ಬೀಜಿಂಗ್: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್‌ಗಳಿಂದಾಗಿ ಜನರ ಪರೀಕ್ಷೆ ನಡೆಸಲು ಸಾವಿರಾರು ಮಿಲಿಟರಿ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಶಾಂಘೈ ನಗರಕ್ಕೆ ಚೀನಾ ಕಳುಹಿಸಿದೆ.
ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆ ಚೀನಾ ಬರೋಬ್ಬರಿ 2.6 ಕೋಟಿ ನಿವಾಸಿಗಳನ್ನು ಪರೀಕ್ಷಿಸಲು ಕ್ರಮ ಕೈಗೊಂಡಿದೆ. ಚೀನಾ ಶಾಂಘೈ ನಗರಕ್ಕೆ ಸೇನೆ ಹಾಗೂ ಸಾವಿರಾರು ಆರೋಗ್ಯ ಕಾರ್ಯಕರ್ತರನ್ನು ಕಳುಹಿಸಿದೆ. ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್‌ಖಾನ್‌ನನ್ನು ಮಿನಿ ಟ್ರಂಪ್ ಎಂದ ಮಾಜಿ ಪತ್ನಿ
Advertisement
Advertisement
ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಭಾನುವಾರ ಸೇನೆ, ನೌಕಾಪಡೆ ಹಾಗೂ ಜಂಟಿ ಲಾಜಿಸ್ಟಿಕ್ಸ್ ಬೆಂಬಲ ಪಡೆಗಳಿಂದ 2,000 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ಶಾಂಘೈಗೆ ಕಳುಹಿಸಿದೆ. ಜಿಯಾಂಗ್ಸು, ಝೆಜಿಯಾಂಗ್ ಹಾಗೂ ರಾಜಧಾನಿ ಬೀಜಿಂಗ್ ನಗರಗಳಿಂದ 10,000 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಶಾಂಘೈಗೆ ತೆರಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು – ಪ್ರಧಾನಿ ಹೊರತುಪಡಿಸಿ, ಎಲ್ಲಾ ಸಚಿವರು ರಾಜೀನಾಮೆ
Advertisement
ಚೀನಾದ ಶಾಂಘೈ ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆ ಮಾರ್ಚ್ 28ರಂದು ಲಾಕ್ ಡೌನ್ ಪ್ರಾರಂಭಿಸಲಾಯಿತು. ಚೀನಾದ ಕಠಿಣ ನಿಯಮದಿಂದಾಗಿ ಜನರು ತಮ್ಮ ಮನೆಗಳಿಂದ ಹೊರ ಬರಲೂ ಸಾಧ್ಯವಾಗದಂತಹ ಪರಿಸ್ಥಿತಿಗೆ ತೆರಳಿದ್ದಾರೆ.