ತೈವಾನ್ ಸುತ್ತ ಮತ್ತೆ ಮಿಲಿಟರಿ ತಾಲೀಮು ಪ್ರಾರಂಭಿಸಿದ ಚೀನಾ

Public TV
1 Min Read
Taiwan china

ಬೀಜಿಂಗ್: ತೈವಾನ್ ಅಧ್ಯಕ್ಷ ತ್ಸಾಯಿ ಇಂಗ್ ವೆನ್ (Tsai Ing wen) ಅಮೆರಿಕ (America) ಪ್ರವಾಸ ಮುಗಿಸಿ ಹಿಂದಿರುಗಿದ್ದಾರೆ. ಆದರೆ ಇದನ್ನು ಸಹಿಸದ ಚೀನಾ (China) ತೈವಾನ್ (Taiwan) ಸುತ್ತಲಿನ ಸಮುದ್ರ ಪ್ರದೇಶದಲ್ಲಿ 3 ದಿನಗಳ ಮಿಲಿಟರಿ ತಾಲೀಮು (Military Drills) ಪ್ರಾರಂಭಿಸುವುದಾಗಿ ಶನಿವಾರ ಘೋಷಿಸಿದೆ.

ತೈವಾನ್ ಅಧ್ಯಕ್ಷ ಅಮೆರಿಕದಿಂದ ಹಿಂದಿರುಗಿದ ಒಂದು ದಿನದ ಬಳಿಕವಷ್ಟೇ ಚೀನಾ ತೈವಾನ್ ಸುತ್ತ ಮಿಲಿಟರಿ ತಾಲೀಮು ಪ್ರಾರಂಭಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿಯ ಈಸ್ಟರ್ನ್ ಥೀಯೇಟರ್ ಕಮಾಂಡ್ ಯುನೈಟೆಡ್ ಶಾರ್ಪ್ ಸ್ವೀರ್ಡ್ ಏಪ್ರಿಲ್ 8 ರಿಂದ 10 ರವರೆಗೆ ಯುದ್ಧ ತಯಾರಿ ನಡೆಸುತ್ತಿದೆ ಎಂದು ಹೇಳಿದೆ. 

china flag

ತೈವಾನ್‌ನ ರಕ್ಷಣಾ ಸಚಿವಾಲಯ ತನ್ನ ದ್ವೀಪದ ಸುತ್ತಲೂ 13 ಚೀನಾದ ವಿಮಾನಗಳು ಮತ್ತು 3 ಯುದ್ಧನೌಕೆಗಳನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದೆ.

ಅಮೆರಿಕದ ಹೌಸ್ ಸ್ಪೀಕರ್ ಹಾಗೂ ತೈವಾನ್ ಅಧ್ಯಕ್ಷರ ನಡುವೆ ಸಭೆ ನಡೆದ ಬಳಿಕ ಚೀನಾ ಗುರುವಾರ ತೈವಾನ್ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ತಿಳಿಸಿದೆ. ಹಾಗೂ ಅಮೆರಿಕ ತಪ್ಪು ಮತ್ತು ಅಪಾಯಕಾರಿ ಹಾದಿಯಲ್ಲಿದೆ ಎಂದು ಎಚ್ಚರಿಸಿದೆ. ಇದನ್ನೂ ಓದಿ: ವಿಧಾನಸೌಧದಲ್ಲಿರೋ ಜಯಲಲಿತಾ ಸೀರೆ, ಚಪ್ಪಲಿ, ಚಿನ್ನಾಭರಣ ಹರಾಜಿಗೆ ಅಧಿಕಾರಿ ನೇಮಕ!

Share This Article