ಶ್ರೀಲಂಕಾ ತಲುಪಿರುವ ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ

Public TV
1 Min Read
CHINA SHIP Yuan Wang 5

ಬೀಜಿಂಗ್: ಚೀನಾದ ಸಂಶೋಧನಾ ನೌಕೆ ಮಂಗಳವಾರ ಶ್ರೀಲಂಕಾವನ್ನು ತಲುಪಿದ್ದು, ಅದು ನಡೆಸುವ ಚಟುವಟಿಕೆ ಯಾವುದೇ ದೇಶಗಳಿಗೂ ತೊಂದರೆ ಕೊಡುವುದಿಲ್ಲ ಎಂದು ಚೀನಾ ಭರವಸೆ ನೀಡಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ಯುವಾನ್ ವಾಂಗ್ 5 ಹಡಗು ಶ್ರೀಲಂಕಾದ ಸಹಕಾರದಿಂದಾಗಿ ಯಶಸ್ವಿಯಾಗಿ ಹಂಬನತೋಟಾ ಬಂದರಿನಲ್ಲಿ ಲಂಗರು ಹಾಕಿದೆ. ಚೀನಾದಿಂದ ಸಾಲ ಪಡೆದು ದಿವಾಳಿಯಾಗಿರುವ ಶ್ರೀಲಂಕಾಗೆ ಬೆಂಬಲ ವಿಸ್ತರಿಸುವ ಯೋಜನೆಯೂ ಇದರಲ್ಲಿ ಒಳಗೊಂಡಿದೆ ಎಂದು ಹೇಳಿದರು.

Yuanwang 5 china spy ship

ಚೀನಾ ಕಳುಹಿಸಿರುವ ಹಡಗಿನ ಬಗ್ಗೆ ಭಾರತ ಹಾಗೂ ಅಮೆರಿಕ ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯಿಸಿದ ವಾಂಗ್, ಯುವಾನ್ ವಾಂಗ್ 5 ಹಡಗು ಅಂತಾರಾಷ್ಟ್ರೀಯ ಮಟ್ಟದ ಒಪ್ಪಂದಗಳಿಗೆ ಬದ್ಧವಾಗಿದೆ. ಇದನ್ನು ನಾನು ಮತ್ತೊಮ್ಮೆ ಒತ್ತಿ ಹೇಳಲು ಬಯಸುತ್ತೇನೆ, ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುವುದು ಸಾಂಪ್ರದಾಯಿಕ ಅಭ್ಯಾಸ ಎಂದರು. ಇದನ್ನೂ ಓದಿ: ಶ್ರೀಲಂಕಾ ತಲುಪಿದ ಚೀನಾದ ಸರ್ವೇಕ್ಷಣಾ ಹಡಗು – ಈ ನೌಕೆಯ ವಿಶೇಷತೆ ಏನು?

ಹಡಗಿನ ಕಾರ್ಯಾಚರಣೆ ಯಾವುದೇ ದೇಶದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಮ್ಮ ಕಾರ್ಯಾಚರಣೆಗೂ ಯಾವುದೇ ದೇಶಗಳು ಅಡ್ಡಿ ಪಡಿಸಬಾರದು ಎಂದು ವಿನಂತಿಸಿದರು.

China India Sri Lanka 1

ಉಪಗ್ರಹ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಟ್ರ್ಯಾಕಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ಚೀನಾದ ಯುವಾನ್ ವಾಂಗ್ ಹಡಗಿನ ಬಗ್ಗೆ ಭಾರತ ಹಾಗೂ ಅಮೆರಿಕ ಕಳವಳ ವ್ಯಕ್ತಪಡಿಸಿದ್ದರಿಂದ ಶ್ರೀಲಂಕಾ ಹಡಗಿನ ಆಗಮನವನ್ನು ವಿಳಂಬಗೊಳಿಸುವಂತೆ ಚೀನಾವನ್ನು ಕೇಳಿತ್ತು. ಬಳಿಕ ಶ್ರೀಲಂಕಾ ಆಗಸ್ಟ್ 16 ರಿಂದ 22ರ ವರೆಗೆ ಹಡಗಿನ ಪ್ರವೇಶಕ್ಕೆ ಅನುಮತಿ ನೀಡಿತು. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅಪಮಾನ – ಬಿಜೆಪಿ ನಾಯಕನ ವಿರುದ್ಧ ಕೇಸ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *