ಚೀನಾ: ವೇಗವಾಗಿ ಹರಡುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಚೀನಾ (China) ಕೈಗಾರಿಕಾ ಕೇಂದ್ರದಲ್ಲಿ ಲಾಕ್‍ಡೌನ್ (Lockdown) ವಿಧಿಸಿದೆ. 9 ಮಿಲಿಯನ್ (90ಲಕ್ಷ) ನಿವಾಸಿಗಳು ಮನೆಯೊಳಗೆ ಇರಲು ಸೂಚನೆ ನೀಡಲಾಗಿದೆ.
ಹೊರಡಿಸಿದ ಆದೇಶಗಳ ಪ್ರಕಾರ, ಈಶಾನ್ಯ ಕೈಗಾರಿಕಾ ಕೇಂದ್ರವಾದ ಚಾಂಗ್‍ಚುನ್‍ನಲ್ಲಿ 9 ಮಿಲಿಯನ್ ನಿವಾಸಿಗಳಿಗೆ ಲಾಕ್‍ಡೌನ್ ವಿಧಿಸಿದೆ. ನಿವಾಸಿಗಳು ತಮ್ಮ ಮನೆಯಿಂದ ಹೊರಗೆ ಬರುವಂತಿಲ್ಲ. ಕೆಲವು ಅನಿವಾರ್ಯತೆಯಿಂದಾಗಿ ಮನೆಯಿಂದ ಹೊರಗೆ ಬರುವವರು ಮೂರು ಸುತ್ತಿನ ಸಾಮೂಹಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ನಗರ ಅಧಿಕಾರಿಗಳು ಈಗಾಲೇ ಎಲ್ಲಾ ವ್ಯವಹಾರ, ಸಾರಿಗೆ ಸಂಪರ್ಕಗಳನ್ನು ಸಹ ಸ್ಥಗಿತಗೊಳಿಸಿದ್ದಾರೆ.
Advertisement
Advertisement
ಡೋಜೀನ್ ನಗರಗಳಲ್ಲಿ ಪ್ರತಿದಿನ 1,000ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಸುಮಾರು 2 ವರ್ಷಗಳ ನಂತರ ಈಚೆಗೆ ಅತಿ ಹೆಚ್ಚು ಹೊಸ ಪ್ರಕರಣಗಳು ಒಂದೇ ದಿನದಲ್ಲಿ ಏರಿಕೆಯಾಗಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ
Advertisement
ಒಂದು ಅಥವಾ ಹೆಚ್ಚಿನ ಪ್ರಕರಣಗಳು ವರದಿಯಾದ ಯಾವುದೇ ಸಮುದಾಯ ಅಥವಾ ನಗರದಲ್ಲಿ ಲಾಕ್‍ಡೌನ್ ಹೇರುವುದಾಗಿ ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಜಿಲಿನ್ ನಗರದಲ್ಲಿ ಚೀನಾದ ಅಧಿಕಾರಿಗಳು ಈಗಾಗಲೇ ಭಾಗಶಃ ಲಾಕ್‍ಡೌನ್‍ನ್ನು ವಿಧಿಸಿದ್ದಾರೆ. ಅಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇತರ ನಗರಗಳೊಂದಿಗೆ ಪ್ರಯಾಣ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇಂದು ಜಿಲಿನ್ ನಗರದಲ್ಲಿ 93 ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗಕ್ಕೆ ಚೀನಾದ ಶೂನ್ಯ ಸಹಿಷ್ಣುತೆ ವಿಧಾನದ ಅಡಿಯಲ್ಲಿ ಈ ಕ್ರಮಗಳನ್ನು ನಿರ್ದಿಷ್ಟಪಡಿಸಲಾಗಿದೆ.