ಬೀಜಿಂಗ್/ವಾಷಿಂಗ್ಟನ್: ಅಮೆರಿಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ ಸುಂಕ (China imposes tariffs) ವಿಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಇದರ ಬೆನ್ನಲ್ಲೇ ಚೀನಾ ಕೂಡ ಅಮೆರಿಕಕ್ಕೆ ಪ್ರತಿ ಸುಂಕ ವಿಧಿಸಿದೆ.
🚨 JUST IN: 🇨🇳 China imposes 34% tariffs on all U.S. imports, escalating the trade war with the U.S. 🇺🇸
📊 Tensions rise as global markets react.#China #TrumpTariffs #TradeWar #US https://t.co/n6eFLH5UFY
— Crypto News (CoinGape) (@CoinGapeMedia) April 4, 2025
ಇದೇ ಏಪ್ರಿಲ್ 10ರಿಂದಲೇ ಅಮೆರಿಕದ (USA) ಎಲ್ಲಾ ಆಮದುಗಳ ಮೇಲೆ 34% ಪ್ರತಿ ಸುಂಕ ವಿಧಿಸುವುದಾಗಿ ಚೀನಾ ಘೋಷಿಸಿದೆ. ಟ್ರಂಪ್ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಚೀನಿ ವಸ್ತುಗಳ ಮೇಲೆ ಶೇ.34 ಸುಂಕ ವಿಧಿಸಿದ ಬಳಿಕ ಚೀನಾದ ನಿರ್ಧಾರ ಹೊರಬಿದ್ದಿದೆ. ಈ ಮೂಲಕ ಅಮೆರಿಕದ ಬಳಿಕೆ ತೆರಿಗೆ ಹೆಚ್ಚಳ ಮಾಡಿದ ಮೊದಲ ದೇಶವಾಗಿದೆ. ಇದನ್ನೂ ಓದಿ: ಇದೇ ನೋಡಿ ಅಮೆರಿಕ ಪೌರತ್ವದ ಗೋಲ್ಡನ್ ಕಾರ್ಡ್ – 43 ಕೋಟಿ ರೂ. ಗೋಲ್ಡ್ ಕಾರ್ಡ್ ಫಸ್ಟ್ ಲುಕ್ ರಿಲೀಸ್
ಇನ್ನು ಅಮೆರಿಕ ಮತ್ತು ಚೀನಾ ದೇಶಗಳ ತೆರಿಗೆ ಏರಿಕೆಯು ಜಾಗತಿಕ ವ್ಯಾಪಾರ ಯುದ್ಧವು ಮಾರುಕಟ್ಟೆಗಳನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಅಂದರೆ ಟ್ರಂಪ್ ಹೊಸ ತೆರಿಗೆ ಘೋಷಣೆ ಬೆನ್ನಲ್ಲೇ ಜಗತ್ತಿನಾದ್ಯಂತ ಷೇರುಮಾರುಕಟ್ಟೆಗಳು ತಲ್ಲಣಗೊಂಡಿವೆ. ಇದೀಗ ಚೀನಾ ಕೂಡ ಹೊಸ ಸುಂಕ ಘೋಷಣೆ ಮೂಲಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಚೀನಾ ಪ್ರತಿ ಸುಂಕ ಘೋಷಣೆ ಬೆನ್ನಲ್ಲೇ ಯೂರೋಪಿಯನ್ ಒಕ್ಕೂಟ ಕೂಡ ತನ್ನ ತೆರಿಗೆ ಪರಿಷ್ಕರಣೆ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂದು ವರದಿಗಳು ತಿಳಿಸಿವೆ.
ಇನ್ನೂ ಚೀನಾ ವಿಧಿಸಿರುವ ಸುಂಕದ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಚೀನಾ ಹೆದರಿದೆ, ಅದಕ್ಕಾಘಿ ತಪ್ಪಾಗಿ ಆಡುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ನನ್ನ ಫ್ರೆಂಡ್ ಎನ್ನುತ್ತಲೇ ಭಾರತದ ವಸ್ತುಗಳಿಗೆ 26% ಪ್ರತಿ ಸುಂಕ ಘೋಷಿಸಿದ ಟ್ರಂಪ್
ಕಳೆದ ಜನವರಿ 20 ರಂದು ಟ್ರಂಪ್ 2ನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಚೀನಿ ಆಮದು ವಸ್ತುಗಳ ಮೇಲೆ ಶೇ.10 ರಷ್ಟು ಪ್ರತಿಸುಂಕವನ್ನು 2 ಬಾರಿ ಹೆಚ್ಚಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ