲಕ್ಷ, ಲಕ್ಷ ಹಣ ಹೂಡಿಕೆಯಾಗಿದ್ದು, ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ 20 ಕೋಟಿ ರೂ. ಚೀಟಿಂಗ್ ಪತ್ತೆಯಾಗಿದೆ. ಅದರಲ್ಲಿ ಪೊಲೀಸರು 11 ಕೋಟಿಯಷ್ಟು ಅಕೌಂಟ್ ಟ್ರಾನ್ಸಫರ್ ಪತ್ತೆ ಹಚ್ಚಿದ್ದಾರೆ. ಕೃತ್ಯದಲ್ಲಿ ಚೀನೀ ಮೂಲದ ಗ್ಯಾಂಗ್ ಕೈವಾಡವಿದ್ದು, ಆ್ಯಪ್ ಸಿದ್ದಗೊಳಿಸಿ ಭಾರತದಲ್ಲಿ ಚಾಲನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.