CoronaInternationalLatestLeading NewsMain PostNational

2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ಅನುಮತಿ

ಬೀಜಿಂಗ್: ಕೊನೆಗೂ 2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ನಿರ್ಧರಿಸಿದೆ.

ಕೋವಿಡ್ ಹೆಚ್ಚಳವಾದ ಕಾರಣದಿಂದಾಗಿ ಚೀನಾ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ನಿರ್ಬಂಧ ವಿಧಿಸಿತ್ತು. ಸದ್ಯ ಚೀನಾದ ಕಾಲೇಜುಗಳಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಮತ್ತು ತಮ್ಮ ಅಧ್ಯಯನವನ್ನು ಪುನರಾರಂಭಿಸಲು, ಚೀನಾಕ್ಕೆ ಹಿಂದಿರುಗುವ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶೈಕ್ಷಣಿಕ ಶಿಕ್ಷಣಕ್ಕಾಗಿ ದೀರ್ಘಾವಧಿಯ ಅಧ್ಯಯನ ಕೈಗೊಳ್ಳಲು ಚೀನಾಕ್ಕೆ ಹೋಗುವ ವಿದ್ಯಾರ್ಥಿಗಳಿಗೆ X1-ವೀಸಾ ನೀಡಲು ನಿರ್ಧರಿಸಿದೆ. ಇದನ್ನೂ ಓದಿ: ಬನಶಂಕರಿ ದೇವಸ್ಥಾನ ಅಭಿವೃದ್ಧಿ – ಮಾಸ್ಟರ್ ಪ್ಲಾನ್‌ಗೆ ಶಶಿಕಲಾ ಜೊಲ್ಲೆ ಸೂಚನೆ

ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಏಷ್ಯನ್ ವ್ಯವಹಾರಗಳ ಇಲಾಖೆಯ ಕೌನ್ಸಿಲರ್ ಜಿ ರಾಂಗ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು, ನಿಮ್ಮ ತಾಳ್ಮೆಯು ಸಾರ್ಥಕವಾಗಿದೆ. ನಾನು ನಿಜವಾಗಿಯೂ ನಿಮ್ಮ ಉತ್ಸಾಹ ಮತ್ತು ಸಂತೋಷವನ್ನು ಹಂಚಿಕೊಳ್ಳಬಲ್ಲೆ. ಚೀನಾಗೆ ಮರಳಿ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.

ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಚೀನಾದಲ್ಲಿ ಕೆಲಸ ಮಾಡುವವರ ಕುಟುಂಬಗಳಿಗೆ ವೀಸಾಗಳನ್ನು ನೀಡುವ ಸಲುವಾಗಿ ನವದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿಯ ಪ್ರಕಟಣೆಯನ್ನು ಅವರ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಪ್ರಕಟಣೆಯ ಪ್ರಕಾರ, ಕೋವಿಡ್ ವೀಸಾ ನಿರ್ಬಂಧಗಳಿಂದಾಗಿ 23,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು, ಹೆಚ್ಚಾಗಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಚೀನಾಕ್ಕೆ ಮರಳಲು ಸಿದ್ಧರಿರುವ ವಿದ್ಯಾರ್ಥಿಗಳ ಹೆಸರುಗಳ ಪಟ್ಟಿಯನ್ನು ನೀಡುವಂತೆ ಭಾರತ ಸರ್ಕಾರಕ್ಕೆ ಕೇಳಿದೆ. ಹೀಗಾಗಿ ಭಾರತ ಸರ್ಕಾರ ಕೂಡ ನೂರಾರು ವಿದ್ಯಾರ್ಥಿಗಳ ಪಟ್ಟಿಯನ್ನು ಸಲ್ಲಿಸಿದೆ. ಇದನ್ನೂ ಓದಿ: ಹಣದಾಸೆಗೆ ಮದುವೆ – ಅನಾರೋಗ್ಯದ ನೆಪ ಹೇಳಿ, ಹಣ ದೋಚಿಕೊಂಡು ಸೊಸೆ ಎಸ್ಕೇಪ್

ಚೀನಾಗೆ ತೆರಳುವ ವಿದ್ಯಾರ್ಥಿಗಳು ವೀಸಾ ಪಡೆಯಬೇಕಾದರೆ, ಹೊಸ ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾನಿಲಯದಿಂದ ನೀಡಲಾದ ಮೂಲ ಪ್ರವೇಶ ಪತ್ರವನ್ನು ಭಾರತದಲ್ಲಿನ ಚೀನಾ ರಾಯಬಾರಿ ಕಚೇರಿಗೆ ಸಲ್ಲಿಸಬೇಕು. ಹಳೆಯ ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾನಿಲಯವು ನೀಡಿದ ಕ್ಯಾಂಪಸ್‌ಗೆ ಹಿಂತಿರುಗುವ ಪ್ರಮಾಣಪತ್ರವನ್ನೂ ಸಲ್ಲಿಸಬೇಕಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

ಅಧಿಕೃತ ಮೂಲಗಳ ಪ್ರಕಾರ, 1,000 ಕ್ಕೂ ಹೆಚ್ಚು ಹಳೆಯ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರೆಸಲು ಚೀನಾಗೆ ತೆರಳಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

Live Tv

Leave a Reply

Your email address will not be published.

Back to top button