ಬೀಜಿಂಗ್: ಡೊನಾಲ್ಡ್ ಟ್ರಂಪ್ (Donald Trump) ಪ್ರತಿಸುಂಕ ಹೇರಿಗೆ ನೀತಿಯಿಂದ ಅಮೆರಿಕ ಮತ್ತು ಚೀನಾ ನಡುವೆ ಜೋರಾಗಿದೆ. ಹಾಲಿವುಡ್ ಸಿನಿಮಾಗಳನ್ನು ನಿಷೇಧಿಸಲು ಚೀನಾ ಯೋಜಿಸಿದೆ ಎಂದು ವರದಿಯಾಗಿದೆ.
ಆದರೆ, ಈ ವಿಚಾರವನ್ನು ಬೀಜಿಂಗ್ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಅಮೆರಿಕ ಟ್ಯಾರಿಫ್ (Tariff) ಹಾಕಿದೆ. ಚೀನಾದ (China) ರಫ್ತು ವಸ್ತುಗಳ ಮೇಲೂ ಅಮೆರಿಕ ಪ್ರತಿಸುಂಕ ವಿಧಿಸುತ್ತಿದೆ. ಪ್ರತಿಕಾರ ತಂತ್ರದ ಭಾಗವಾಗಿ ಚೀನಾ ಈ ಕ್ರಮಕ್ಕೆ ಮುಂದಾಗಿದ್ದು, ಹಾಲಿವುಡ್ ಚಲನಚಿತ್ರಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಸೇಡಿನ ಯೋಜನೆ ಬಿಡದಿದ್ದರೆ ಚೀನಾದ ಮೇಲೆ 50% ರಷ್ಟು ಸುಂಕ: ಟ್ರಂಪ್ ಎಚ್ಚರಿಕೆ
ಚೀನಾದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ.50 ರಷ್ಟು ಪ್ರತಿಸುಂಕ ವಿಧಿಸುವ ಪ್ರಸ್ತಾಪವನ್ನು ಟ್ರಂಪ್ ಮಂಡಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ವ್ಯಾಪಾರ ವಲಯದಲ್ಲಿ ನಡೆಯುತ್ತಿರುವ ತಿಕ್ಕಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ಸಂಬಂಧಿಸಿದ WeChat ಖಾತೆಯ ಸಾಮಾಜಿಕ ಮಾಧ್ಯಮದಲ್ಲಿ ಚಲನಚಿತ್ರ ನಿಷೇಧದ ಸುದ್ದಿ ಹರಿದಾಡುತ್ತಿದೆ. ಆದರೆ ಚೀನಾ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಇದನ್ನೂ ಓದಿ: Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ
ನಿಷೇಧ ಕ್ರಮವು ಚೀನಾದಲ್ಲಿ ಗಮನಾರ್ಹ ವೀಕ್ಷಕರನ್ನು ಹೊಂದಿರುವ ಹಾಲಿವುಡ್ (Hollywood) ಅನ್ನು ಟಾರ್ಗೆಟ್ ಮಾಡಲಾಗಿದೆ. 2024 ರಲ್ಲಿ, ಯುಎಸ್ ಚಲನಚಿತ್ರಗಳು ಚೀನೀ ಚಿತ್ರಮಂದಿರಗಳಲ್ಲಿ 585 ಮಿಲಿಯನ್ ಡಾಲರ್ ಗಳಿಸಿವೆ. ಇದು ದೇಶದ ಒಟ್ಟು ಬಾಕ್ಸ್ ಆಫೀಸ್ ಸಂಗ್ರಹದ ಸುಮಾರು 3.5% ರಷ್ಟಿದ್ದು, 17.7 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಅಮೆರಿಕದ (America) ಚಲನಚಿತ್ರಗಳ ಮೇಲಿನ ಸಂಪೂರ್ಣ ನಿಷೇಧವು ಚೀನಾದ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಹಾಲಿವುಡ್‌ನ ವಿದೇಶಿ ಆದಾಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.