ಬೀಜಿಂಗ್: ವರದಿ ಮಾಡುತ್ತಿದ್ದ ಕೊನೆಯ ಭಾರತದ ಪತ್ರಕರ್ತನಿಗೆ (Journalist) ದೇಶವನ್ನು ತೊರೆಯುವಂತೆ ಚೀನಾ (China) ಸೂಚಿಸಿದೆ.
ಕೋವಿಡ್ 19 ಬಳಿಕ ವಿದೇಶಿ ಪತ್ರಕರ್ತರಿಗೆ ನಿರ್ಬಂಧ ವಿಧಿಸಿದ್ದರೂ ಚೀನಾದಲ್ಲಿ ಭಾರತದ ಮಾಧ್ಯಮಗಳು (Indian Media) ಕೆಲಸ ಮಾಡುತ್ತಿದ್ದವು.
Advertisement
ಪ್ರಸಾರ ಭಾರತಿಯ ಇಬ್ಬರು ಮತ್ತು ಹಿಂದೂ ಪತ್ರಿಕೆಯ ವರದಿಗಾರರ ವೀಸಾವನ್ನು ಈ ವರ್ಷದ ಏಪ್ರಿಲ್‌ನಲ್ಲಿ ಚೀನಾ ನವೀಕರಿಸಿರಲಿಲ್ಲ. ಈಗ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ವರದಿಗಾರನಿಗೆ ದೇಶವನ್ನು ತೊರೆಯುವಂತೆ ಸೂಚಿಸಿದೆ. ಇದನ್ನೂ ಓದಿ: ಜನಸಂಖ್ಯೆ ಸ್ಫೋಟ, ಚೀನಾ ಹಿಂದಿಕ್ಕಿದ ಭಾರತ – ದೇಶದ ಒಟ್ಟು ಜನಸಂಖ್ಯೆ ಎಷ್ಟು ಗೊತ್ತಾ?
Advertisement
Advertisement
ಕೊರೊನಾ ಸೃಷ್ಟಿಕರ್ತ ದೇಶವಾದ ಚೀನಾದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲ ಎನ್ನುವುದು ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಸರ್ಕಾರದ ಎಡವಟ್ಟುಗಳು ವಿಶ್ವಕ್ಕೆ ತಿಳಿಯಬಾರದು ಎಂದು ಬಹಳ ಮಾಧ್ಯಮಗಳಿಗೆ ಬಹಳ ಷರತ್ತು ವಿಧಿಸುತ್ತದೆ. ಅಲ್ಲಿನ ಪ್ರಜೆಗಳಿಗೆ ಭಾರತ ಸುದ್ದಿ ವೆಬ್‌ಸೈಟ್ ವೀಕ್ಷಣೆಯ ಸ್ವಾತಂತ್ರ್ಯವೂ ಇಲ್ಲದಾಗಿದೆ. ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ಗಳ ಮೇಲೆ ಚೀನಿ ಸರ್ಕಾರ ಈ ಹಿಂದೆಯೇ ಸೆನ್ಸಾರ್ ಕತ್ತರಿ ಪ್ರಯೋಗಿಸಿತ್ತು.
Advertisement
ಚೀನಾದ ಮಂದಿ ವಿಪಿಎನ್(ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಸರ್ವರ್ ಮೂಲಕ ಭಾರತದ ವೆಬ್‌ಸೈಟ್‌ಗಳನ್ನು ನೋಡುತ್ತಿದ್ದರು. ಭಾರತದ ವಾಹಿನಿಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿತ್ತು. ಆದರೆ ಇದಕ್ಕೂ ಚೀನಾ ಕತ್ತರಿ ಹಾಕುವಲ್ಲಿ ಯಶಸ್ವಿಯಾಗಿತ್ತು. ತಂತ್ರಜ್ಞಾನದಲ್ಲಿ ಮುಂದುವರಿದಿರುವ ಚೀನಾದ ಶಕ್ತಿಶಾಲಿ ಫೈರ್‌ವಾಲ್ ಸೃಷ್ಟಿಸಿ ವಿಪಿಎನ್‌ಗಳನ್ನೇ ಬ್ಲಾಕ್ ಮಾಡಿತ್ತು.
ಇಂಟರ್‌ನೆಟ್ ಸೆನ್ಸಾರ್ ಮಾಡುವ ವಿಚಾರದಲ್ಲಿ ವಿಶ್ವದಲ್ಲೇ ಚೀನಾ ಸದಾ ಮುಂದು. ಈಗಾಗಲೇ ಇಲ್ಲಿ ಫೇಸ್‌ಬುಕ್, ವಾಟ್ಸಪ್, ಯೂಟ್ಯೂಬ್‌ಗಳು ಸೇರಿದಂತೆ ಹಲವು ತಾಣಗಳು ನಿಷೇಧವಾಗಿದೆ. ಸುದ್ದಿ ತಾಣಗಳಾದ ಬ್ಲೂಮ್ ಬರ್ಗ್, ದಿ ವಾಲ್ ಸ್ಟ್ರೀಟ್ ಜರ್ನಲ್, ನ್ಯೂಯಾರ್ಕ್ ಟೈಮ್ಸ್ ಸಹ ಬ್ಲಾಕ್ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.
ಚೀನಾ ತನ್ನದೇ ಆದ ಮಸೇಜಿಂಗ್ ಅಪ್ಲಿಕೇಶನ್ ಮತ್ತು ಸಾಮಾಜಿಕ ಜಾಲತಾಣವನ್ನು ಹೊಂದಿದ್ದು ಇದರಲ್ಲೂ ದೇಶದ ವಿರುದ್ಧ ಕಮೆಂಟ್ ಮಾಡಿದರೆ ಸೆನ್ಸಾರ್ ಮಾಡುತ್ತದೆ. ತನ್ನ ವಿರುದ್ಧ ಯಾವುದೇ ಟೀಕೆಗಳನ್ನು ಚೀನಾ ಸಹಿಸುವುದಿಲ್ಲ. ಟೀಕೆ ಮಾಡುವ ವೆಬ್‌ಸೈಟ್‌ಗಳ ಯುಆರ್‌ಎಲ್‌ಗಳನ್ನು ಚೀನಾ ʼಗ್ರೇಟ್ ಫೈರ್‌ವಾಲ್ʼ ಮೂಲಕ ಬ್ಲಾಕ್ ಮಾಡಿಸುತ್ತದೆ.
ಚೀನಾ ಸರ್ಕಾರ ಐಪಿ ಅಡ್ರೆಸ್, ಯುಆರ್‌ಎಲ್, ಕೀ ವರ್ಡ್‌ಗಳನ್ನು ಸಹ ಬ್ಲಾಕ್ ಮಾಡುತ್ತದೆ. ಕೋವಿಡ್ 19 ಆರಂಭದಲ್ಲಿ ಈ ವೈರಸ್‌ಗೆ ಸಂಬಂಧಿಸಿದ ಸುದ್ದಿಗಳು ಶೇರ್ ಆಗದಂತೆ ತಡೆಯಲು ಕೆಲವು ಕೀ ವರ್ಡ್‌ಗಳನ್ನು ಬ್ಲಾಕ್ ಮಾಡಿ ದೇಶದಲ್ಲಿ ಸರ್ಚ್ ಆಗದಂತೆ ನೋಡಿಕೊಂಡಿತ್ತು.