ಚಿಕನ್ ಇಷ್ಟ ಪಡುವವರಿಗೆ ‘ಚಿಲ್ಲಿ ಚಿಕನ್’ ತುಂಬಾ ಇಷ್ಟ. ತಮಗೆ ಇಷ್ಟವಾದ ರುಚಿಯನ್ನು ಹುಡುಕಿಕೊಂಡು ಜನರು ಹೋಟೆಲ್‍ಗೆ ಹೋಗುತ್ತಾರೆ. ಕೆಲವೊಮ್ಮೆ ಎಲ್ಲ ಹೋಟೆಲ್‍ನಲ್ಲಿಯೂ ನಮಗೆ ಇಷ್ಟವಾದ ಟೇಸ್ಟ್ ಸಿಗುವುದಿಲ್ಲ. ಆದರೆ ಮನೆಯಲ್ಲಿ ನಿಮಗೆ ಇಷ್ಟವಾದ ಅಡುಗೆ ಮಾಡಿಕೊಂಡು ತಿಂದ್ರೆ ನಿಮ್ಮ ಮನಸ್ಸಿಗೂ ತೃಪ್ತಿ, ನಿಮಗೆ ಇಷ್ಟವಾದ ಟೇಸ್ಟ್ ಸಹ ಸಿಗುತ್ತೆ. ಅದಕ್ಕೆ ಇಂದು ‘ಚಿಲ್ಲಿ ಚಿಕನ್’ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಈ ರೆಸಿಪಿಯನ್ನು ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
* ಚಿಕನ್ ಪೀಸ್ – 2 ಕಪ್
* ಉಪ್ಪು – 1 ಟೀಸ್ಪೂನ್
* ಕಾಳುಮೆಣಸು – 1/2 ಟೀಸ್ಪೂನ್
* ಮೊಟ್ಟೆ – 1
* ಜೋಳದ ಹಿಟ್ಟು – 100ಗ್ರಾಂ
* ಕಟ್ ಮಾಡಿದ ದೊಣ್ಣೆ ಮೆಣಸಿನಕಾಯಿ – 1
* ಕಟ್ ಮಾಡಿದ ಈರುಳ್ಳಿ – 1 ಕಪ್
Advertisement
Advertisement
ಚಿಲ್ಲಿ ಸಾಸ್‍ಗೆ ಸಾಮಗ್ರಿ
* ಜಜ್ಜಿದ ಬೆಳ್ಳುಳ್ಳಿ – 3
* ಕೆಂಪು ಮೆಣಸು – 1
* ಸೋಯಾ ಸಾಸ್ – 3 ಟೀಸ್ಪೂನ್
* ಟೊಮೆಟೊ ಸಾಸ್ – 2 ಟೀಸ್ಪೂನ್
* ನೀರು – 1/2 ಕಪ್
Advertisement
ಮಾಡುವ ವಿಧಾನ:
* ಚಿಕನ್ ತೊಳೆದು ಉದ್ದುದ್ದವಾಗಿ ಕತ್ತರಿಸಿ, ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಉದುರಿಸಿ ಮಿಕ್ಸ್ ಮಾಡಿ. ಒಂದು ಬಟಲಿನಲ್ಲಿ ಮೊಟ್ಟೆ ಹಾಕಿ ಪೇಸ್ಟ್ ರೀತಿ ರೆಡಿ ಮಾಡಿಕೊಳ್ಳಿ.
* ಈಗ ತವಾವನ್ನು ಬಿಸಿ ಮಾಡಲು ಇಟ್ಟು ಅದಕ್ಕೆ ಎಣ್ಣೆ ಹಾಕಿ, ಚಿಕನ್ ತುಂಡುಗಳನ್ನು ಮೊಟ್ಟೆಯಲ್ಲಿ ಅದ್ದಿ, ನಂತರ ಜೋಳದ ಹಿಟ್ಟಿನಲ್ಲಿ ಒಮ್ಮೆ ಹೊರಳಾಡಿಸಿ ತವಾಕ್ಕೆ ಹಾಕಿ ಸ್ವಲ್ಪ ಫ್ರೈ ಮಾಡಿ.
* ಚಿಕನ್ ಸ್ವಲ್ಪ ರೋಸ್ಟ್ ಆದ ಬಳಿಕ ಅದಕ್ಕೆ ಕಟ್ ಮಾಡಿದ ಕೆಂಪು ಹಾಗೂ ಹಸಿರುದೊಣ್ಣೆ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿ ಚಿಕನ್ ಬೆಂದ ಮೇಲೆ ಅದನ್ನು ಒಂದು ಪಾತ್ರೆಯಲ್ಲಿ ತೆಗದಿಡಿ.
* ಈಗ ಅದೇ ಪ್ಯಾನ್‍ಗೆ ಜಜ್ಜಿದ ಬೆಳ್ಳುಳ್ಳಿ, ಕೆಂಪು ಮೆಣಸು, ಸೋಯಾ ಸಾಸ್, ಟೊಮೆಟೊ ಸಾಸ್ ಅಥವಾ ಪೇಸ್ಟ್ ಹಾಗೂ ನೀರು ಹಾಕಿ ಮಿಶ್ರಣ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ.
* ಈ ಮಿಶ್ರಣವನ್ನು ಗ್ರೇವಿ ರೀತಿ ಮಾಡಿ, ಫ್ರೈ ಮಾಡಿಟ್ಟ ಚಿಕನ್ ಹಾಗೂ ದೊಣ್ಣೆಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿದರೆ ‘ಚಿಲ್ಲಿ ಚಿಕನ್’ ಸರ್ವ್ ಮಾಡಲು ರೆಡಿ.