ವಾಷಿಂಗ್ಟನ್: ತನ್ನ ಹಾಗೂ ಭಾರತದ (India) ಸಂಬಂಧದಲ್ಲಿ ಹಸ್ತಕ್ಷೇಪ ಮಾಡದಂತೆ ಚೀನಾ (China) ಅಮೆರಿಕಾಗೆ (America) ಎಚ್ಚರಿಕೆ ನೀಡಿದೆ.
ಭಾರತ ಅಮೆರಿಕದೊಂದಿಗಿನ ನಿಕಟ ಸಂಬಂಧಕ್ಕೆ ಅಡ್ಡಿಯಾಗಲು ಚೀನಾ ಬಯಸುತ್ತದೆ. ಅದಕ್ಕಾಗಿಯೇ ಚೀನಾ ಭಾರತದ ಗಡಿಯಲ್ಲಿ ಸಂಘರ್ಷದ ತೀವ್ರತೆಯನ್ನು ಕಡಿಮೆ ಮಾಡುತ್ತಿದೆ. ತನ್ನ ಹಾಗೂ ಭಾರತದ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ಚೀನಾ ಅಮೆರಿಕವನ್ನು ಕೇಳಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
Advertisement
Advertisement
ಚೀನಾ 2021ರಿಂದ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಯನ್ನು ಮುಂದುವರಿಸಿದೆ. ಗಡಿಯಲ್ಲಿ ತಮ್ಮ ಅನುಕೂಲಗಳನ್ನು ಕಳೆದುಕೊಳ್ಳುವುದರಿಂದ ಎರಡೂ ಕಡೆಯವರು ವಿರೋಧಿಸಿದ್ದಕ್ಕಾಗಿ ಮಾತುಕತೆಗೆ ಮರಳಲು ಪ್ರಯತ್ನಿಸಿವೆ ಎಂದು ಪೆಂಟಗನ್ ವರದಿಯಲ್ಲಿ ತಿಳಿಸಲಾಗಿದೆ.
Advertisement
2020ರ ಮೇ ಯಿಂದ ಆರಂಭಗೊಂಡ ಭಾರತದೊಂದಿಗಿನ ಉದ್ವಿಗ್ನತೆಯಿಂದ ಎರಡೂ ಕಡೆಯ ಪಡೆಗಳು ಎಲ್‌ಎಸಿ ಉದ್ದಕ್ಕೂ ಕಲ್ಲು, ಲಾಠಿಗಳನ್ನು ಹಿಡಿದು ಘರ್ಷಣೆಯನ್ನು ನಡೆಸಿವೆ. ಇದರ ಪರಿಣಾಮವಾಗಿ ಎರಡೂ ಕಡೆಗಳ ಸೇನೆಯ ನಿಯೋಜನೆಯನ್ನು ಹೆಚ್ಚಿಸಲಾಗಿದೆ ಎಂದು ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಸಲಿಂಗ ವಿವಾಹಗಳನ್ನು ರಕ್ಷಿಸುವ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ
Advertisement
ಚೀನಾ ಹಾಗೂ ಭಾರತ ತಮ್ಮ ಸ್ಥಾನಕ್ಕಾಗಿ ಎರಡೂ ಕಡೆಯವರು ಬಗ್ಗಲಿಲ್ಲ. ಗಡಿಯಲ್ಲಿ ಭಾರತ ತನ್ನ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದ್ದುದನ್ನು ಚೀನಾ ದೂಷಿಸಿದರೆ, ಭಾರತ ತನ್ನ ಭೂಪ್ರದೇಶದೊಳಗೆ ಚೀನಾ ಆಕ್ರಮಣವನ್ನು ನಡೆಸಲು ಮುಂದಾಗುತ್ತಿದೆ ಎಂದು ಆರೋಪಿಸಿದೆ.
2020 ರಲ್ಲಿ ಪ್ರಾರಂಭವಾದ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಚೀನಾ ಹಲವು ಬಾರಿ ಮಿಲಿಟರಿ ಮಟ್ಟದ ಮಾತುಕತೆಗಳನ್ನು ನಡೆಸಿವೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅಮೆರಿಕ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಜಪಾನ್‍ನಲ್ಲಿದ್ದಾರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ