ಬೀಜಿಂಗ್: ಚೀನಾದಲ್ಲಿ (China) ಕೋವಿಡ್ (Covid-19) ಆರ್ಭಟ ನಿಲ್ತಿಲ್ಲ. ದಿನವೂ ಲಕ್ಷಾಂತರ ಮಂದಿ ಸೋಂಕು ಪೀಡಿತರಾಗ್ತಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಾಲು ಹೆಚ್ತಿದೆ. ಶವಾಗಾರಗಳ ಮುಂದೆ ಹೆಣಗಳ ರಾಶಿಯೇ ಬಿದ್ದಿದೆ. ತುಂಬಾ ಕಡೆ ಅಂತ್ಯಕ್ರಿಯೆಗೂ ಕನಿಷ್ಠ 10 ದಿನ ಬೇಕಿದೆಯಂತೆ. ಶಾಂಘೈ ಸಮೀಪದ ಜಿಯಾಂಗ್‍ನಲ್ಲಿ ದಿನವೊಂದಕ್ಕೆ ಕನಿಷ್ಠ 10ಲಕ್ಷ ಕೇಸ್ ವರದಿಯಾಗ್ತಿವೆ. ಚೀನಾದ ಈ ಪರಿಸ್ಥಿತಿಗೆ ಬಿಎಫ್.7 ವೈರಸ್ ಮಾತ್ರ ಕಾರಣವಲ್ಲ. ಒಟ್ಟು ನಾಲ್ಕು ವೇರಿಯಂಟ್‍ಗಳು ಚೀನಾದ ಇಂದಿನ ಸ್ಥಿತಿಗೆ ಕಾರಣ ಎಂಬ ಸತ್ಯ ಬಯಲಾಗಿದೆ.
Advertisement
ಇದು ಇನ್ನು ಮೂರ್ನಾಲ್ಕು ದಿನಗಳಲ್ಲಿ 25 ಲಕ್ಷ ದಾಟಬಹುದು ಎಂದು ತಜ್ಞರು ಆತಂಕ ಹೊರಹಾಕಿದ್ದಾರೆ. ಇಂತಹ ಹೊತ್ತಲ್ಲೂ ಚೀನಾ ಸರ್ಕಾರ ಕೊರೊನಾ (Corona) ನಿಯಂತ್ರಣಕ್ಕೆ ಯಾವುದೇ ಕ್ರಮ ತಗೋತಿಲ್ಲ. ಬದಲಿಗೆ ಇರುವ ಅಲ್ಪಸ್ವಲ್ಪ ನಿಯಮಗಳನ್ನು ಕೂಡ ತೆಗೆದುಹಾಕಿದೆ. ವಿದೇಶದಿಂದ ಬರುವ ಪ್ರಯಾಣಿಕರಿಗೆ ಮೂರು ವರ್ಷದಿಂದ ಜಾರಿಯಲ್ಲಿದ್ದ ಕ್ವಾರಂಟೈನ್ ನಿಯಮವನ್ನು ತೆಗೆದುಹಾಕಿದೆ. ಅಲ್ಲದೇ, ತಮ್ಮ ದೇಶದ ಗಡಿಗಳನ್ನು ಸಂಪೂರ್ಣವಾಗಿ ತೆಗೆದಿರಿಸಲು ಮುಂದಾಗಿದೆ. ಈ ನಿಯಮ ಜನವರಿ 8 ರಿಂದ ಜಾರಿಗೆ ಬರುತ್ತಿದೆ. ಈ ಮಧ್ಯೆ, ಚೀನಾದಲ್ಲಿ ಸೋಂಕು ಸುನಾಮಿಗೆ ಬಿಎಫ್.7 (BF.7) ವೈರಸ್ ಮಾತ್ರ ಕಾರಣವಲ್ಲ. ಒಟ್ಟು ನಾಲ್ಕು ವೇರಿಯಂಟ್‍ಗಳು ಚೀನಾದ ಇಂದಿನ ಸ್ಥಿತಿಗೆ ಕಾರಣ ಎಂದು ಭಾರತದ ಕೋವಿಡ್ ಪ್ಯಾನಲ್ ಮುಖ್ಯಸ್ಥ ಎನ್‍ಕೆ ಆರೋರಾ ತಿಳಿಸಿದ್ದಾರೆ. ಚೀನಾದ ಸ್ಥಿತಿ ನೋಡಿ ನಾವು ಆತಂಕ ಪಡುವ ಸ್ಥಿತಿಯಿಲ್ಲ. ಅಲ್ಲಿಂದ ಸರಿಯಾದ ಮಾಹಿತಿ ಸಿಗದ ಕಾರಣ ನಾವು ಕೋವಿಡ್ ವಿಚಾರದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಿದ್ರೆ ಸಾಕು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಚುನಾವಣಾ ಚಾಣಕ್ಯ – ಬಿಜೆಪಿಯಲ್ಲಿ ಮಂದಹಾಸ
Advertisement
Advertisement
ಚೀನಾದಲ್ಲಿ ಕೊರೊನಾ ಅಬ್ಬರದ ಕಾರಣ ಭಾರತದಲ್ಲೂ ಆತಂಕ ನಿರ್ಮಾಣವಾಗಿದೆ. ದೇಶದಲ್ಲಿ ಕೊರೊನಾ ಸೋಂಕು ಸೈಲೆಂಟ್ ಆಗಿ ಏರಿಕೆ ಕಾಣ್ತಿದೆ. 9 ವಾರಗಳ ಬಳಿಕ ಹೊಸ ಸೋಂಕಿತರ ಸಂಖ್ಯೆಯಲ್ಲಿ ಶೇ.11ರಷ್ಟು ಏರಿಕೆ ಆಗಿದೆ. ಕೇಂದ್ರ ಸರ್ಕಾರ ಸೋಂಕು ನಿಯಂತ್ರಣ ಕ್ರಮ ಕೈಗೊಳ್ತಿದ್ರೂ ದೇಶದಲ್ಲಿ ಸೋಂಕು ಹೆಚ್ಚುವ ಅವಕಾಶಗಳಿವೆ. ಭಾರತಕ್ಕೆ ಮುಂದಿನ 40 ದಿನ ಅತ್ಯಂತ ನಿರ್ಣಾಯಕ. ಈ ಅವಧಿಯಲ್ಲಿ ಸೋಂಕು ಸ್ಫೋಟಿಸದಿದ್ರೆ ನಾವು ಗೆದ್ದಂತೆ. ಜನವರಿ ತಿಂಗಳು ಭಾರತದ ಪಾಲಿಗೆ ಕ್ರಿಟಿಕಲ್. ಫೆಬ್ರವರಿ 10 ವರೆಗೂ ಹುಷಾರಾಗಿ ಇರಬೇಕು ಎಂದು ದೇಶವಾಸಿಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಮತ್ತೊಂದು ಅಲೆ ಬಂದ್ರೂ ಕೋವಿಡ್ ಮರಣಗಳು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತುಂಬಾ ಕಡಿಮೆ ಇರುತ್ತೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ 2 ದಿನದಲ್ಲಿ ದೇಶದ ಎಲ್ಲಾ ಏರ್‌ಪೋರ್ಟ್‌ಗಳಲ್ಲಿ 6,000 ಮಂದಿಗೆ ಕೊರೊನಾ ಟೆಸ್ಟ್ ನಡೆಸಲಾಗಿದ್ದು, ಈ ಪೈಕಿ 39 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ಸುಪಾರಿ ಹ್ಯಾಕರ್ ಆದ ಸಾಫ್ಟ್‌ವೇರ್ ಇಂಜಿನಿಯರ್ – ಮಹಿಳೆಯ ಮೊಬೈಲ್‍ನಿಂದ ನಗ್ನ ವೀಡಿಯೋ ಕಳುಹಿಸಿ ಜೈಲು ಪಾಲು
Advertisement
ಇಂದು ಚೆನ್ನೈಗೆ ಬಂದ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿಗೆ ಮೊನ್ನೆ ವಿದೇಶದಿಂದ ಬಂದಿದ್ದ 12 ಜನರ ಜಿನೋಮ್ ಟೆಸ್ಟ್ ರಿಪೋರ್ಟ್ ಶನಿವಾರ ಹೊರಬೀಳುವ ಸಾಧ್ಯತೆಯಿದೆ. ಈ ಆತಂಕದ ಮಧ್ಯೆ ಕರ್ನಾಟಕ ರಾಜ್ಯದಲ್ಲಿ ಕೋವಿಶೀಲ್ಡ್‌ಗೆ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಕೋವಿಶೀಲ್ಡ್ ಬದಲಾಗಿ ಕಾರ್ಬೇವ್ಯಾಕ್ಸ್ ಲಸಿಕೆಯನ್ನು ಬೂಸ್ಟರ್ ಡೋಸ್ ರೂಪದಲ್ಲಿ ನೀಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.