ರಾಂಚಿ: ಜಾರ್ಖಂಡ್‍ನ ಕೈಗಾರಿಕಾ ಪಟ್ಟಣ ಜಮ್‍ಶೆಡಪುರ ಬಳಿಯ ಪೋಚ್ಪಾಣಿ ಎಂಬ ಹಳ್ಳಿಯೊಂದರಲ್ಲಿ ಶಾಲೆಗೆ ಮಕ್ಕಳು ಮಾವೋವಾದಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಲ್ಲು ಬಾಣವನ್ನು ತೆಗೆದುಕೊಂದು ಹೋಗುತ್ತಾರೆ.
ಪೋಚ್ಪಾಣಿಯು ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದ ಗಡಿಭಾಗದಲ್ಲಿದೆ. ಇದೊಂದು ಬುಡಕಟ್ಟು ಜನಾಂಗದವರು ವಾಸಿಸುವ ಸ್ಥಳವಾಗಿದ್ದು, ಇಲ್ಲಿ ಮಾವೋವಾದಿಗಳ ಕಾಟ ತುಸು ಹೆಚ್ಚಾಗಿಯೇ ಇರುತ್ತದೆ. ಈ ಭಾಗದಿಂದ ಶಾಲೆಗೆ ಹೋಗಬೇಕು ಎಂದರೆ ದಟ್ಟ ಅರಣ್ಯವನ್ನು ದಾಟಿ ಹೋಗಬೇಕು ಅಲ್ಲಿ ಮಾವೋವಾದಿಗಳು ಇರುತ್ತಾರೆ. ಅವರ ಭಾಷೆ ನಮಗೆ ಅರ್ಥವಾಗೋಲ್ಲ. ಅವರು ಬಿಲ್ಲು ಬಾಣಕ್ಕೆ ಹೆದರುತ್ತಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
Advertisement
ಮಾವೋವಾದಿಗಳು ಯಾವಾಗ ಆಕ್ರಮಣ ಮಾಡುತ್ತಾರೆ ಅಂತಾ ಗೊತ್ತಾಗಲ್ಲ. ಅವರಿಂದ ರಕ್ಷಣೆಗಾಗಿ ಈ ಭಾಗದ ಮಕ್ಕಳು ಶಾಲೆಗೆ ಹೋಗುವಾಗ ತಮ್ಮೊಡನೆ ಬಿಲ್ಲು ಬಾಣವನ್ನು ಕೊಂಡೊಯ್ಯುತ್ತಾರೆ ಎಂದು ಬುಡಕಟ್ಟಿನ ಬಾಲಕನೊಬ್ಬ ಹೇಳುತ್ತಾನೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews