Connect with us

Latest

ಭಾರತದ ವಿರುದ್ಧ ಸೈಬರ್ ದಾಳಿಗೆ ಚೀನಾ ಸಿದ್ಧತೆ

Published

on

ನವದೆಹಲಿ: ಭಾರತ ವಿರುದ್ಧ ಸೈಬರ್ ದಾಳಿ ನಡೆಸಲು ಚೀನಾ ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಚೀನಾ ಮಿಲಿಟರಿಯೂ ಭಾರತದ ರಕ್ಷಣಾ ಮಾಹಿತಿಗಳನ್ನು ಕದಿಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೂಲಗಳ ಪ್ರಕಾರ ಚೀನಾದ ಮಿಲಿಟರಿಯಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಯೂನಿಟ್ 61398 ಸೈಬರ್ ದಾಳಿಯನ್ನ ನಡೆಸಲು ಹೊಣೆಹೊತ್ತಿದ್ದು, ಈಗಾಗಲೇ ಭೌಗೋಳಿಕ ಸ್ಥಳಗಳು ಮಾಹಿತಿಯನ್ನು ಕಲೆ ಹಾಕುತ್ತಿದೆ ಎಂದು ಗುಪ್ತಚರ ಇಲಾಖೆ ಸರ್ಕಾರ ಮಾಹಿತಿ ನೀಡಿದೆ.

ಶಾಂಘೈನಲ್ಲಿ ಬೀಡು ಬಿಟ್ಟಿರುವ ಹ್ಯಾಕರ್ ಗಳು ಚೀನಾದ ಗುಪ್ತಚರ ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ದೇಶದ ಕೈಗಾರಿಕೆ ಮತ್ತು ಸರ್ಕಾರಿ ಸಂಸ್ಥೆಗಳ ಸೂಕ್ಷ್ಮ ಮಾಹಿತಿಗಳನ್ನ ಹ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಮೊದಲ ಪರಮಾಣು ಜಲಂತರ್ಗಾಮಿ ಐಎನ್‍ಎಸ್ ಅರಿಹಂತ್ ಸೋಮವಾರ ಪರೀಕ್ಷಾರ್ಥ ಗಸ್ತು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಈ ಮೂಲಕ ನೌಕಾ ಸೇನೆಗೆ ಆನೆ ಬಲ ಬಂದಂತಾಗಿದೆ. ಜೊತೆಗೆ ವಾಯು, ನೆಲ ಹಾಗೂ ಜಲಗಳಲ್ಲಿ ಪರಮಾಣು ಅಸ್ತ್ರಗಳ ಸಾಮರ್ಥ್ಯ ಬೆಳೆಸಿಕೊಂಡ ಜಾಗತಿಕ ಶಕ್ತಿಶಾಲಿ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿಕೊಂಡಿದೆ. ಒಂದು ತಿಂಗಳ ಕಾಲ ನೀರಿನ ಒಳಗಡೆಯೇ ನಿಲ್ಲುವ ಸಾಮರ್ಥ್ಯವನ್ನು ಅರಿಹಂತ್ ಹೊಂದಿದೆ.

ಭಾರತ ಅಮೆರಿಕದಿಂದ ಪಿ8ಐ ಯುದ್ಧ ವಿಮಾನವನ್ನು ಖರೀದಿಸಿದ್ದು, ಈ ವಿಮಾನ ನೀರಿನಲ್ಲಿ ಅಡಗಿರುವ ಜಲಂತರ್ಗಾಮಿಯನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *