ಬೀಜಿಂಗ್: ಚೀನಾದಲ್ಲಿ ಹಕ್ಕಿಜ್ವರ ಹೆಚ್3ಎನ್8 ತಳಿ ಸೋಂಕು ಇದೇ ಮೊದಲ ಬಾರಿಗೆ ಮಾನವನಲ್ಲಿ ಪತ್ತೆಯಾಗಿದೆ. ಆದರೆ ಈ ಸೋಂಕಿನ ಹರಡುವಿಕೆಯ ತೀವ್ರತೆ ಕಡಿಮೆ ಇದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‍ಎಚ್‍ಸಿ) ತಿಳಿಸಿದೆ.
Advertisement
ಹಕ್ಕಿಜ್ವರ ಮೊದಲ ಬಾರಿಗೆ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಹಕ್ಕಿಜ್ವರ ಹೆಚ್3ಎನ್8 ತಳಿ ಜ್ವರ ಸೇರಿದಂತೆ ಹಲವು ರೋಗಲಕ್ಷಣಗಳನ್ನು ನಾಲ್ಕು ವರ್ಷದ ಬಾಲಕನಲ್ಲಿ ಕಾಣಿಸಿಕೊಂಡಿದೆ. ಬಾಲಕ ಯಾರೊಂದಿಗೂ ಸಂಪರ್ಕ ಹೊಂದಿಲ್ಲ. ಆದರೆ ಮನೆಯಲ್ಲಿದ್ದ ಕೋಳಿ ಮತ್ತು ಕಾಗೆಗಳೊಂದಿಗೆ ಸಂಪರ್ಕ ಹೊಂದಿದ್ದ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಪತ್ನಿ ಸಂಬಳ ನೀಡದಿದ್ದಕ್ಕೆ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿ ಮೇಲೆ ಪತಿಯಿಂದ ಹಲ್ಲೆ
Advertisement
Advertisement
ಹೆಚ್3ಎನ್8 ರೂಪಾಂತರ ವೈರಸ್ ಈ ಹಿಂದೆ ವಿಶ್ವದ ಹಲವೆಡೆ ಕುದುರೆ, ಶ್ವಾನ ಹಾಗೂ ಪಕ್ಷಿಗಳಲ್ಲಿ ಪತ್ತೆಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಚೀನಾದಲ್ಲಿ ಮಾನವನಲ್ಲಿ ಪತ್ತೆಯಾಗಿದೆ. ಈ ಸೋಂಕು ಮಾನವರ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಸೋಂಕು ಹರಡುವಿಕೆಯ ತೀವ್ರತೆ ಕೂಡ ಕಡಿಮೆಯಾಗಿದೆ ಎಂದು ಆರೋಗ್ಯ ಆಯೋಗ ಹೇಳಿದೆ. ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಮಾಡಿ ಮಹಿಳೆಯನ್ನು ಕೊಲೆಗೈದ ಪಾಪಿಗಳು