– ಲ್ಯಾಬ್‍ನಲ್ಲಿ ಸೃಷ್ಟಿಯಾಗಿದ್ದಕ್ಕೆ ಯಾವುದೇ ಸಾಕ್ಷಿ ಇಲ್ಲ
ಬೀಜಿಂಗ್: ಲ್ಯಾಬ್‍ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎರಡು ಬಾರಿ ಹೇಳಿದೆ ಎಂದು ಚೀನಾ ತಿಳಿಸಿದೆ.
ಇಂದು ಇಡೀ ವಿಶ್ವಕ್ಕೆ ದೊಡ್ಡ ತಲೆನೋವಾಗಿರುವ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಸೋಂಕು ಇಂದು ವಿಶ್ವವ್ಯಾಪಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರೆ ಇದನ್ನು ಚೀನಾ ಬಯೋವೆಪನ್ ಆಗಿ ಬಳಸುತ್ತಿದೆ. ಇದು ಚೀನಾದ ಲ್ಯಾಬ್‍ನಲ್ಲಿ ತಯಾರದ ಭಯಾನಕ ವೈರಸ್ ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಕೇಳಿ ಬಂದಿದ್ದವು. ಇದನ್ನು ಓದಿ: ಕೊರೊನಾ ವೈರಸ್ ಸೃಷ್ಟಿ ಆಗಿದ್ದು ಎಲ್ಲಿ – ರಹಸ್ಯ ಭೇದಿಸಲು ಹೊರಟ ಅಮೆರಿಕ
Advertisement
Advertisement
ಈ ಮಾತುಗಳನ್ನು ಚೀನಾ ಮುಂಚೆಯಿಂದಲೂ ತಳ್ಳಿ ಹಾಕಿಕೊಂಡು ಬಂದಿತ್ತು. ಈಗ ಮತ್ತೆ ಈ ವಿಚಾರವಾಗಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝೋವೋ ಲಿಜಿಯಾನ್, ಕೊರೊನಾ ಚೀನಾದ ವೈರಸ್ ಅಲ್ಲ. ಇದು ಯಾವುದೇ ಪ್ರಯೋಗಾಲಯಗಳಲ್ಲಿ ಮಾಡಲ್ಪಟ್ಟ ವೈರಸ್ ಅಲ್ಲ. ಇದಕ್ಕೆ ಯಾವುದೇ ಸಾಕ್ಷಿ ಕೂಡ ಇಲ್ಲ. ಇದೇ ಮಾತನ್ನು ವಿಶ್ವ ಆರೋಗ್ಯ ಸಂಸ್ಥೆ ಎರಡು ಬಾರಿ ಹೇಳಿದೆ ಎಂದು ಹೇಳಿದ್ದಾರೆ.
Advertisement
Advertisement
ಬುಧವಾರ ಮಾತನಾಡಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಸಂಭವಿಸಿರುವ ಈ ಭಯಾನಕ ಪರಿಸ್ಥಿತಿ ಯಾಕೆ ಸೃಷ್ಟಿ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದರು. ಟ್ರಂಪ್ ಅವರ ಪ್ರತಿಕ್ರಿಯೆಗೆ ಮಾಧ್ಯಮಗಳು ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಬಳಿ ಈ ಬಗ್ಗೆ ನೀವು ಮಾತನಾಡಿದ್ದೀರಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಲ್ಯಾಬ್ ಬಗ್ಗೆ ಮಾತನಾಡಿದ ವಿಚಾರವನ್ನು ಚರ್ಚಿಸಲು ಇಷ್ಟ ಪಡುವುದಿಲ್ಲ. ಈ ವಿಚಾರವನ್ನು ಚರ್ಚಿಸುವ ಸರಿಯಾದ ಸಮಯ ಇದಲ್ಲ ಎಂದು ಉತ್ತರಿಸಿದ್ದರು. ಇದನ್ನು ಓದಿ: ಕೊರೊನಾ ಚೀನಾ ವೈರಸ್ ಅನ್ನಬೇಡಿ: ಭಾರತಕ್ಕೆ ಚೀನಾ ಮನವಿ
ಈ ಹಿಂದೆಯೂ ಕೂಡ ಟ್ರಂಪ್ ಅವರು ಕೊರೊನಾ ವೈರಸ್ ನ್ನು ಚೀನಾ ವೈರಸ್ ಎಂದು ಹೇಳಿದ್ದರು. ಈ ವಿಚಾರವಾಗಿ ಕಿಡಿಕಾರಿದ್ದ ಚೀನಾ ಕೆಲ ಅಮೆರಿಕದವರು ಬೇಕು ಎಂದೇ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಹೇಳುತ್ತಿದ್ದಾರೆ. ಯಾವುದೇ ಒಂದು ವೈರಸ್ ಅನ್ನು ಒಂದು ದೇಶಕ್ಕೆ ಸೀಮಿತಗೊಳಿಸುವುದು ತಪ್ಪು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ ಎಂದು ಜಾಗತಿಕ ಮಟ್ಟದಲ್ಲಿ ಕೊರೊನಾ ಚೀನಾ ವೈರಸ್ ಅಲ್ಲ ಎಂದು ಅಭಿಯಾನ ಆರಂಭಿಸಿತ್ತು.
ಒಂದು ಭಯಾನಕ ವೈರಸ್ ಅನ್ನು ಒಂದು ದೇಶಕ್ಕೆ ಸೀಮಿತ ಮಾಡಿದರೆ, ಅದೂ ದೇಶದ ಮುಂದಿನ ಬೆಳವಣಿಗೆಗೆ ಮಾರಕವಾಗುತ್ತದೆ. ಈ ಕಾರಣಕ್ಕೆ ಕೊರೊನಾವನ್ನು ಚೀನಾ ವೈರಸ್ ಎನ್ನಬೇಡಿ ಎಂದಿತ್ತು. ಜೊತೆಗೆ ಭಾರತ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯುವ ಸಂಕುಚಿತ ಮನೋಭಾವನೆಯನ್ನು ಹೊಂದಿಲ್ಲ ಎಂದು ಚೀನಾ ರಾಯಭಾರಿ ಅಂದು ಹೇಳಿದ್ದರು.