* 104% ಪ್ರತಿಸುಂಕ ವಿಧಿಸಿದ ಟ್ರಂಪ್ ವಿರುದ್ಧ ಜಿನ್‌ಪಿಂಗ್ ಪ್ರತ್ಯಾಸ್ತ್ರ
ಬೀಜಿಂಗ್: ಜಗತ್ತಿನ ದೈತ್ಯ ಆರ್ಥಿಕ ದೇಶಗಳಾದ ಅಮೆರಿಕ (America) ಮತ್ತು ಚೀನಾ (China) ನಡುವೆ ವಾಣಿಜ್ಯ ಯುದ್ಧ ಜೋರಾಗಿದೆ. ಅಮೆರಿಕ 104% ಪ್ರತಿಸುಂಕ ವಿಧಿಸಿದ ಬೆನ್ನಲ್ಲೇ, ಚೀನಾವೂ ಟ್ಯಾರಿಫ್ (Tariff) ಅಸ್ತ್ರ ಪ್ರಯೋಗಿಸಿದೆ.
ಚೀನಾದ ಹಣಕಾಸು ಸಚಿವಾಲಯವು ಗುರುವಾರದಿಂದ ಎಲ್ಲಾ ಅಮೆರಿಕನ್ ಸರಕುಗಳ ಮೇಲೆ 84% ರಷ್ಟು ಪ್ರತಿಸುಂಕವನ್ನು ವಿಧಿಸುವುದಾಗಿ ಘೋಷಿಸಿದೆ. ಇದು ಹಿಂದೆ ಘೋಷಿಸಲಾದ 34% ಗಿಂತ ಹೆಚ್ಚಾಗಿದೆ. ಈ ಹೊಸ ಶುಲ್ಕಗಳು ಏ.10 ರಿಂದ ಜಾರಿಗೆ ಬರಲಿವೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಅನ್ನು 104% ಹೆಚ್ಚಿಸಿದ ಅಮೆರಿಕ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲೆ 104% ರಷ್ಟು ಟ್ಯಾರಿಫ್ ವಿಧಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಟ್ರಂಪ್ ಅವರ 104% ರಷ್ಟು ಟ್ಯಾರಿಫ್ ಜಾರಿಗೆ ಬಂದ ನಂತರ ಚೀನಾ, ಅಮೆರಿಕದ್ದು ದುರಹಂಕಾರ ಮತ್ತು ಬೆದರಿಸುವ ನಡವಳಿಕೆ ಎಂದು ಜರಿದಿತ್ತು.
ಕಳೆದ ಶುಕ್ರವಾರ, ಟ್ರಂಪ್ ಅವರ ‘ವಿಮೋಚನಾ ದಿನ’ ಸುಂಕಗಳಿಗೆ ಪ್ರತಿಯಾಗಿ, ಚೀನಾ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಎಲ್ಲಾ ಸರಕುಗಳ ಮೇಲೆ 34% ರಷ್ಟು ಸುಂಕವನ್ನು ಘೋಷಿಸಿತು. ಅಪರೂಪದ ಭೂಮಿಯ ಖನಿಜಗಳ ಮೇಲಿನ ರಫ್ತು ನಿಯಂತ್ರಣಗಳನ್ನು ಹೊರತುಪಡಿಸಿ ಇತರ ಕ್ರಮಗಳನ್ನು ಘೋಷಿಸಿತು. ಅದರ ನಂತರ ಟ್ರಂಪ್ ಚೀನಾದ ಮೇಲೆ 50% ರಷ್ಟು ಸುಂಕವನ್ನು ಹೆಚ್ಚಿಸಿದ್ದಾರೆ. ಅವರೊಂದಿಗೆ ಮಾತುಕತೆ ಕೊನೆಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕ ಸುಂಕ ನೀತಿಯಿಂದಾಗುವ ತೊಂದರೆ ತಪ್ಪಿಸಲು ಭಾರತ-ಚೀನಾ ಒಟ್ಟಾಗಿ ನಿಲ್ಲಬೇಕು: ಚೀನಾ ವಕ್ತಾರೆ