ದಕ್ಷಿಣ ಚೀನಾ ಸಮುದ್ರದಲ್ಲಿ ಜಗತ್ತಿನ ಬೃಹತ್‌ ಅನಿಲ ನಿಕ್ಷೇಪ ಪತ್ತೆ

Public TV
1 Min Read
China confirms discovering worlds first large shallow gas field in disputed South China Sea 1

ಬೀಜಿಂಗ್: ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ (South China Sea) ಜಗತ್ತಿನ ಅತಿ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪವನ್ನು (Large Shallow Gas Field) ಪತ್ತೆ ಮಾಡಲಾಗಿದೆ ಎಂದು ಚೀನಾ (China) ತಿಳಿಸಿದೆ.

ದಕ್ಷಿಣ ಚೀನಾ ಸಮುದ್ರ ವಿಚಾರವಾಗಿ ಈಗಾಗಲೇ ಹಲವು ದೇಶಗಳಲ್ಲಿ ಮಿಲಿಟರಿ ಮತ್ತು ರಾಜತಾಂತ್ರಿಕ ಕಿತ್ತಾಟ ನಡೆಯುತ್ತಿದೆ. ಈಗ ಅನಿಲ ನಿಕ್ಷೇಪ ಪತ್ತೆಯಾದ ಬಳಿಕ ಈ ಕಿತ್ತಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಚೀನಾ ಸರ್ಕಾರ ರಾಷ್ಟ್ರೀಯ ಕಡಲಾಚೆಯ ತೈಲ ನಿಗಮ (CNOOC) ಈ ವಿಚಾರವನ್ನು ತಿಳಿಸಿದ್ದು ಸಂಬಂಧಿತ ಸರ್ಕಾರಿ ಅಧಿಕಾರಿಗಳು ಡೇಟಾವನ್ನು ಅನುಮೋದಿಸಿದ್ದಾರೆ ಎಂದು ಅದು ಹೇಳಿದೆ.  ಇದನ್ನೂ ಓದಿ: Karnataka Rain Alert: ಆ.12ರ ವರೆಗೆ ಬೆಂಗ್ಳೂರು ಸೇರಿ ವಿವಿಧೆಡೆ ಮಳೆಯ ಮುನ್ಸೂಚನೆ

China confirms discovering worlds first large shallow gas field in disputed South China Sea 2

ಈ ಅನಿಲ ನಿಕ್ಷೇಪ ಇರುವ ಪ್ರದೇಶವು ವಿವಾದಿತ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯೊಳಗೆ ಇದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಅದು ಯಾವುದೇ ವಿವರ ನೀಡಿಲ್ಲ

ಲಿಂಗ್‌ಶುಯಿ 36-1 ಹೆಸರಿನ ಅನಿಲ ನಿಕ್ಷೇಪ ಇರುವ ಜಾಗ ಚೀನಾದ ದಕ್ಷಿಣದ ದ್ವೀಪ ಪ್ರಾಂತ್ಯದ ಹೈನಾನ್‌ನ ಆಗ್ನೇಯ ಭಾಗದ ನೀರಿನಲ್ಲಿದೆ. ದಕ್ಷಿಣ ಚೀನಾ ಸಮುದ್ರ ವಿಚಾರವಾಗಿ ಈಗಾಗಲೇ ಫಿಲಿಪೈನ್ಸ್, ವಿಯೆಟ್ನಾಂ, ಮಲೇಷ್ಯಾ, ಬ್ರೂನಿ ಮತ್ತು ತೈವಾನ್ ಜೊತೆ ಚೀನಾ ಸಂಘರ್ಷ ನಡೆಸುತ್ತಿದೆ. ಈ ಸಣ್ಣ ದೇಶಗಳಿಗೆ ಅಮೆರಿಕ, ಐರೋಪ್ಯ ಒಕ್ಕೂಟ, ಜಪಾನ್‌ ಹಾಗೂ ಇತರ ಮಿತ್ರರಾಷ್ಟ್ರಗಳು ಬೆಂಬಲಕ್ಕೆ ನಿಂತಿವೆ. ಇದನ್ನೂ ಓದಿ: Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ

ದಕ್ಷಿಣ ಚೀನಾ ಸಮುದ್ರ ವಿಶ್ವದ ಅತ್ಯಂತ ಜನನಿಬಿಡ ಹಡಗು ಮಾರ್ಗಗಳಲ್ಲಿ ಒಂದಾಗಿದೆ. ಜಾಗತಿಕ ವ್ಯಾಪಾರದಲ್ಲಿ 20% ವ್ಯಾಪಾರ ಈ ಮಾರ್ಗದ ಮೂಲಕ ಹಾದುಹೋಗುತ್ತದೆ.

2023 ರಲ್ಲಿ 120 ಮಿಲಿಯನ್ ಟನ್ ದ್ರವೀಕೃತ ಮತ್ತು ಪೈಪ್ ಅನಿಲಕ್ಕಾಗಿ ಸುಮಾರು 64.3 ಶತಕೋಟಿ ಡಾಲರ್‌ ಖರ್ಚು ಮಾಡಿದ ಚೀನಾ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಆಮದು ದೇಶವಾಗಿದೆ.

 

Share This Article