ಚೀನಾದ 6 ಅಂತಸ್ತಿನ ಕಟ್ಟಡ ಕುಸಿತ – 39 ಜನ ನಾಪತ್ತೆ

Public TV
1 Min Read

ಬೀಜಿಂಗ್: ಚೀನಾದ ಮಧ್ಯ ಹುನಾನ್‌ನಲ್ಲಿರುವ 6 ಅಂತಸ್ತಿನ ವಸತಿ ಕಟ್ಟಡ ಕುಸಿತವಾಗಿದ್ದು, ಅವಶೇಷಗಳಡಿ 23 ಮಂದಿ ಸಿಲುಕಿಕೊಂಡಿದ್ದಾರೆ ಹಾಗೂ 39 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಕುಸಿತಗೊಂಡಿರುವ ಕಟ್ಟಡ 6 ಅಂತಸ್ತಿನದ್ದಾಗಿದ್ದು, 700 ಚದರ ಮೀಟರ್ ವಿಸ್ತೀರ್ಣ ಇತ್ತು. ಘಟನೆ ಚಾಂಗ್ಶಾ ನಗರದ ವಾಂಗ್‌ಚೆಂಗ್ ಜಿಲ್ಲೆಯಲ್ಲಿ ನಡೆದಿದೆ. ಅವಶೇಷಗಳಡಿ ಸಿಲುಕಿಕೊಂಡಿರುವ ಹಾಗೂ ಗಾಯಗೊಂಡವರನ್ನು ರಕ್ಷಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶ ನೀಡಿದ್ದಾರೆ. ರಕ್ಷಣಾಧಿಕಾರಿಗಳು ಅವಶೇಷಗಳಲ್ಲಿ ಸಿಲುಕಿದ್ದ ಐವರನ್ನು ರಕ್ಷಿಸಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆ – ಬ್ರಿಟನ್ ಶಾಸಕ ರಾಜೀನಾಮೆ

China building collapse 1

ಕುಸಿತಗೊಂಡ ಕಟ್ಟಡದ ಮಾಲೀಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಅನಧಿಕೃತ ಕಟ್ಟಡ ನಿರ್ಮಾಣ ಹಾಗೂ ಅನಿಯಮಿತ ಕಟ್ಟಡ ಚಟುವಟಿಕೆಗಳ ಮೇಲೆ ಶಿಸ್ತಿನ ಕ್ರಮಗಳನ್ನು ಜಾರಿ ಮಾಡಿ ಇಂತಹ ಅಪಘಾತಗಳನ್ನು ತಡೆಗಟ್ಟಬೇಕು ಎಂದು ತುರ್ತು ನಿರ್ವಹಣಾ ಮಂತ್ರಿ ಹುವಾಂಗ್ ಮಿಂಗ್ ಹೇಳಿದರು. ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

 

Share This Article
Leave a Comment

Leave a Reply

Your email address will not be published. Required fields are marked *