ಬೀಜಿಂಗ್: ಹಾಂಕಾಂಗ್ ಮೇಲೆ ನಾವು ಸಂಪೂರ್ಣ ನಿಯಂತ್ರಣ ಸಾಧಿಸಿದ್ದೇವೆ. ಮುಂದಿನ ಗುರಿ ತೈವಾನ್(Taiwan) ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್(Xi Jinping ) ಹೇಳಿದ್ದಾರೆ.
5 ವರ್ಷಕ್ಕೊಮ್ಮೆ ನಡೆಯುವ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ 20ನೇ ಅಧಿವೇಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತೈವಾನ್ ಪ್ರತ್ಯೇಕತಾವಾದದ ವಿರುದ್ಧ ದೊಡ್ಡ ಹೋರಾಟವನ್ನು ನಡೆಸುತ್ತಿದೆ. ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವವರನ್ನು ಮಟ್ಟ ಹಾಕಲು ಚೀನಾ ಸಮರ್ಥವಾಗಿದೆ ಎಂದರು.
Advertisement
ಹಾಂಕಾಂಗ್‌ನಲ್ಲಿ(Hong Kong) ಅವ್ಯವಸ್ಥೆ ಇತ್ತು. ಈಗ ಅಲ್ಲಿ ಉತ್ತಮ ಆಡಳಿತ ನೀಡಲಾಗುತ್ತದೆ. ಹಾಂಕಾಂಗ್ ಪರಿವರ್ತನೆ ಶ್ಲಾಘನೀಯ ಎಂದು ಬಣ್ಣಿಸಿದರು. ಇದನ್ನೂ ಓದಿ: ರಷ್ಯಾ ಸೇನಾ ನೆಲೆ ಮೇಲೆ ಗುಂಡಿನ ದಾಳಿ- 11 ಸಾವು
Advertisement
Advertisement
ಕ್ಸಿ ಜಿನ್‌ಪಿಂಗ್ ಮೂರನೇ ಬಾರಿ ಅಧ್ಯಕ್ಷ ಸ್ಥಾನ ಮೇಲೆ ಕಣ್ಣಿಟ್ಟಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC)ಯ 20 ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಅಕ್ಟೋಬರ್ 16 ರಿಂದ 22 ರವರೆಗೆ ನಡೆಯಲಿದೆ. ಐದು ವರ್ಷಗಳ ಅವಧಿಗೆ ಪಕ್ಷದ ನಾಯಕರಾಗಿ ಆಯ್ಕೆಯಾದರೆ, ಮಾರ್ಚ್‌ನಲ್ಲಿ ನಡೆಯಲಿರುವ ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ವಾರ್ಷಿಕ ಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
Advertisement
ಕೋವಿಡ್ ಕಠಿಣ ನಿರ್ಬಂಧ ಈಗಲೂ ಚೀನಾದಲ್ಲಿ ಜಾರಿಯಲ್ಲಿದೆ. ಅಷ್ಟೇ ಅಲ್ಲದೇ ನಿರುದ್ಯೋಗ ಪ್ರಮಾಣ ಭಾರೀ ಏರಿಕೆಯಾಗಿದ್ದು ಚೀನಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.