ನವದೆಹಲಿ: ಜಿ20 ಶೃಂಗಸಭೆಗೆ (G20 Summit) ಆಗಮಿಸಿದ್ದ ಚೀನಾ (China) ನಿಯೋಗವು ಅನುಮಾನಾಸ್ಪದ ಬ್ಯಾಗ್‌ನೊಂದಿಗೆ (Suspicious Bag) ಹೋಟೆಲ್ ಪ್ರವೇಶಿಸಿದ್ದು, ತಪಾಸಣೆಗೆ ಒಳಪಡಿಸುವಂತೆ ಪೊಲೀಸರು ಒತ್ತಾಯಿಸಿದ ಬೆನ್ನಲ್ಲೇ ಅದನ್ನು ತನ್ನ ರಾಯಭಾರಿ ಕಚೇರಿಗೆ ಕಳುಹಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚೀನಾದ ಪ್ರತಿನಿಧಿಗಳು ಚಾಣಕ್ಯಪುರಿಯಲ್ಲಿರುವ ತಾಜ್ ಪ್ಯಾಲೆಸ್ ಹೋಟೆಲ್‌ನಲ್ಲಿ ತಂಗಿದ್ದರು. ಹೋಟೆಲ್ ಪ್ರವೇಶಿಸುವ ವೇಳೆ ಅವರು ತಮ್ಮೊಂದಿಗೆ ಒಂದು ಬ್ಯಾಗ್ ತಂದಿದ್ದರು. ಭದ್ರತಾ ಶಿಷ್ಟಾಚಾರದ ಪ್ರಕಾರ ಬ್ಯಾಗ್ ಪರಿಶೀಲಿಸಲು ನೀಡುವಂತೆ ಪೊಲೀಸರು ಒತ್ತಾಯಿಸಿದರೂ ಬ್ಯಾಗ್ ನೀಡದೇ ಚೀನೀ ಪ್ರತಿನಿಧಿಗಳು ಹೋಟೇಲ್‌ನಲ್ಲಿ ಗದ್ದಲ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರಿಗೆ ಅನ್ಯಾಯ: ತ.ನಾಡು ಸಚಿವ
Advertisement
Advertisement
ಬ್ಯಾಗ್ ತಪಾಸಣೆಗೆ ನಿರಾಕರಿಸಿದ ಚೀನೀ ನಿಯೋಗವು ಬ್ಯಾಗ್ ಅನ್ನು ತನ್ನ ರಾಯಭಾರಿ ಕಚೇರಿಗೆ ಕಳುಹಿಸಿತು. ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಂದ ಬಂದ ಅನೇಕ ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ಅದನ್ನು ಪರೀಕ್ಷೆಗೆ ಒಳಪಡಿಸಿ ಹೋಟೆಲ್ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಚೀನಾ ನಿಯೋಗದ ಈ ವರ್ತನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಭಾರತಕ್ಕೆ ಸ್ಪೇನ್‌ನ C-295 ಮಿಲಿಟರಿ ವಿಮಾನ ಹಸ್ತಾಂತರ – ಏನಿದರ ವಿಶೇಷ?
Advertisement
Advertisement
ಸೆಪ್ಟೆಂಬರ್ 9 ಮತ್ತು 10ರಂದು ನಡೆದ ಶೃಂಗಸಭೆಯಲ್ಲಿ ಚೀನಾದ ತಂಡವನ್ನು ಪ್ರೀಮಿಯರ್ ಲಿ ಕಿಯಾಂಗ್ ಪ್ರತಿನಿಧಿಸಿದರು. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರು ಶೃಂಗಸಭೆಗೆ ಗೈರಾದ ಹಿನ್ನೆಲೆ ಪ್ರೀಮಿಯರ್ ಲಿ ಕಿಯಾಂಗ್ ಭಾಗಿಯಾಗಿದ್ದರು. ಅವರೊಂದಿಗೆ ಬಂದ ನಿಯೋಗ ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲು
Web Stories