– ಬಸ್ ಇಲ್ಲದೆ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ
ಯಾದಗಿರಿ: ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವರದಾನವಾಗಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳಿಗೆ ಮಾತ್ರ ಇದು ಅಕ್ಷರಶಃ ಶಾಪವಾಗಿ ಪರಿಣಮಿಸಿದೆ. ಜಿಲ್ಲೆಯ ಸೈದಾಪುರ, ವಡಗೇರಾ, ಗುರುಮಿಠಕಲ್ ಭಾಗದ ಮಕ್ಕಳು ಶಾಲೆಗೆ ಹೋಗಬೇಕಾದರೆ, ಜೀವ ಕೈಯಲ್ಲಿಡಿದು ಸುಮಾರು 7-8 ಕಿಲೋಮೀಟರ್ ಪ್ರಯಾಣ ಮಾಡಬೇಕಾಗಿದೆ.
Advertisement
ಹೌದು, ಗ್ರಾಮಗಳಲ್ಲಿ ಬಸ್‍ಗಳ ಅಭಾವ ಇರುವುದರಿಂದ ಮಕ್ಕಳು ಮೂರು ಗಾಲಿ ಆಟೋದ ಟಾಪ್ ಮೇಲೆ ಕುಳಿತು ಶಾಲೆಗೆ ಬರಬೇಕಾಗಿದೆ. ಆಟೋದ ಮೇಲೆ ಯಾವುದೇ ಸೇಫ್ಟಿ ಇಲ್ಲದೆ, ನೇತಾಡುತ್ತಾ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ
Advertisement
Advertisement
ಇದು ಕೇವಲ ಇಂದು ನಿನ್ನೆ ಸಮಸ್ಯೆ ಅಷ್ಟೇ ಅಲ್ಲ. ಯಾದಗಿರಿ ಜಿಲ್ಲೆಯ ಬಹುತೇಕ ಹಳ್ಳಿಗಳು ಇನ್ನೂ ಬಸ್ ಮುಖ ಸಹ ನೋಡಿಲ್ಲ. ಇಂದಿಗೂ ಸಹ ಮಕ್ಕಳು ಶಾಲೆಗೆ ನಡೆದುಕೊಂಡು ಬರುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಪುನೀತ್ ಸಮಾಧಿಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದ ಕುಟುಂಬಸ್ಥರು