InternationalLatestMain Post

ಚೀನಾದಲ್ಲಿ ಮತ್ತೆ ಲಾಕ್‌ಡೌನ್- 6.5 ಕೋಟಿ ಜನ ಲಾಕ್

ಬೀಜಿಂಗ್: ಚೀನಾದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಚೀನಾದ ಚೆಂಗ್ಡು ಮತ್ತು ತಿಯಾನ್ ಹಿನ್ ಪ್ರದೇಶಗಳಲ್ಲಿ ಲಾಕ್‌ಡೌನ್ ಮಾಡಲು ಅಲ್ಲಿನ ಸರ್ಕಾರ ನಿರ್ಧಾರವನ್ನು ಕೈಗೊಂಡಿದೆ.

ಚೀನಾದಲ್ಲಿ ಚೆಂಗ್ಡುವಿನ ಕೇಂದ್ರ ಜಿಂಜಿಯಾಂಗ್ ಜುಕ್ಕೆತಕ್ಕು ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕನ್ನು ತಡೆಗಟ್ಟಲು ಸರ್ಕಾರವು 6.5 ಕೋಟಿ ಜನರನ್ನು ಲಾಕ್‌ಡೌನ್ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ರಾಷ್ಟ್ರೀಯ ರಜಾ ದಿನಗಳಲ್ಲಿ ಅಂತಾರಾಜ್ಯ ಪ್ರಯಾಣದ ಮೇಲೂ ನಿರ್ಬಂಧ ಹೇರಲಾಗಿದೆ.ಇದನ್ನೂ ಓದಿ: ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ- ಪುತ್ತೂರು ಮತ್ತು ಸುಳ್ಯದ 32 ಕಡೆ NIA ದಾಳಿ

140 ಕೋಟಿ ಜನಸಂಖ್ಯೆ ಇರುವ ಚೀನಾ ದೇಶದಲ್ಲಿ 1,552 ಕೋವಿಡ್ ಪ್ರಕರಣಗಳು ವರದಿಯಾಗಿದೆ. 6.5 ಕೋಟಿ ಜನರ ಪೈಕಿ ಸುಮಾರು 2.1 ಕೋಟಿ ಜನರು ಪ್ರಮುಖ ನಗರವಾದ ಚೆಂಗ್ಡು ನಗರದವರು. ಇಲ್ಲಿನ ಜನರಿಗೆ ಮನೆ, ಅಪಾರ್ಟ್‌ಮೆಂಟ್ ಬಿಟ್ಟು ಹೊರಬರದಂತೆ ಸೂಚಿಸಲಾಗಿದೆ. ಇನ್ನು 14 ಹೊಸ ಕೇಸುಗಳು ಪತ್ತೆಯಾದ ತಿಯಾನ್ ಹಿನ್ ನಗರದಲ್ಲೂ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: 2024ರಲ್ಲಿ ಬಿಜೆಪಿಯೇತರ ಸರ್ಕಾರ ಬಂದ್ರೆ ರೈತರಿಗೆ ಉಚಿತ ವಿದ್ಯುತ್ – ಕೆಸಿಆರ್ ಭರವಸೆ

Live Tv

Leave a Reply

Your email address will not be published.

Back to top button