ಬೆಂಗಳೂರು: ರಾಜ್ಯ ಪಠ್ಯ ಪುಸ್ತಕದಲ್ಲಿ ಇನ್ಮುಂದೆ ಡಾ. ರಾಜ್ ಕುಮಾರ್ ಕುರಿತಾದ ಪಠ್ಯ ಇರಲಿದೆ. ಈ ವರ್ಷದಿಂದಲೇ ಶಾಲೆಯ ಮಕ್ಕಳು ರಾಜ್‍ಕುಮಾರ್ ಜೀವನ ಚರಿತ್ರೆಯನ್ನ ಓದಲಿದ್ದಾರೆ.
6ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಡಾ. ರಾಜ್ ಕುಮಾರ್ ಜೀವನ ಚರಿತ್ರೆಯ ಪಠ್ಯ ಅಳವಡಿಕೆ ಮಾಡಲಾಗುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವೇಳೆಯೆ ರಾಜ್ ಕುಮಾರ್ ಕುರಿತಾದ ಪಠ್ಯ ಅಳವಡಿಸಲಾಗುತ್ತಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಕಮಿಟಿಯಿಂದ ಈಗಾಗಲೇ ರಾಜ್ ಜೀವನದ ಪಠ್ಯ ಸೇರ್ಪಡೆಯಾಗಿದೆ.
Advertisement
ರಾಜ್ ಕುಮಾರ್ ಹುಟ್ಟು, ಬಾಲ್ಯ, ರಂಗಭೂಮಿ, ಸಿನಿಮಾ ಕ್ಷೇತ್ರದ ಸಂಪೂರ್ಣ ಸಾಧನೆಯ ಮಾಹಿತಿಯುಳ್ಳ ಪಠ್ಯ ಇರಲಿದೆ. 6 ಪುಟಗಳ ರಾಜ್ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಪತ್ರಕರ್ತ ದೊಡ್ಡ ಹುಲ್ಲೂರು ರುಕ್ಕೋಜಿ ಅವರು ಬರೆದಿರುವ ಪುಸ್ತಕದ ವಿಚಾರಗಳನ್ನ ಆಯ್ಕೆ ಮಾಡಿ ಪಠ್ಯ ರಚನೆ ಮಾಡಲಾಗಿದ್ದು, ಈ ವರ್ಷದಿಂದಲೇ ರಾಜ್ ಪಠ್ಯವನ್ನ ಮಕ್ಕಳು ಅಧ್ಯಯನ ಮಾಡಲಿದ್ದಾರೆ.
Advertisement