– ನೆರೆಮನೆಯ ಗೆಳೆಯನ ಜೊತೆ ಸೇರಿ ಕೃತ್ಯ
– ಸಂಬಂಧ ನೋಡಿ ಕೆನ್ನೆಗೆ ಬಾರಿಸಿದ್ದಕ್ಕೆ ರಿವೇಂಜ್
ಗಾಜಿಯಾಬಾದ್: ತಾಯಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಅಪ್ತಾಪ್ತ ಮಗಳು ಹಾಗೂ ಆಕೆಯ 19 ವರ್ಷದ ಗೆಳೆಯನನ್ನು ಬಂಧಿಸಿದ್ದಾರೆ. ಅಪ್ತಾಪ್ತ ಮಗಳು, ಆಕೆಯ ಗೆಳೆಯನ ಜೊತೆ ಸೇರಿ ಬ್ರಿಜ್ ವಿಹಾರ್ ನಲ್ಲಿರುವ ಮನೆಯಲ್ಲಿ ತಾಯಿಯ ಕಣ್ಣಿಗೆ ಮೆಣಸಿನ ಪುಡಿ ಎರಚಿ ನಂತರ ಹಗ್ಗದಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ಅಪ್ರಾಪ್ತೆ ತನ್ನ ಗೆಳೆಯ ಫೆ.14ರಂದು ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ಹೀಗಾಗಿ ತನ್ನ ಮಗಳು ಬೇರೊಬ್ಬನ ಜೊತೆ ಸಂಬಂಧ ಹೊಂದಿರುವುದು ಗೊತ್ತಾಗಿದೆ. ಈ ವಿಚಾರ ಅಪ್ರಾಪ್ತೆಯ ತಾಯಿಯ ಗಮನಕ್ಕೆ ಬಂದ ಕೂಡಲೇ ಸಿಟ್ಟುಗೊಂಡು ಆಕೆಯ ಕೆನ್ನೆಗೆ ಬಾರಿಸಿದ್ದಾರೆ.
Advertisement
Advertisement
ಮೃತ ದುರ್ದೈವಿ ತಾಯಿ ದೆಹಲಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ನಡೆದಾಗ ಮೃತಳ ಪತಿ ಬಿಹಾರದ ವೈಶಾಲಿಯಲ್ಲಿದ್ದರು. ಹೀಗಾಗಿ ವಿಷಯ ತಿಳಿದ ತಕ್ಷಣ ವಾಪಸ್ ಬಂದು ಲಿಂಕ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ನೆರೆಮನೆಯ ಜಿತೇಂದ್ರ ಕುಮಾರ್ ತನ್ನ ಮಗಳ ಜೊತೆ ಸೇರಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದರೆ, ಆಕೆಯ ಗೆಳೆಯ 6ನೇ ತರಗತಿ ನಂತರ ಶಾಲೆ ಬಿಟ್ಟಿದ್ದಾನೆ.
Advertisement
ಫೆ.14ರಂದು ಆರೋಪಿ ಜಿತೇಂದ್ರ ಕುಮಾರ್, ಬಾಲಕಿಯ ಮನೆಗೆ ಬಂದು ಪ್ರೇಮಿಗಳ ದಿನವನ್ನು ಆಚರಿಸಿದ್ದಾನೆ. ಈ ವಿಚಾರ ಬಾಲಕಿಯ ತಾಯಿಯ ಗಮನಕ್ಕೆ ಬಂದು ಅವರು ಸಿಟ್ಟಿಗೆದ್ದಿದ್ದಾರೆ. ಅಲ್ಲದೆ ಮೊದಲು ತನ್ನ ಮಗಳ ಕೆನ್ನೆಗೆ ಹೊಡೆದು ನಂತರ ಜಿತೇಂದ್ರ ಕುಮಾರ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿತೇಂದ್ರ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಆತ ಮನೆಗೆ ಬಂದ ತಕ್ಷಣ ನನ್ನನ್ನು ಭೇಟಿಯಾಗಲಿ. ಅವನ ಜೊತೆ ಸ್ವಲ್ಪ ಮಾತನಾಡಲು ಇದೆ ಎಂದು ಹೇಳಿ ವಾಪಸ್ ಆಗಿದ್ದಾರೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದ ಮಗಳು:
ತನ್ನ ಕೆನ್ನೆಗೆ ಹೊಡೆದ ಸಿಟ್ಟಿನ ಸೇಡು ತೀರಿಸಿಕೊಳ್ಳಲು ಮಗಳು ಕಾದು ಕುಳಿತಿದ್ದಳು. ಹೀಗೆ ಒಂದು ದಿನ ಬಾಲಕಿ ತನ್ನ ಗೆಳೆಯ ಜಿತೇಂದ್ರ ಕುಮಾರ್ ಗೆ ಕರೆ ಮಾಡಿ ಕೆನೆಗೆ ಬಾರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲೇಬೇಕು. ಅದಕ್ಕಾಗಿ ಆಕೆಯ ಕಣ್ಣಿಗೆ ಖಾರದ ಪುಡಿ ಎರಚುವ ಪ್ಲಾನ್ ಮಾಡಿದರು.
ಇತ್ತ ಮನೆಗೆ ಬಂದ ಜಿತೇಂದ್ರ ಕುಮಾರ್ ಕೆನ್ನೆಗೂ ಬಾಲಕಿಯ ತಾಯಿ ಬಾರಿಸಿದ್ದಾರೆ. ಇದರಿಂದ ಮೊದಲೇ ಸಿಟ್ಟು ಹಾಗೂ ಸೇಡು ತೀರಿಸಿಕೊಳ್ಳಲು ರೆಡಿಯಾಗಿದ್ದ ಬಾಲಕಿ, ಕೂಡಲೇ ಅಡುಗೆ ಮನೆಗೆ ತೆರಳಿ ಖಾರದ ಪುಡಿ ತೆಗೆದುಕೊಂಡು ಬಂದಿದ್ದಾಳೆ. ನಂತ ಬಾಲಕಿ ಹಾಗೂ ಆಕೆಯ ಗೆಳೆಯ ಸೇರಿ ಮಹಿಳೆಯ ಮುಖಕ್ಕೆ ಎರಚಿದ್ದಾರೆ. ಆಗ ಮಹಿಳೆಗೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಇಬ್ಬರೂ ಸೇರಿ ಹಗ್ಗದಿಂದ ಕತ್ತು ಹಿಸುಕಿದ್ದಾರೆ.
ಆ ನಂತರ ಕೂಡಲೇ ಕಥೆಯೊಂದನ್ನು ಕಟ್ಟಿದ ಬಾಲಕಿ, ನೆರೆಮನೆಯವರನ್ನು ಕರೆದು, ಅಮ್ಮ ಸಡನ್ ಆಗಿ ಬಿದ್ದಿದ್ದಾರೆ. ಅಲ್ಲದೆ ಪ್ರಜ್ಞೆ ತಪ್ಪಿದ್ದಾರೆ ಎಂದಿದ್ದಾಳೆ. ಬಳಿಕ ಸ್ಥಳಿಯರೆಲ್ಲರು ಸೇರಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದ್ರೂ, ಅದಾಗಲೇ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ತಪ್ಪೊಪ್ಪಿಕೊಂಡ ಅಪ್ರಾಪ್ತೆ:
ಇತ್ತ ಕಾನ್ಸ್ ಸ್ಟೇಬಲ್ ಮೃತಪಟ್ಟ ವಿಚಾರ ತಿಳಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಮೃತಳ ಮಗಳು ಹಾಗೂ ಆಕೆಯ ಗೆಳೆಯನನ್ನು ಪ್ರಶ್ನಿಸಿದಾಗ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ನಮ್ಮಿಬ್ಬರ ಮಧ್ಯೆ ಸಂಬಂಧ ಇರುವ ಬಗ್ಗೆ ತಾಯಿ ಫೆಬ್ರವರಿ 14ರಂದು ನೋಡಿದ್ದರಿಂದ ಈ ಕೃತ್ಯ ಎಸಗಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ಇತ್ತ ಮೃತಳ ಪತಿ ನೀಡಿದ ದೂರಿನಂತೆ ಅಪ್ರಾಪ್ತ ಮಗಳು ಹಾಗೂ ಆಕೆಯ ಗೆಳೆಯನ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಕೊಲೆಗೆ ಬಳಸಿದ ಖಾರದ ಪುಡಿ ಪ್ಯಾಕೆಟ್ ಹಾಗೂ ಹಗ್ಗವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.