ಬೀಜಿಂಗ್: ಚೀನಾದ ರಕ್ಷಣಾ ಸಚಿವ (Chinese Defence Minister) ಲಿ ಶಾಂಗ್‌ಫು (Li Shangfu) ನಾಪತ್ತೆಯಾಗಿದ್ದಾರೆ ಎಂದು ಯುಎಸ್ ವರದಿ ತಿಳಿಸಿದೆ. ಶಾಂಗ್‌ಫು ಅವರು ಕಳೆದ 2 ವಾರಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ.
ಜಪಾನ್‌ಗೆ US ರಾಯಭಾರಿಯಾಗಿರುವ ರಹಮ್ ಇಮ್ಯಾನುಯೆಲ್ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. “ಅಧ್ಯಕ್ಷ ಕ್ಷಿ ಜಿನ್‌ಪಿಂಗ್ (Xi Jinping) ಅವರ ಕ್ಯಾಬಿನೆಟ್ ತಂಡದ ಪರಿಸ್ಥಿತಿ ಈಗ ಅಗಾಥಾ ಕ್ರಿಸ್ಟಿ ಅವರ ಕಾದಂಬರಿ ‘ಆ್ಯಂಡ್ ದನ್ ದೇರ್ ವರ್ ನನ್’ ಹೋಲುತ್ತದೆ” ಎಂದು ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಸಿಂಗಾಪುರದ ಅಧ್ಯಕ್ಷರಾಗಿ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ ಪ್ರಮಾಣ ವಚನ
ಮೊದಲು ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ನಾಪತ್ತೆಯಾಗುತ್ತಾರೆ. ನಂತರ ರಾಕೆಟ್ ಫೋರ್ಸ್ ಕಮಾಂಡರ್‌ಗಳು ಕಾಣೆಯಾಗುತ್ತಾರೆ. ಈಗ ರಕ್ಷಣಾ ಸಚಿವ ಲಿ ಶಾಂಗ್‌ಫು ಎರಡು ವಾರಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಈ ರೇಸ್‌ನಲ್ಲಿ ಯಾರು ಗೆಲ್ತಾರೆ? ಚೀನಾದ ಯುವಕರಾ ಅಥವಾ ಕ್ಷಿ ಜಿನ್‌ಪಿಂಗ್ ಅವರಾ? ಎಂದು ಪ್ರಶ್ನಿಸಿ ಅವರು ಬರೆದುಕೊಂಡಿದ್ದಾರೆ.
ರಕ್ಷಣಾ ಸಚಿವ ಲಿ ಶಾಂಗ್‌ಫು ಅವರು 3 ವಾರಗಳಿಂದ ಕಾಣಿಸಿಕೊಂಡಿಲ್ಲ. ಅವರು ವಿಯೆಟ್ನಾಂ ಪ್ರವಾಸಕ್ಕೂ ಹೋಗಿಲ್ಲ. ಸಿಂಗಾಪುರದ ನೌಕಾಪಡೆಯ ಮುಖ್ಯಸ್ಥರೊಂದಿಗಿನ ಅವರ ನಿಗದಿತ ಸಭೆಗೆ ಗೈರುಹಾಜರಾಗಿದ್ದಾರೆ. ಏಕೆಂದರೆ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಜಗತ್ತಿನಲ್ಲೇ ಮೊದಲ ರಾಷ್ಟ್ರ – ತಾಲಿಬಾನ್ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಚೀನಾ
ಜುಲೈನಲ್ಲಿ ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ನಾಪತ್ತೆಯಾಗಿದ್ದರು. ಅವರ ಬಳಿಕ ಈಗ ಶಾಂಗ್‌ಫು ಕಣ್ಮರೆಯಾಗಿದ್ದಾರೆ. ಎರಡು ತಿಂಗಳ ಹಿಂದೆ ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರು ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಫೋರ್ಸ್‌ನಿಂದ ಇಬ್ಬರು ಉನ್ನತ ಜನರಲ್ ಅಧಿಕಾರಿಗಳನ್ನು ತೆಗೆದುಹಾಕಿದ್ದರು.
Web Stories