ಬೀಜಿಂಗ್: ಚೀನಾದಲ್ಲಿ ಮತ್ತೆ ಮಹಾಮಾರಿ ಕೊರೊನಾ ಸದ್ದು ಮಾಡುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 3,400ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ದಾಖಲಾಗಿದೆ.
Advertisement
ಕಳೆದ 2 ವರ್ಷಗಳ ಬಳಿಕ ಚೀನಾದಲ್ಲಿ ಒಂದೇ ದಿನ 3,400ಕ್ಕೂ ಹೆಚ್ಚು ಪ್ರಕರಣ ದಾಖಲಾಗುವುದರೊಂದಿಗೆ ಮತ್ತೆ ಕೊರೊನಾ ಕಂಟಕವಾಗುತ್ತಿದೆ. ಈಗಾಗಲೇ ಚೀನಾದ ಈಶಾನ್ಯ ನಗರಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದೆ. ಪರಿಣಾಮ ಎಲ್ಲಾ ಶಾಲಾ-ಕಾಲೇಜ್, ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆಗಳನ್ನು ಮುಚ್ಚಲಾಗಿದ್ದು, ಲಾಕ್‍ಡೌನ್ ಹೇರಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಲಾಕ್‍ಡೌನ್- 90 ಲಕ್ಷ ಮಂದಿ ನಿವಾಸಿಗಳು ಮನೆಯಲ್ಲಿ ಲಾಕ್
Advertisement
Advertisement
ಚೀನಾದಲ್ಲಿ ಡೆಲ್ಟಾ ವೈರಸ್ ಮತ್ತು ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗಿ ವರದಿಯಾಗಿದೆ. ಈ ಹಿಂದೆ 2019ರ ಕೊನೆಯಲ್ಲಿ ವೈರಸ್ ಮೊದಲು ಪತ್ತೆಯಾದ ಸ್ಥಳದಲ್ಲಿ ಜಾರಿಗೆ ತಂದಿದ್ದಂತಹ ‘ಶೂನ್ಯ-ಕೋವಿಡ್’ ರೂಲ್ಸ್‌ಗಳನ್ನು ಚೀನಾ ಮತ್ತೆ ಆರಂಭಿಸಿದೆ. ಈ ಮೂಲಕ ಜನ ಮನೆ ಬಿಟ್ಟು ಹೊರಬರದಂತೆ ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ
Advertisement
ಕೊರೊನಾ ಪ್ರಕರಣ ವರದಿಯಾಗುತ್ತಿದ್ದಂತೆ ನಗರ ಪ್ರದೇಶಗಳಲ್ಲಿ ಚೀನಾ ಸರ್ಕಾರ ಟೆಸ್ಟಿಂಗ್ ಹೆಚ್ಚಿಸಿದೆ. ಚಾಂಗ್‍ಚುನ್, ಡೋಜೀನ್, ಜಿಲಿನ್ ನಗರಗಳಲ್ಲಿ ವಾರದ 2 ದಿನ ಲಾಕ್‍ಡೌನ್ ವಿಧಿಸಲಾಗಿದೆ. ಮಾಲ್, ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ಕೊರೊನಾ ಪಾಸಿಟಿವ್ ಬಂದೊಡನೆ ಅವರ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರಿಗೂ ಟೆಸ್ಟ್ ನಡೆಸಲು ಸರ್ಕಾರ ನಿರ್ಧರಿಸಿದೆ. ಜನ ಆಸ್ಪತ್ರೆಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಕೊರೊನಾ ಟೆಸ್ಟ್ ಮಾಡಿಸುತ್ತಿದ್ದು, ಅಗತ್ಯ ಸೇವೆಗಳಿಗಾಗಿ ಕೆಲ ಅಂಗಡಿ ಮುಂಗಟ್ಟುಗಳನ್ನು ಕಟ್ಟುನಿಟ್ಟಿನ ನಿಯಮದೊಂದಿಗೆ ತೆರೆಯಲಾಗಿದೆ. ಆದರೆ ಅಲ್ಲಿಗೆ ಸಾರ್ವಜನಿಕರು ಆಗಮಿಸಲು ಕೊರೊನಾ ನೆಗೆಟಿವ್ ರೀಪೋರ್ಟ್ ಕಡ್ಡಾಯಗೊಳಿಸಲಾಗಿದೆ.