ಇಸ್ಲಾಮಾಬಾದ್: ಕೊರೊನಾ ವೈರಸ್‌ನಿಂದ (Corona Virus) ಈಗಷ್ಟೇ ಜಗತ್ತು ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಚೀನಾ (China) ಹಾಗೂ ಪಾಕಿಸ್ತಾನ (Pakistan) ಜೈವಿಕ ಅಸ್ತ್ರ ಅಭಿವೃದ್ಧಿಪಡಿಸುವ ರಹಸ್ಯ ಸಂಶೋಧನೆ (Research) ನಡೆಸುತ್ತಿವೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ರಾವಲ್ಪಿಂಡಿಯ ಪ್ರಯೋಗಾಲಯ (Laboratory) ಬಳಸಿಕೊಂಡು ಕೋವಿಡ್‌ಗಿಂತಲೂ ಭೀಕರವಾದ ಹಾಗೂ ಅದಕ್ಕಿಂತ ಹೆಚ್ಚು ಹಾನಿ ಉಂಟುಮಾಡಬಹುದಾದ ವೈರಸ್ (Virus) ಅನ್ನು ಚೀನಾ ಸೃಷ್ಟಿಸಲು ಹೊರಟಿದೆ ಎಂದು ಹಲವು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಮೊದಲ ಬಲಿ – ಸ್ಥಳದಲ್ಲಿಯೇ ಮಹಿಳೆ ಸಾವು
ಜೈವಿಕ ಅಸ್ತ್ರ ಕುರಿತು ಸಂಶೋಧನೆ ನಡೆಸುವ ಸಲುವಾಗಿ ವಿಶ್ವಕ್ಕೆ ಕೋವಿಡ್ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನಾದ ವುಹಾನ್ ವೈರಾಲಜಿ ಸಂಸ್ಥೆ ಹಾಗೂ ಪಾಕಿಸ್ತಾನದ ರಕ್ಷಣಾ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳು ಅತ್ಯಾಧುನಿಕ ವೈಜ್ಞಾನಿಕ ಮೂಲಸೌಕರ್ಯ ಸೃಷ್ಟಿಸಿವೆ. ಅತ್ಯಂತ ಅಪಾಯಕಾರಿ ರೋಗಕಾರಕ ವೈರಸ್‌ಗಳ (Virus) ಕುರಿತು ಸಂಶೋಧನೆ ನಡೆಸುವ ಕೇಂದ್ರ ಇದಾಗಿದ್ದು, ಈ ಪ್ರಯೋಗಾಲಯ ರಾವಲ್ಪಿಂಡಿಯ ಚಾಲಾ ಕಂಟೋನ್ಮೆಂಟ್ ಪ್ರದೇಶದಲ್ಲಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: 10 ಬಾರಿ ಶಾಸಕರಾಗಿದ್ದ ಪ್ರಭಾವಿ ನಾಯಕ ಕಾಂಗ್ರೆಸ್‌ಗೆ ಗುಡ್‌ಬೈ – BJP ಸೇರ್ಪಡೆ
2 ಸ್ಟಾರ್ ಹೊಂದಿರುವ ಜನರಲ್‌ವೊಬ್ಬರು ಇದರ ನೇತೃತ್ವ ವಹಿಸಿದ್ದಾರೆ. `ಬಯೋಸೇಫ್ಟಿ ಲೆವೆಲ್ 4′ (BSL-4) ಘಟಕ ಇದಾಗಿದ್ದು, ಇಲ್ಲಿ ಅತಿ ಅಪಾಯಕಾರಿ ಹಾಗೂ ಹೆಚ್ಚು ಸೋಂಕು ಹರಡುವ ವೈರಸ್‌ಗಳನ್ನು ಪರೀಕ್ಷಿಸಿ, ಅಭಿವೃದ್ಧಿಪಡಿಸಲಾಗುತ್ತದೆ. ಸಾಮಾನ್ಯವಾಗಿ BSL-4 ಲ್ಯಾಬ್‌ಗಳನ್ನು ಮಾರಣಾಂತಿಕ ಸೋಂಕುಗಳಿಗೆ ಕಾರಣವಾಗುವ ಸೋಂಕು ಕಾರಕಗಳ ಕುರಿತ ಅಧ್ಯಯನಕ್ಕೆ ಬಳಸಲಾಗುತ್ತದೆ. ಇಂತಹ ರೋಗಗಳಿಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಸದ್ಯ ಇದು ವೈಜ್ಞಾನಿಕ ಪ್ರಯೋಗವಲ್ಲ, ವೈರಸ್‌ಗಳನ್ನು ಅಸ್ತ್ರ ಮಾಡಿಕೊಳ್ಳುವ ಕೆಲಸ ಎಂದು ಜೈವಿಕ ಅಸ್ತçಗಳ ಪರಿಣತರು ಎಚ್ಚರಿಸಿರುವುದಾಗಿ ವರದಿ ತಿಳಿಸಿದೆ.