ಪುಟ್ಟ ಮಕ್ಕಳು ಯಾವಾಗಲೂ ಸಿಹಿ ಸಿಹಿಯಾದ ತಿಂಡಿಗಳಿಗೆ ಹಠ ಹಿಡಿಯುತ್ತಾರೆ. ಸಾಮಾನ್ಯ ಅಡುಗೆಗಳನ್ನು ತಳ್ಳಿ ತಮಗೆ ಪುಟ್ಟ ಪುಟ್ಟ ದೋಸೆ, ಇಡ್ಲಿಗಳನ್ನು ಮಾಡಿ ಕೊಡುವಂತೆ ಕೇಳುತ್ತಾರೆ. ಮಕ್ಕಳನ್ನು ಸಮಾಧಾನಪಡಿಸೋದು ಪ್ರತಿಯೊಬ್ಬ ಪೋಷಕರಿಗೂ ಸವಾಲು. ಮಕ್ಕಳಿಗೆಂದೇ ವಿಶೇಷ ಆಹಾರ ತಯಾರಿಸೋದು ಅಮ್ಮಂದಿರಿಗೂ ಕಷ್ಟ. ಈ ಪುಟ್ಟ ಮಕ್ಕಳಿಗಾಗಿ ನಾವಿದು ಸಿಂಪಲ್ ರೆಸಿಪಿಯೊಂದನ್ನು ಹೇಳಿಕೊಡುತ್ತೇವೆ. ನಾವು ಸಾಮಾನ್ಯವಾಗಿ ಮಾಡೋ ದೋಸೆ ಹಿಟ್ಟನ್ನೇ ಬಳಸಿ ಸಿಹಿ ಸಿಹಿಯಾದ ಬಾಳೆಹಣ್ಣಿನ ಪುಟ್ಟ ಪುಟ್ಟ ದೋಸೆಗಳನ್ನು ಮಾಡಿದರೆ ಮಕ್ಕಳು ಇಷ್ಟಪಟ್ಟು ಸವಿಯುತ್ತಾರೆ.
Advertisement
ಬೇಕಾಗುವ ಪದಾರ್ಥಗಳು:
ರೆಡಿಮೇಡ್ ದೋಸೆ ಹಿಟ್ಟು – ಅರ್ಧ ಕಪ್ (ಮನೆಯಲ್ಲಿ ಮಾಡಿದ ಸಾಮಾನ್ಯ ದೋಸೆ ಹಿಟ್ಟನ್ನೂ ಬಳಸಬಹುದು)
ಕಿವುಚಿದ ಬಾಳೆಹಣ್ಣು – ಅರ್ಧ ಕಪ್
ಸಕ್ಕರೆ – 2 ಟೀಸ್ಪೂನ್
ತುಪ್ಪ ಅಥವಾ ಬೆಣ್ಣೆ – ದೋಸೆ ಕಾಯಿಸಲು ಬೇಕಾಗುವಷ್ಟು ಇದನ್ನೂ ಓದಿ: ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೋಸೆ ಹಿಟ್ಟಿಗೆ ಕಿವುಚಿದ ಬಾಳೆಹಣ್ಣು ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ರುಚಿ ಹಾಗೂ ಸ್ಥಿರತೆ ನೋಡಿಕೊಂಡು ಉಪ್ಪು ಹಾಗೂ ನೀರನ್ನು ಸೇರಿಸಿಕೊಳ್ಳಬಹುದು.
* ಈಗ ದೋಸೆಯ ತವಾವನ್ನು ಬಿಸಿ ಮಾಡಿ, 1 ಟೀಸ್ಪೂನ್‌ನಷ್ಟು ತುಪ್ಪ ಅಥವಾ ಬೆಣ್ಣೆಯನ್ನು ಸವರಿ.
* ಅದರ ಮೇಲೆ ಪುಟ್ಟ ಪುಟ್ಟ ದೋಸೆಗಳನ್ನು ಹರಡಿಕೊಳ್ಳಿ ಹಾಗೂ ಸ್ವಲ್ಪ ಸ್ವಲ್ಪವೇ ಬೆಣ್ಣೆ ಅಥವಾ ತುಪ್ಪವನ್ನು ಹಾಕಿ.
* ಕಾವಲಿ ಮುಚ್ಚಿ, ಮಧ್ಯಮ ಉರಿಯಲ್ಲಿ ದೋಸೆಗಳನ್ನು 1-2 ನಿಮಿಷ ಬೇಯಿಸಿಕೊಳ್ಳಿ.
* ದೋಸೆಗಳನ್ನು ಮಗುಚಿ ಹಾಕಿ ಮತ್ತೆ 1 ನಿಮಿಷ ಬೇಯಿಸಿಕೊಳ್ಳಿ.
* ಇದೀಗ ಮಕ್ಕಳ ಫೇವ್ರೆಟ್ ಸಿಹಿ ಸಿಹಿ ಬಾಳೆಹಣ್ಣಿನ ದೋಸೆ ತಯಾರಾಗಿದ್ದು, ಬಿಸಿ ಬಿಸಿಯಾಗಿ ಸವಿಯಲು ನೀಡಿ. ಇದನ್ನೂ ಓದಿ: ಬಾದಾಮಿ ಹಿಟ್ಟು ಬಳಸಿ ಮಾಡಿ ಟೇಸ್ಟಿ ಪ್ಯಾನ್ ಕೇಕ್