ಬೀಜಿಂಗ್/ವಾಷಿಂಗ್ಟನ್: ತೈವಾನ್ ವಿಚಾರದಲ್ಲಿ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿರುವ ಚೀನಾ, ಕಂಡಕಂಡವರ ಮೇಲೆಲ್ಲಾ ಎಗರಾಡುತ್ತಿದೆ. ಜಿ-7 ರಾಷ್ಟ್ರಗಳು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಕೆನಡಾ ಕೂಡ ಪಾಲ್ಗೊಂಡಿದ್ದಕ್ಕೆ ಚೀನಾ ಗರಂ ಆಗಿದೆ. ಕೆನಡಾ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿದೆ. ತೈವಾನ್ ವಿಚಾರದಲ್ಲಿ ಕೆನಡಾ ತನ್ನ ತಪ್ಪು ಸರಿ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದೆ.
Advertisement
ಇಂದು ಬೆಳಗ್ಗೆ ಚೀನಾ ತನ್ನ ಪ್ರಮುಖ ದ್ವೀಪದ ಮೇಲೆ ದಾಳಿಯನ್ನು ಅನುಕರಿಸುತ್ತದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಇದನ್ನೂ ಓದಿ: ಅಮೆರಿಕ ಅಧಿಕಾರಿಗಳ ತೈವಾನ್ ಭೇಟಿಯನ್ನು ಚೀನಾದಿಂದ ತಡೆಯಲು ಸಾಧ್ಯವೇ ಇಲ್ಲ: ನ್ಯಾನ್ಸಿ ಪೆಲೋಸಿ
Advertisement
ಅಮೆರಿಕದ ಹೌಸ್ ಆಫ್ ಸ್ಪೀಕರ್ ನ್ಯಾನ್ಸಿ ಫೆಲೊಸಿ ಅವರ ಭೇಟಿ ವಿರುದ್ಧ ತನ್ನ ಆಕ್ರೋಶ ಮುಂದುವರಿಸಿರುವ ಚೀನಾ, ಇದೀಗ ನ್ಯಾನ್ಸಿ ಫೆಲೊಸಿ ವಿರುದ್ಧ ನಿರ್ಬಂಧ ವಿಧಿಸಿದೆ. ನಿನ್ನೆಯಷ್ಟೇ `ಅಮೆರಿಕದ ಅಧಿಕಾರಿಗಳು ತೈವಾನ್‌ಗೆ ಭೇಟಿ ನೀಡುವುದನ್ನು ತಡೆಯಲು, ನಮ್ಮಮ್ಮು ಪ್ರತ್ಯೇಕಿಸಲು ಸಾಧ್ಯವೇ ಇಲ್ಲ’ ಎಂದು ವಾದಿಸಿದ್ದರು.
Advertisement
Advertisement
ಅಲ್ಲದೇ ಅಮೆರಿಕದ ಜೊತೆಗಿನ ರಕ್ಷಣಾ, ಹವಾಮಾನ ಬದಲಾವಣೆ ಕುರಿತ ಮಾತುಕತೆ ರದ್ದುಪಡಿಸಿರುವುದಾಗಿಯೂ ಚೀನಾ ಘೋಷಿಸಿದೆ. ಜೊತೆಗೆ ತೈವಾನ್ ಸುತ್ತಲೂ ತನ್ನ ಸೇನೆ ನಡೆಸುತ್ತಿರುವ ಸೇನಾ ಕವಾಯತ್ತಿಗೆ ಮತ್ತೆ 100 ಯುದ್ಧ ವಿಮಾನಗಳನ್ನು ರವಾನಿಸುವ ಮೂಲಕ ತೈವಾನ್ ವಿರುದ್ಧ ತನ್ನ ಕಪಿಮುಷ್ಠಿ ಬಿಗಿಗೊಳಿಸುವ ಪ್ರಯತ್ನ ಮುಂದುವರಿಸಿದೆ. ಈ ಬಗ್ಗೆ ತೈವಾನ್ ಕಿಡಿ ಕಾರಿದ್ದು 10 ಯುದ್ಧ ನೌಕೆಗಳು ಕೊಲ್ಲಿಯಲ್ಲಿ ಸಂಚರಿಸಿವೆ. ಇದಕ್ಕೆ ಪ್ರತಿಯಾಗಿ 63 ಚೀನಾ ಯುದ್ಧ ವಿಮಾನಗಳು ಹಾರಾಡಿ ತೈವಾನ್ ಅನ್ನು ಯುದ್ಧಕ್ಕೆ ಪ್ರಚೋದಿಸಿವೆ. ಇದನ್ನೂ ಓದಿ: ಶ್ರೀಲಂಕಾದತ್ತ ಸಾಗುತ್ತಿದೆ ಪತ್ತೇದಾರಿ, ಬ್ಯಾಲಿಸ್ಟಿಕ್ ಕ್ಷಿಪಣಿ ಹೊತ್ತ ಚೀನಿ ಹಡಗು
ಹಲವು ನಿರ್ಬಂಧ: ತನ್ನ ಎಚ್ಚರಿಕೆ ಹೊರತಾಗಿಯೂ ತೈವಾನ್‌ಗೆ ಭೇಟಿ ನೀಡಿದ್ದಕ್ಕೆ ಶಿಸ್ತುಕ್ರಮ ಮುಂದುವರಿಸಿರುವ ಚೀನಾ ನ್ಯಾನ್ಸಿ ಫೆಲೊಸಿ ಮತ್ತು ಅವರ ಕುಟುಂಬದ ವಿರುದ್ಧ ನಿರ್ಬಂಧಗಳನ್ನು ಹೇರಿದ್ದು, ಇದು ಸಾಂಕೇತಿಕ ಪ್ರತಿಭಟನೆಯ ಸಂಕೇತ ಎಂದು ಹೇಳಿದೆ.
ಚಾಕ್ಲೇಟ್ ಸಂಸ್ಥೆಯಿಂದ ಸಾರಿ ಕೇಳಿಸಿಕೊಂಡ ಚೀನಾ: ಇನ್ನು ಸ್ನೀಕರ್ ಚಾಕ್ಲೆಟ್ ಸಂಸ್ಥೆಯಿಂದ ಸಾರಿ ಹೇಳಿಸಿಕೊಂಡಿದೆ. ಆ ಚಾಕ್ಲೆಟ್ ಸಂಸ್ಥೆ ಪ್ರಮೋಷನ್ ಭಾಗವಾಗಿ ಇತ್ತೀಚಿಗೆ ಒಂದು ವೀಡಿಯೋ ಬಿಡುಗಡೆ ಮಾಡಿತ್ತು. ಈ ಸ್ನೀಕರ್ ಕ್ಯಾಂಡಿಗಳು ಕೇವಲ ತೈವಾನ್, ಮಲೇಷ್ಯಾ, ದಕ್ಷಿಣ ಕೋರಿಯಾ ದೇಶಗಳಲ್ಲಷ್ಟೇ ಲಭಿಸುತ್ತೆ ಎಂದು ಆ ವೀಡಿಯೋದಲ್ಲಿ ಹೇಳಿಕೊಂಡಿತ್ತು. ಇದು ಚೀನಾದ ಸೋಶಿಯಲ್ ಮೀಡಿಯಾ ವಿಬೋದಲ್ಲಿ ವೈರಲ್ ಆಗಿತ್ತು. ಚೀನಿಯರೆಲ್ಲಾ ಗರಂ ಆಗಿ ತೈವಾನ್ ಒಂದು ದೇಶನಾ ಎಂದು ಪ್ರಶ್ನಿಸಿದ್ದರು. ಈ ಬೆನ್ನಲ್ಲೇ ಸ್ನೀಕರ್ ತಯಾರಿ ಸಂಸ್ಥೆ ಮಾರ್ಸ್ ರಿಗ್ಲಿ ಕ್ಷಮೆ ಕೇಳಿದೆ. ತೈವಾನ್ ಟೆನ್ಶನ್ ನಡ್ವೆಯೂ ಲಡಾಖ್ ಪ್ರಾಂತ್ಯದಲ್ಲಿ ಭಾರತದ ವಾಯುಪಡೆಯ ಅಧಿಕಾರಿಗಳ ಜೊತೆ ಚೀನಾದ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.