3 ತಿಂಗ್ಳಲ್ಲಿ 4,000ಕ್ಕೂ ಅಧಿಕ ಪೋರ್ನ್ ವೆಬ್‍ಸೈಟ್ ಸ್ಥಗಿತಗೊಳಿಸಿದ ಚೀನಾ!

Public TV
1 Min Read
china website

ಬೀಜಿಂಗ್: ಕೇವಲ ಮೂರು ತಿಂಗಳ ಅವಧಿಯಲ್ಲಿ ಚೀನಾ ಸರ್ಕಾರ ಅಶ್ಲೀಲ ವೆಬ್‍ಸೈಟ್ ಹಾಗೂ ಯುವಜನತೆಯ ಮನಸ್ಸಿನ ಮೇಲೆ ಪರಿಣಾಮ ಬೀರುವ ಸುಮಾರು 4,000 ಕ್ಕೂ ಅಧಿಕ ವೆಬ್‍ಸೈಟ್‍ಗಳನ್ನು ಸ್ಥಗಿತಗೊಳಿಸಿದೆ.

ಮಾಧ್ಯಮಗಳ ಮಾಹಿತಿಗಳ ಪ್ರಕಾರ ಚೀನಾ ಸರ್ಕಾರ ಆನ್‍ಲೈನ್ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಿದ್ದು, ಇದರಲ್ಲಿ ಅಂತರ್ಜಾಲದಲ್ಲಿ ಕಂಡುಬರುವ ನಿಯಮಬಾಹಿರ ಹಾಗೂ ಅಶ್ಲೀಲ ವೆಬ್‍ಸೈಟ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ. ಇದಲ್ಲದೇ ಚೀನಾ ಸರ್ಕಾರವು ಆನ್‍ಲೈನ್ ಸ್ವಚ್ಛತಾ ಆಂದೋಲನದ ಮೂಲಕ ಅಶ್ಲೀಲ ದೃಶ್ಯ ಹಾಗೂ ಸಾಹಿತ್ಯ ಪ್ರಕಟಿಸುವ ಎಲ್ಲ ರೀತಿಯ ವೆಬ್‍ಸೈಟ್‍ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ.

file 20170809 16146 cpaslp

ಚೀನಾವು ಕಳೆದ ಮೇ ತಿಂಗಳಿನಿಂದ ಈ ಆಂದೋಲನಕ್ಕೆ ಕರೆ ನೀಡಿದ್ದು, ಇಲ್ಲಿಯವರೆಗೆ ಒಟ್ಟು 4,000 ಕ್ಕೂ ಅಧಿಕ ಪೋರ್ನ್ ಸೈಟ್ ಸೇರಿದಂತೆ ಇತರೆ ವೆಬ್‍ಸೈಟ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಆಂದೋಲನಕ್ಕೂ ಮುನ್ನ ಚೀನಾ ಸರ್ಕಾರ ಸುಮಾರು 1,47,000 ದತ್ತಾಂಶಗಳ ಮಾದರಿಗಳನ್ನು ಪರಶೀಲನೆ ನಡೆಸಿದೆ. ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿವೆ.

ಕೇವಲ ಅಶ್ಲೀಲತೆಯನ್ನು ಪ್ರಕಟಿಸುವ ವೆಬ್‍ಸೈಟ್‍ಗಳು ಮಾತ್ರವಲ್ಲದೇ ಯುವಜನತೆಯನ್ನು ತಪ್ಪು ದಾರಿಗೆಳೆಯುವ ಇತರೆ 230 ಕ್ಕೂ ಅಧಿಕ ಸಂಸ್ಥೆಗಳಿಗೆ ಸಂಬಂಧಪಟ್ಟ ವೆಬ್‍ಸೈಟ್‍ಗಳನ್ನು ಸಹ ಕಿತ್ತುಹಾಕಿದೆ. ಇವುಗಳಲ್ಲಿ ಆನ್‍ಲೈನ್ ಕಾದಂಬರಿಗಳು, ಕಥೆಗಳು, ಪ್ರಚೋದನಾಕಾರಿ ಮತ್ತು ಅಶ್ಲೀಲ ಭಾಷಣದ ವಿಡಿಯೋಗಳು ವೆಬ್‍ಸೈಟ್‍ಗಳು ಸಹ ಸೇರಿವೆ. ಅಲ್ಲದೇ ಮುಂಬರುವ ದಿನಗಳಲ್ಲಿ ಮತ್ತಷ್ಟೂ ಕಠಿಣ ನಿಯಮಗಳನ್ನು ರೂಪಿಸುವುದಾಗಿ ಚೀನಾ ಸರ್ಕಾರ ಎಚ್ಚರಿಕೆ ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *