ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ

Public TV
1 Min Read
artificial moon

ಬೀಜಿಂಗ್: ಭೂಮಿಯ ಮೇಲೆ ಚಂದ್ರನ ಪರಿಸರವನ್ನು ಅನುಕರಿಸಲು ಇದೀಗ ಚೀನಾ ಕೃತಕ ಚಂದ್ರನನ್ನು ನಿರ್ಮಿಸಿದೆ. ಇದರಿಂದ ಬಹ್ಯಾಕಾಶ ಯಾನಿಗಳಿಗೆ ತರಬೇತಿ ನೀಡಲು ಬಹು ಉಪಯುಕ್ತವಾಗಲಿದೆ.

ಹೊಸ ತಂತ್ರಜ್ಞಾನ ಹಾಗೂ ಭವಿಷ್ಯದ ಕಾರ್ಯಾಚರಣೆಗಳನ್ನು ಪರೀಕ್ಷಿಸಲು ಕೃತಕ ಮಿನಿ ಚಂದ್ರನನ್ನು ಚೀನಾ ನಿರ್ಮಿಸಿದೆ. ಜಿಯಾಂಗ್ಸು ಪ್ರಾಂತ್ಯದ ಕುಝೌನಲ್ಲಿರುವ ಈ ಹೊಸ ಸೌಲಭ್ಯ ವಿಶ್ವದಲ್ಲಿಯೇ ಮೊದಲನೆಯದಾಗಿದೆ.

ಈ ಕೃತಕ ಮಿನಿ ಚಂದ್ರ ಸುಮಾರು 2 ಅಡಿ ವ್ಯಾಸ ಹೊಂದಿದ್ದು, ಚಂದ್ರನಂತೆ ಕೃತಕ ಮೇಲ್ಮೈಯನ್ನು ರಚಿಸಲು ಹಗುರವಾದ ಕಲ್ಲು ಮತ್ತು ಧೂಳಿನಿಂದ ಮಾಡಲಾಗಿದೆ. ಈ ಚಂದ್ರನಲ್ಲಿ ಗುರುತ್ವಾಕರ್ಷಣೆಯನ್ನೂ ಕಡಿಮೆ ಮಾಡಿರುವುದು ವಿಶೇಷ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

artificial moon

ವಿಮಾನ ಅಥವಾ ಡ್ರಾಪ್ ಟವರ್‌ಗಳಲ್ಲಿ ಕಡಿಮೆ ಗುರುತ್ವಾಕರ್ಷಣೆಯ ವಾತಾವರಣವನ್ನು ಸೃಷ್ಟಿಸಬಹುದು. ಆದರೆ ಅದು ಕೇವಲ ಕ್ಷಣಿಕವಾಗಿರುತ್ತದೆ. ಈ ಚಂದ್ರನಲ್ಲಿ ಬೇಕಾದಷ್ಟು ಸಮಯ ಕಡಿಮೆ ಗುರುತ್ವಾಕರ್ಷಣೆಯ ಅನುಭವ ಪಡೆಯಬಹುದು ಎಂದು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ ಯುನಿವರ್ಸಿಟಿ ಆಫ್ ಮೈನಿಂಗ್ ಆಂಡ್ ಟೆಕ್ನಾಲಜಿಯ ಲೀ ರುಯಿಲಿನ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಫಿ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್ ಪ್ರಧಾನಿ?

ಚಂದ್ರನ ಮೇಲಿನ ಗುರುತ್ವಾಕರ್ಷಣೆ ಸಂಪೂರ್ಣ ಶೂನ್ಯವಲ್ಲ. ಇದು ಭೂಮಿಯ ಗುರುತ್ವಾಕರ್ಷಣೆಯ ಆರನೇ ಒಂದು ಭಾಗದಷ್ಟು ಹೊಂದಿರುತ್ತದೆ ಎಂದು ಲೀ ತಿಳಿಸಿದ್ದಾರೆ. ಚೀನಾದ 2030ರ ಹೊತ್ತಿಗೆ ಚಂದ್ರನೆಡೆಗೆ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆ ನಡೆಸಿದೆ.

Share This Article