ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಭೀಕರ ಹತ್ಯೆ – ಈಕ್ವೆಡಾರ್‌ ಬೀಚ್‌ನಲ್ಲಿ ನಡೆದಿದ್ದೇನು?

Public TV
2 Min Read
Girl Students

ವಾಷಿಂಗ್ಟನ್‌: ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರು ಅಮೆರಿಕದ (USA) ಈಕ್ವೆಡಾರ್‌ ಬೀಚ್‌ನಲ್ಲಿ (Ecuador Beach) ಭೀಕರ ಹತ್ಯೆಗೀಡಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಂತರ ಸಂತ್ರಸ್ತರು ಕಳುಹಿಸಿದ್ದ ಸಂದೇಶ ಬಹಿರಂಗವಾಗಿದೆ.

ಪ್ರವಾಸಕ್ಕೆಂದು ತೆರಳಿದ್ದ ಡೆನಿಸ್ ರೆಯ್ನಾ (19) ಯುಲಿಯಾನಾ ಮಾಸಿಯಾಸ್ (21) ಹಾಗೂ ನಯೆಲಿ ತಫಿಯಾ (22) ಯುವತಿಯರು ಏಪ್ರಿಲ್‌ 4ರಂದು ನಾಪತ್ತೆಯಾಗಿ, ಏಪ್ರಿಲ್‌ 5 ರಂದು ಹತ್ಯೆಗೀಡಾಗಿದ್ದರು. ಆದ್ರೆ ಅದಕ್ಕೂ ಮುನ್ನ ತಮ್ಮ ಆಪ್ತರಿಗೆ ʻಇಲ್ಲೇನಾದರು ಘಟನೆ ಸಂಭವಿಸಬಹುದು ಅನ್ನಿಸುತ್ತಿದೆʼ ಅಂತಾ ಸಂದೇಶ ಕಳುಹಿಸಿರುವುದು ಇದೀಗ ಬೆಳಕಿಗೆ ಬಂದಿದೆ.

Girl Students 1

ಹತ್ಯೆಯಾವದರಲ್ಲಿ ಮಾಸಿಯಾಸ್ ಗಾಯಕಿಯಾಗಿದ್ದರು, ಮೃತ ನಯೆಲಿ ತಫಿಯಾ ತಾಯಿ ಹಾಗೂ ಡೆನಿಸ್‌ ರೆಯ್ನಾ ಕೃಷಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದರು (Agricultural Engineering Student). ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

ಮಾಹಿತಿ ಪ್ರಕಾರ, ಇದೇ ಏಪ್ರಿಲ್‌ 5 ರಂದು ಮೂವರು ಯುವತಿಯರನ್ನ ಚಿತ್ರಹಿಂಸೆ ನೀಡಿ ಯಾರೋ ಹತ್ಯೆ ಮಾಡಿದ್ದಾರೆ. ನಂತರ ಈಕ್ವೆಡಾರ್‌ನ ಕ್ವಿನಿಂಡೆ ಬಳಿಯ ಎಸ್ಮೆರಾಲ್ಡಾಸ್ ನದಿಯ ಬಳಿ ಹೂತುಹಾಕಿದ್ದಾರೆ. ಈ ಸ್ಥಳದಲ್ಲಿ ನಾಯಿಯೊಂದು ದುರ್ವಾಸನೆ ಹೊರಬರುತ್ತಿರುವುದನ್ನು ಗುರುತಿಸಿದೆ. ಇದನ್ನು ಕಂಡ ಮೀನುಗಾರರ ಗುಂಪು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ಸುಡಾನ್ ಸೈನಿಕರ ಸಂಘರ್ಷ – 200ಕ್ಕೆ ಏರಿದ ಸಾವಿನ ಸಂಖ್ಯೆ, ಸಾವಿರಾರು ಜನರಿಗೆ ಗಾಯ

Girl Students 2

ಸಾವಿಗೂ ಮುನ್ನ ಏಪ್ರಿಲ್‌ 4ರಂದು ಸಂತ್ರಸ್ತೆ ತಫಿಯಾ ತನ್ನ ಸಹೋದರನಿಗೆ ತಾನಿರುವ ಲೈವ್‌ ಲೊಕೇಶನ್‌ ನೊಂದಿಗೆ ಸುಮ್ಮನೆ ಕಳುಹಿಸಿರುವುದಾಗಿ ವಾಟ್ಸಪ್‌ ಸಂದೇಶ ಕಳುಹಿಸಿದ್ದಾಳೆ. ಮೃತ ರೇನಾ ಸಹ ತಾನು ನಾಪತ್ತೆಯಾಗುವ ಗಂಟೆಗಳಿಗೂ ಮೊದಲು ತನ್ನ ಸ್ನೇಹಿತನಿಗೆ ʻಇಲ್ಲೇನೋ ಆಗಲಿದೆ ಅಂತಾ ಅನಿಸುತ್ತಿದೆ. ನನಗೆ ಏನಾದ್ರೂ ಸಂಭವಿಸಬಹುದು. ಆದ್ರೆ ನೆನಪಿರಲಿ ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆʼ ಅಂತಾ ಸಂದೇಶ ಕಳುಹಿಸಿದ್ದಾಳೆ. ಇದು ಆಕೆಯ ಹತ್ಯೆಯ ನಂತರ ಬೆಳಕಿಗೆ ಬಂದಿದೆ.

ಅವರನ್ನ ಸಮಾಧಿ ಮಾಡಿ ಹೂತುಹಾಕುವುದಕ್ಕೂ ಮುನ್ನ ಬಾಯಿಗೆ ಬಟ್ಟೆ ತುರುಕಲಾಗಿತ್ತು. ಅವರು ಮೃತಪಟ್ಟ ಸ್ಥಳದಲ್ಲಿ ಅವರ ಬೀಚ್ ಉಡುಪುಗಳು, ಸ್ನಾನದ ಸೂಟ್‌ಗಳು, ಲಘು ಉಡುಪುಗಳು, ಶಾರ್ಟ್ಸ್‌ಗಳನ್ನ ಕ್ವಿನಿಂಡೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂವರ ಮೊಬೈಲ್‌ ಫೋನ್‌ಗಳು ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ.

Share This Article