– ಪಾಲಿಕೆಯಿಂದ ಚಿಕ್ಕ ಮಕ್ಕಳಿಗೆ ನ್ಯುಮೋನಿಯಾ ಲಸಿಕೆ ವಿತರಣೆ
– ಆಸ್ಪತ್ರೆಗಳ ಮೇಲೆ ಹದ್ದಿನ ಕಣ್ಣಿಡಲು ಸೂಚನೆ
ಬೆಂಗಳೂರು: ಚೀನಾದಲ್ಲಿ ಹೊಸ ನ್ಯುಮೋನಿಯಾ ಮಾದರಿಯ ವೈರಸ್ ಪತ್ತೆಯಾಗಿದ್ದು, ವಿಶ್ವವನ್ನೇ ಆತಂಕಕ್ಕೆ ದೂಡಿದೆ. ಕೇಂದ್ರ ಸರ್ಕಾರ ಕೂಡ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಸ್ಪತ್ರೆಗಳ ಸೌಲಭ್ಯ ಪರಿಶೀಲಿಸುವಂತೆ ಸೂಚನೆ ನೀಡಿದೆ. ಈ ಮಧ್ಯೆ ಬಿಬಿಎಂಪಿ ಕೂಡ ಕಟ್ಟೆಚ್ಚರ ವಹಿಸಲು ಮುಂದಾಗಿದ್ದು, ಖಾಸಗಿ ಆಸ್ಪತ್ರೆಗಳಿಂದಲೂ ಮಾಹಿತಿ ನೀಡುವಂತೆ ಕೇಳಿದೆ. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ವೈರಸ್; ಆಸ್ಪತ್ರೆಗಳಲ್ಲಿ ತುರ್ತುಕ್ರಮ ಪರಿಶೀಲಿಸುವಂತೆ ರಾಜ್ಯಗಳಿಗೆ ಖಡಕ್ ವಾರ್ನಿಂಗ್
Advertisement
ಕೊರೊನಾ ಬಳಿಕ ಚೀನಾದಲ್ಲಿ ನ್ಯುಮೋನಿಯಾ ಮಾದರಿ ಜ್ವರ ಕಾಣಿಸಿಕೊಳ್ತಿದೆ. ಅದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನಾದಿಂದ ವರದಿ ತರಿಸಿಕೊಂಡಿದೆ. ಇದರಿಂದ ಆತಂಕ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ಕೂಡ ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಈಗಾಗಲೇ ಕೋವಿಡ್ ಸಾಂಕ್ರಾಮಿಕ ಕಾಲವನ್ನ ಎದುರಿಸಿರುವ ಬಿಬಿಎಂಪಿ ನ್ಯುಮೋನಿಯಾ ಮಾದರಿಯ ವೈರಸ್ ಬಗ್ಗೆ ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಆಸ್ಪತ್ರೆಗಳು ಮತ್ತು ನಗರ ಪ್ರಾಥಮಿಕ ಚಿಕಿತ್ಸಾ ಕೇಂಗಳಲ್ಲಿ ನಿಗಾ ವಹಿಸುವಂತೆ ನಿಗಾವಹಿಸುವಂತೆ ಸೂಚನೆ ನೀಡಿದೆ.
Advertisement
Advertisement
ಸದ್ಯ ಚಳಿಗಾಲ ಆಗಿರುವುದರಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗ್ತಿದೆ. ಅದ್ರಲ್ಲೂ ನ್ಯುಮೋನಿಯಾ ಖಾಯಿಲೆಯಿಂದ ಬಳಲುವ ಮಕ್ಕಳ ವರದಿ ಕೇಳುತ್ತಿದೆ. ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆಯೇ ರೇಪ್ ಮಾಡಲು ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ 40 ವರ್ಷ ಜೈಲು ಶಿಕ್ಷೆ
Advertisement
ಆಸ್ಪತ್ರೆಗೆ ಬಿಬಿಎಂಪಿ ಸೂಚನೆ ಏನು?
* ನ್ಯುಮೋನಿಯಾ ಅಂತ ದಾಖಲಾದ ಮಕ್ಕಳ ವರದಿ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
* ಖಾಸಗಿ ಆಸ್ಪತ್ರೆಯವರು ನ್ಯುಮೋನಿಯಾ ಕಾಯಿಲೆ ಅಂತ ದಾಖಲಾಗುವ ಮಕ್ಕಳ ವರದಿ ನೀಡಬೇಕು
* 3 ತಿಂಗಳು, 9 ತಿಂಗಳು, ಒಂದೂವರೆ ವರ್ಷ ಮಗುವಿಗೆ ನ್ಯುಮೋನಿಯಾ ಲಸಿಕೆ ಹಾಕಲು ಸೂಚನೆ
* ಪ್ರತಿ ಮಗುವಿಗೂ ನ್ಯುಮೋನಿಯಾ ಲಸಿಕೆಯನ್ನ ಕಡ್ಡಾಯವಾಗಿ ಹಾಕಿಸಬೇಕು
* ಕೆಸಿ ಜನರಲ್, ಬೌರಿಂಗ್, ಯಲಹಂಕ ಜನರಲ್ ಆಸ್ಪತ್ರೆ ಮೇಲೆ ನಿಗಾ ಇಡಲು ಆರೋಗ್ಯಾಧಿಕಾರಿಗಳಿಗೆ ಸೂಚನೆ
* ಮಕ್ಕಳ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೂಚನೆ.