ಚೈನೀಸ್ ಅಡುಗೆಗಳು ಎಂದ ತಕ್ಷಣ ನೆನಪಿಗೆ ಬರೋದು ರೋಡ್ ಸೈಡ್‌ನ ಫಾಸ್ಟ್‌ಫುಡ್‌ಗಳು. ಆದರೆ ಇನ್ನೂ ಅನೇಕ ಚೈನೀಸ್ ಫೇಮಸ್ ಅಡುಗೆಗಳು ಫಾಸ್ಟ್‌ಫುಡ್‌ಗೆ ತುಂಬಾ ಭಿನ್ನವಾಗಿವೆ. ಇಂದು ನಾವು ಅಂತಹುದೇ ಒಂದು ರೆಸಿಪಿ ಹೇಳಿಕೊಡಲಿದ್ದೇವೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ ಬಾದಾಮಿ ಕುಕೀಸ್ ಅನ್ನು ನೀವು ಸವಿದಿರುತ್ತೀರಿ. ಬಾಯಲ್ಲಿ ಇಟ್ಟ ತಕ್ಷಣ ಕರಗೋ ಈ ಕುಕೀಸ್ ಎಲ್ಲರಿಗೂ ಇಷ್ಟ. ಮಾಡೋಕೆ ತುಂಬಾ ಸುಲಭವಾಗಿರೋ ಚೈನೀಸ್ ಬಾದಾಮಿ ಕುಕೀಸ್ ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಬೆಣ್ಣೆ – 130 ಗ್ರಾಂ
ಸಕ್ಕರೆ ಪುಡಿ – 70 ಗ್ರಾಂ
ಉಪ್ಪು – ಕಾಲು ಟೀಸ್ಪೂನ್
ಕಾರ್ನ್ ಫ್ಲೋರ್ – 80 ಗ್ರಾಂ
ಮೈದಾ ಹಿಟ್ಟು – 120 ಗ್ರಾಂ
ಲಘುವಾಗಿ ಹುರಿದ ಬಾದಾಮಿ ಫ್ಲೇಕ್ಸ್ – 60 ಗ್ರಾಂ
ಬಾದಾಮಿ ಸಾರ – ಕಾಲು ಟೀಸ್ಪೂನ್ (ಐಚ್ಛಿಕ) ಇದನ್ನೂ ಓದಿ: ಮಕ್ಕಳಿಗೆ ನೀಡಿ ಟೇಸ್ಟಿ, ಹೆಲ್ದಿ ಬೀಟ್ರೂಟ್ ಕಟ್ಲೆಟ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 160 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ, ಬೇಕಿಂಗ್ ಶೀಟ್‌ಗೆ ಬಟರ್ ಪೇಪರ್ ಅನ್ನು ಜೋಡಿಸಿ ಇಡಿ.
* ಒಂದು ಬೌಲ್‌ನಲ್ಲಿ ಬೆಣ್ಣೆ, ಸಕ್ಕರೆ ಪುಡಿ, ಉಪ್ಪು ಹಾಗೂ ಬಾದಾಮಿ ಸಾರ ಹಾಕಿ ನಯವಾಗುವತನಕ ಬೀಟ್ ಮಾಡಿಕೊಳ್ಳಿ.
* ಬಳಿಕ ಜರಡಿ ಹಿಡಿದು ಕಾರ್ನ್ ಫ್ಲೋರ್ ಹಾಗೂ ಮೈದಾ ಹಿಟ್ಟನ್ನು ಸೇರಿಸಿ, ಮೃದುವಾದ ಹಿಟ್ಟಾಗುವವರೆಗೆ ಬೆರೆಸಿಕೊಳ್ಳಿ.
* ಈ ಹಿಟ್ಟನ್ನು ಒಂದು ಪ್ಲಾಸ್ಟಿಕ್ ಕಾಗದದ ಮೇಲೆ ಹಾಕಿ 1 ಸೆ.ಮೀ ದಪ್ಪಗೆ ಆಗುವಷ್ಟು ಲಟ್ಟಣಿಗೆಯಿಂದ ಸುತ್ತಿಕೊಳ್ಳಿ. ಬಳಿಕ ಕುಕೀ ಕಟರ್ ಸಹಾಯದಿಂದ ಕುಕೀಸ್ ಆಕಾರಗಳಲ್ಲಿ ಕತ್ತರಿಸಿಕೊಳ್ಳಿ.
* ಈಗ ಕತ್ತರಿಸಿದ ಕುಕೀಸ್‌ಗಳನ್ನು ಬೇಕಿಂಗ್ ಶೀಟ್ ಮೇಲೆ ಜೋಡಿಸಿಕೊಳ್ಳಿ. ಅದರ ಮೇಲೆ ಬಾದಾಮಿ ಫ್ಲೇಕ್ಸ್‌ಗಳನ್ನು ಹರಡಿ.
* ನಂತರ 160 ಡಿಗ್ರಿ ಸೆಲ್ಸಿಯಸ್ ಶಾಖದಲ್ಲಿ ಸುಮಾರು 20 ನಿಮಿಷಗಳ ಕಾಲ ಓವನ್‌ನಲ್ಲಿ ಬೇಯಿಸಿಕೊಳ್ಳಿ.
* ಕುಕೀಸ್ ಬೆಂದ ಬಳಿಕ ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ.
* ಇದೀಗ ಚೈನೀಸ್ ಬಾದಾಮಿ ಕುಕೀಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಉಳಿದ ಕುಕೀಸ್‌ಗಳನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ ಬೇಕೆನಿಸಿದಾಗ ಸವಿಯಬಹುದು. ಇದನ್ನೂ ಓದಿ: ಪಿಜ್ಜಾ ಸ್ಯಾಂಡ್‌ವಿಚ್ ಅಂದ್ರೆ ಇಷ್ಟ, ಆದ್ರೆ ಮಾಡಲು ಗೊತ್ತಿಲ್ಲ ಅನ್ನೋರಿಗೆ ಇಲ್ಲಿದೆ ರೆಸಿಪಿ