ಬೀಜಿಂಗ್: ಆಸ್ಪತ್ರೆ ಸೇರೋಣ ಅಂದ್ರೆ ಬೆಡ್ ಇಲ್ಲ. ಐಸಿಯುಗೆ ಅಡ್ಮಿಟ್ ಆಗ್ಬೇಕು ಅಂದ್ರೆ ಆಕ್ಸಿಜನ್ ಇಲ್ಲ. ಕೊನೆಗೆ ಸತ್ರು ಅಂತಾ ಇಟ್ಕೊಳಿ ಮಾರ್ಚುರಿಗಳು ಕೂಡ ಖಾಲಿ ಇಲ್ಲ. ಇದು ಕೋವಿಡ್‍ನಿಂದ (Covid-19) ತತ್ತರಿಸಿರುವ ಚೀನಾದಲ್ಲಿ (China) ಕಂಡುಬಂದಿರೋ ಪರಿಸ್ಥಿತಿ.
Advertisement
ಚೀನಾದ ಶೇಕಡಾ 18ರಷ್ಟು ಮಂದಿಗೆ ಎರಡು ವಾರಗಳಲ್ಲಿ ಸೋಂಕು ತಗುಲಿದೆ. ಆದರೆ ಚೀನಾ ಮಾತ್ರ ಈ ಅವಧಿಯಲ್ಲಿ ಬಂದಿರೋ ಕೇಸ್ 62 ಸಾವಿರವಷ್ಟೇ ಅಂದಿದೆ. ಅಲ್ದೇ, ಕೇವಲ ಒಂದು ಸಾವಾಗಿದ್ಯಂತೆ. ಅಂದ ಹಾಗೇ, ಇನ್ಮುಂದೆ ಕೋವಿಡ್ ಅಂಕಿ ಸಂಖ್ಯೆ ನೀಡದಿರಲು ಚೀನಾ ಸರ್ಕಾರ ನಿರ್ಧರಿಸಿದೆ. ಆದರೆ ಜಗತ್ತಿಗೆ ಚೀನಾದ ಕೊರೊನಾ ಸಾವು ನೋವು ಜಗಜ್ಜಾಹಿರಾಗಿದೆ. ಕೋಟಿಗಟ್ಟಲೇ ಕೋವಿಡ್ ಕೇಸ್ ದಾಖಲಾಗುತ್ತಿರುವುದರಿಂದ ಚೀನಾ ಕಂಗೆಟ್ಟಿದೆ. ಚೀನಾದ ಚಿಕ್ಕ ಚಿಕ್ಕ ಪಟ್ಟಣಗಳ ಆಸ್ಪತ್ರೆಗಳೆಲ್ಲಾ ಫುಲ್ ರಷ್ ಆಗೋಗಿವೆ. ರೋಗಿಗಳನ್ನು ಹೊತ್ತು ತಂದ ಅಂಬುಲೆನ್ಸ್‌ಗಳನ್ನು ಹಾಗೇ ವಾಪಸ್ ಕಳಿಸಲಾಗ್ತಿದೆ. ಕಳೆದ 20 ದಿನಗಳಲ್ಲಿ 25 ಕೋಟಿ ಮಂದಿಗೆ ಕೋವಿಡ್ (Covid-19) ಬಂದಿದೆ. ಆದರೆ ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಚೀನಾ ಇಲ್ಲ. ಇದನ್ನೂ ಓದಿ: ದೇವಿ ಕನಸಲ್ಲಿ ಬಂದು ನಿಧಿ ತೋರಿಸಿದ್ಲು ಅಂತಾ ಅರಣ್ಯದಲ್ಲಿ ಬಾವಿ ತೋಡಿ ನಿಧಿ ಹುಡುಕ್ತಿದ್ದ ನಾಲ್ವರು ಅರೆಸ್ಟ್
Advertisement
Advertisement
ಡಿಸೆಂಬರ್ ತಿಂಗಳ ಮೊದಲ 20 ದಿನಗಳಲ್ಲಿಯೇ ಸುಮಾರು 25 ಕೋಟಿ ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿತ್ತು. ಡಿಸೆಂಬರ್ 1 ರಿಂದ 20 ರವರೆಗೆ 24.8 ಕೋಟಿ ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಇದು ಚೀನಾ ಜನಸಂಖ್ಯೆಯ ಶೇ.17.65ರಷ್ಟಿದೆ ಎಂದು ಸೋರಿಕೆಯಾದ ದಾಖಲೆಗಳು ಹೇಳಿದ್ದವು. ಈ ದಾಖಲೆಗಳು ಅಸಲಿ ಎಂದು ಹಿರಿಯ ಪತ್ರಕರ್ತರೊಬ್ಬರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಹಲವೆಡೆ ಸ್ಫೋಟ – 5 ಸಾವು, 10 ಮಂದಿಗೆ ಗಾಯ