ಬೀಜಿಂಗ್: ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೀನಾದಲ್ಲಿ (China) 6 ದಶಕಗಳಲ್ಲೇ ಮೊದಲ ಬಾರಿ ಜನಸಂಖ್ಯೆ (Population) ಗಣನೀಯವಾಗಿ ಇಳಿಕೆಯಾಗಿರುವುದಾಗಿ ವರದಿಯಾಗಿದೆ.
ಚೀನಾದ ಜನಸಂಖ್ಯೆ ಕಳೆದ 6 ದಶಕಗಳಲ್ಲಿ ಮೊದಲ ಬಾರಿ ಕಳೆದ ವರ್ಷ ಕುಗ್ಗಿದೆ ಎಂದು ಅಧಿಕೃತ ಅಂಕಿಅಂಶವೊಂದು ಮಂಗಳವಾರ ತಿಳಿಸಿದೆ. 1.4 ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಜನರಿಗೆ ವಯಸ್ಸಾದಂತೆ ಜನನದ ದರ ತೀವ್ರವಾಗಿ ಇಳಿಕೆಯಾಗುತ್ತಿದೆ ಎನ್ನಲಾಗುತ್ತಿದೆ. ಇದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
Advertisement
Advertisement
2022ರ ಅಂತ್ಯದ ವೇಳೆಗೆ ಚೀನಾದ ಜನಸಂಖ್ಯೆ ಸುಮಾರು 141,17,50,000 ರಷ್ಟಿತ್ತು ಎಂದು ಬೀಜಿಂಗ್ನ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಮಂಗಳವಾರ ವರದಿ ಮಾಡಿದೆ. 2021ರ ವರ್ಷದ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಇದು 8,50,000 ? ರಷ್ಟು ಜನಸಂಖ್ಯೆ ಇಳಿಕೆಯಾಗಿದೆ. ಇದನ್ನೂ ಓದಿ: ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್
Advertisement
1960ರಲ್ಲಿ ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಕ್ಷಾಮ ಉಂಟಾಗಿ ಚೀನಾದ ಜನಸಂಖ್ಯೆ ಕುಸಿದಿತ್ತು. ಗ್ರೇಟ್ ಲೀಪ್ ಫಾರ್ವರ್ಡ್ ಎಂದು ಕರೆಯಲಾಗುವ ವಿನಾಶಕಾರಿ ಮಾವೋ ಝೆಂಗ್ ಕೃಷಿ ನೀತಿಯಿಂದಾಗಿ ಈ ಕ್ಷಾಮ ಉಂಟಾಗಿತ್ತು.
Advertisement
ಚೀನಾದಲ್ಲಿ ಮಿತಿಮೀರಿ ಜನಸಂಖ್ಯೆ ಬೆಳೆಯುತ್ತಿದ್ದ ಹಿನ್ನೆಲೆ 1980ರಲ್ಲಿ ಕಟ್ಟುನಿಟ್ಟಿನ 1 ಮಗುವಿನ ನೀತಿಯನ್ನು ತಂದಿತ್ತು. ಈ ನೀತಿಯನ್ನು 2016ರಲ್ಲಿ ಕೊನೆಗೊಳಿಸಿ, 2021ರಲ್ಲಿ ದಂಪತಿಗೆ 3 ಮಕ್ಕಳನ್ನು ಹೊಂದಲು ಅವಕಾಶ ನೀಡಿತು. ಇದನ್ನೂ ಓದಿ: ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ ಕೇರಳ ಸರ್ಕಾರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k