ಈ ಬೇಸಿಗೆಯಲ್ಲಿ ತಾಪಮಾನ ದಿನೇ ದಿನೇ ಹೆಚ್ಚಾಗುವುದರೊಂದಿಗೆ ಪ್ರತಿಯೊಬ್ಬರೂ ಆಯಾಸ, ಬೆವರುವಿಕೆಯಿಂದ ಬಳಲುತ್ತಾರೆ. ಈ ವೇಳೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಅಗತ್ಯ. ಈ ಸಮಯ ಕೇವಲ ನೀರು ಏಕೆ? ನಾಲಿಗೆಗೆ ವಿವಿಧ ರೀತಿಯ ರುಚಿಯನ್ನು ನೀಡುವ ಮೂಲಕವೂ ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಬಹುದು. ನಾವಿಂದು ಹೇಳಿಕೊಡುವ ರೆಸಿಪಿ ನಿಮ್ಮ ನಾಲಿಗೆಗೆ ಹೊಸ ರುಚಿಯನ್ನು ನೀಡುವುದಲ್ಲದೇ ರಿಫ್ರೆಶಿಂಗ್ ಅನುಭವ ನೀಡುತ್ತದೆ. ಹಾಗಿದ್ದರೆ ಈ ಕೂಡಲೇ ಮ್ಯಾಂಗೋ ಚಿಲ್ಲಿ ಸೋಡಾ (Mango Chilli Soda) ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಹಸಿರು ಮೆಣಸಿನಕಾಯಿ – 2
ಮಾವಿನ ಹಣ್ಣಿನ ರಸ – 1 ಕಪ್
ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
ಸೋಡಾ – 2 ಕಪ್
ಕಲ್ಲುಪ್ಪು – ಕಾಲು ಟೀಸ್ಪೂನ್ ಇದನ್ನೂ ಓದಿ: ಬಿಸಿಲಿನ ಝಳಕ್ಕೆ ತಂಪು ತಂಪು ಸ್ಟ್ರಾಬೆರಿ ಲೆಮನೇಡ್ ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹಸಿರು ಮೆಣಸಿನಕಾಯಿಗಳನ್ನು ಸೀಳಿ.
* ಒಂದು ಗ್ಲಾಸ್‌ಗೆ ಮಾವಿನ ಹಣ್ಣಿನ ರಸವನ್ನು ಹಾಕಿ, ಅದಕ್ಕೆ ಚಿಲ್ಲಿ ಫ್ಲೇಕ್ಸ್ ಹಾಗೂ ಕಲ್ಲುಪ್ಪನ್ನು ಸೇರಿಸಿ ಮಿಶ್ರಣ ಮಾಡಿ.
* ಅದಕ್ಕೆ ಸೋಡಾವನ್ನು ಸುರಿದು ಮಿಶ್ರಣ ಮಾಡಿ.
* ಈಗ ಸೀಳಿದ ಮೆಣಸಿನಕಾಯಿಯನ್ನು ಗ್ಲಾಸ್‌ನ ರಿಮ್‌ನಲ್ಲಿ ಇರಿಸಿ.
* ಈಗ ಮ್ಯಾಂಗೋ ಚಿಲ್ಲಿ ಸೋಡಾವನ್ನು ಫ್ರಿಜ್‌ನಲ್ಲಿಟ್ಟು ತಣ್ಣಗಾಗಿಸಿ. ಇಲ್ಲವೇ ಐಸ್‌ಕ್ಯೂಬ್ ಸೇರಿಸಿ ತಕ್ಷಣಕ್ಕೂ ಸವಿಯಬಹುದು. ಇದನ್ನೂ ಓದಿ: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತೆ ಕೇರಳ ಸ್ಟೈಲ್ ಕುಲುಕ್ಕಿ ಶರ್ಬತ್