ಹೆಚ್ಚು ಮಕ್ಕಳನ್ನ ಹೆರಲು ಚೀನಾ ಪ್ರೋತ್ಸಾಹ – 20ಕ್ಕೂ ಹೆಚ್ಚು ನಗರಗಳಲ್ಲಿ ಹೊಸ ಯೋಜನೆ ಜಾರಿಗೆ ಪ್ಲ್ಯಾನ್

Public TV
1 Min Read
China Birth Rate Falls College Students

ಬೀಜಿಂಗ್: ಜನಸಂಖ್ಯೆಯಲ್ಲಿ ಭಾರತ (India), ಚೀನಾವನ್ನ ಹಿಂದಿಕ್ಕಿದ ನಂತರ ಚೀನಾ ಸರ್ಕಾರ (China Government) ತನ್ನ ದೇಶದಲ್ಲಿ ಹೆಚ್ಚು ಮಕ್ಕಳನ್ನ ಹೆರಲು ಪ್ರೋತ್ಸಾಹ ನೀಡುತ್ತಿದೆ. 3ನೇ ಮಗು ಹೊಂದಲು ಉಚಿತ ಸಬ್ಸಿಡಿಗಳನ್ನು ನೀಡಲು ಮುಂದಾಗಿದೆ. ಜೊತೆಗೆ ವಸತಿ ಸೌಲಭ್ಯ ಹಾಗೂ ತೆರಿಗೆ ವಿನಾಯ್ತಿಯಂತಹ ಸೌಲಭ್ಯಗಳನ್ನ ಕಲ್ಪಿಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.

ಚೀನಾ 1980 ರಿಂದ 2015ರ ವರೆಗೆ ಒಂದು ಮಗು ನೀತಿಯನ್ನ ಜಾರಿಗೆ ತಂದಿತ್ತು. ಆದರೆ ಭಾರತವು ವಿಶ್ವದ ಅತಿಹೆಚ್ಚು ಜನಸಂಖ್ಯೆ (Population) ಹೊಂದಿದ ರಾಷ್ಟ್ರವಾದ ನಂತರ ಚೀನಾ ಮಕ್ಕಳ ಮಿತಿಯನ್ನು 3ಕ್ಕೆ ಹೆಚ್ಚಿಸಿದೆ. ಹೆಚ್ಚು ಮಕ್ಕಳನ್ನು ಹೊಂದುವ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದನ್ನೂ ಓದಿ: ಸಮಂತಾರಂತೆ ಐಟಂ ಡ್ಯಾನ್ಸ್ ಒಪ್ಪಲ್ಲ- ನಾಗಚೈತನ್ಯ ಮಾಜಿಪತ್ನಿಗೆ ಕೃತಿ ಶೆಟ್ಟಿ ಟಕ್ಕರ್

Children

ಅದಕ್ಕಾಗಿಯೇ ಸೌಹಾರ್ದಯುತ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಲು, ಮದುವೆಯಾಗಲು ಮತ್ತು ಮಕ್ಕಳನ್ನು ಹೆರುವ ಸಂಸ್ಕೃತಿಯಲ್ಲಿ ಹೊಸ ಬದಲಾವಣೆ ತರಲು ಚೀನಾ 20ಕ್ಕೂ ಹೆಚ್ಚು ನಗರಗಳಲ್ಲಿ `ಹೊಸ-ಯುಗ’ ಯೋಜನೆಯನ್ನ ಪ್ರಾರಂಭಿಸುತ್ತಿದೆ. ಇದು ಚೀನಾದಲ್ಲಿ ಜನನ ದರ ಹೆಚ್ಚಿಸಲು ಕೈಗೊಂಡ ನೂತನ ಕ್ರಮವಾಗಿದೆ. ಇದನ್ನೂ ಓದಿ: ಅದಾನಿ ಕಂಪನಿ ಬಗ್ಗೆ 2016 ರಿಂದ ಯಾವುದೇ ತನಿಖೆ ನಡೆಸಿಲ್ಲ: ಸೆಬಿ

ಚೀನಾದ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಸರ್ಕಾರದ ಕ್ರಮಗಳನ್ನ ಜಾರಿಗೊಳಿಸುವ ರಾಷ್ಟ್ರೀಯ ಸಂಸ್ಥೆಯಾಗಿದೆ. ಅದರಂತೆ ಮಹಿಳೆಯರಿಗೆ ಮದುವೆಯಾಗಲು ಮತ್ತು ಮಕ್ಕಳು ಹೊಂದುವುದನ್ನ ಪ್ರೋತ್ಸಾಹಿಸಲು ಹೊಸ ಯೋಜನೆಗಳನ್ನ ಪ್ರಾರಂಭಿಸುತ್ತಿದೆ ಎಂದು ಹೇಳಿದೆ.

Population

ಜೊತೆಗೆ ಹೆಣ್ಣುಮಕ್ಕಳು ಸರಿಯಾದ ವಯಸ್ಸಿನಲ್ಲಿ ಮದುವೆಯಾಗಬೇಕು, ಮಕ್ಕಳನ್ನು ಹೊಂದಬೇಕು. ಜೊತೆಗೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಪೋಷಕರು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕಳೆದ ವರ್ಷ ಬೀಜಿಂಗ್ ಸೇರಿದಂತೆ 20 ನಗರಗಳಲ್ಲಿ ಸಂಘವು ಈಗಾಗಲೇ ಯೋಜನೆಯನ್ನ ಪ್ರಾರಂಭಿಸಿದೆ. ಜೊತೆಗೆ ಯುವಜನರಿಗೆ ಮದುವೆ ಮತ್ತು ಹೆರಿಗೆಯ ಪರಿಕಲ್ಪನೆಯ ಬಗ್ಗೆ ಹೆಚ್ಚು ಮಾರ್ಗದರ್ಶನ ನೀಡುವಂತೆ ತಿಳಿಸಿದೆ.

Share This Article